ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಅರಳದ ಕಮಲ! ‘ಕೈ’ಕಸರತ್ತಿಗೆ ಅವಕಾಶ!

By Staff
|
Google Oneindia Kannada News

ಪಣಜಿ : ಗೋವಾ ವಿಧಾನಸಭಾ ಚುನಾವಣೆ ಮತ ಎಣಿಕೆ ಮಂಗಳವಾರ ಮಧ್ಯಾಹ್ನ ಮುಕ್ತಾಯಗೊಂಡಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ.

ಕಾಂಗ್ರೆಸ್‌ ಮತ್ತು ಎನ್‌ಜಿಪಿ ಮೈತ್ರಿಕೂಟ 19ಸ್ಥಾನ ಗಳಿಸಿದ್ದು, ಸರ್ಕಾರ ರಚನೆಗೆ ಇಬ್ಬರು ಸದಸ್ಯರ ಕೊರತೆ ಉಂಟಾಗಿದೆ. ಆದರೂ ಸರ್ಕಾರ ರಚಿಸುವ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿದೆ.

ಗೋವಾದಲ್ಲಿ ಮೊದಲಿನಿಂದಲೂ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತಿದೆ. ಹೀಗಾಗಿಯೇ ಕಳೆದ 17ವರ್ಷಗಳಲ್ಲಿ 15 ಸರ್ಕಾರಗಳನ್ನು ಗೋವಾ ಕಂಡಿದೆ.

ಮುಖ್ಯಮಂತ್ರಿ ಪ್ರತಾಪ್‌ ಸಿಂಗ್‌ ರಾಣೆ, ಉಪ ಮುಖ್ಯಮಂತ್ರಿ ವಿಲ್‌ಫ್ರೆಡ್‌ ಡಿಸೋಜ ಫಲಿತಾಂಶವನ್ನು ಸ್ವಾಗತಿಸಿದ್ದಾರೆ. ಜೂ.2ರಂದು ಚುನಾವಣೆ ನಡೆದಿತ್ತು. 49ಜನ ಪಕ್ಷೇತರರು ಸೇರಿದಂತೆ 202 ಅಭ್ಯರ್ಥಿಗಳ ಕಣದಲ್ಲಿದ್ದರು.

ಪಕ್ಷಗಳ ಬಲಾಬಲ(ಒಟ್ಟು ಸ್ಥಾನಗಳು - -40)

  • ಕಾಂಗ್ರೆಸ್‌ ಮತ್ತು ಎನ್‌ಸಿಪಿ -19
  • ಬಿಜೆಪಿ -14
  • ಎಸ್‌ಜಿಎಫ್‌ -2
  • ಎಂಜಿಎಪಿ -2
  • ಯುಜಿಡಿಪಿ -1
  • ಇತರೆ - 2
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X