ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಪ್ಪಾಣಿಯಲ್ಲಿ ನಕಲಿ ನೋಟು ಜಾಲ : ಇಬ್ಬರ ಬಂಧನ

By Staff
|
Google Oneindia Kannada News

ಬೆಳಗಾವಿ : ನಿಪ್ಪಾಣಿಯಲ್ಲಿ ಪೊಲೀಸರು ನಕಲಿ ನೋಟು ಜಾಲವೊಂದನ್ನು ಹೊರಗೆಳೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ರಾಮಚಂದ್ರ ಸುತಾರ್‌ ಬೈಕಾಜಿ ಮತ್ತು ಸದ್ಯಕ್ಕೆ ಪುಣೆಯಲ್ಲಿರುವ ಆಂಧ್ರಪ್ರದೇಶದ ಪೋಲ ಪುರುಷೋತ್ತಮ್‌ ರಾಮಯ್ಯ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್‌ ಯಂತ್ರಗಳನ್ನು ಬಳಸಿ ಇಬ್ಬರೂ ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ.

ಬಂಧಿತರಿಂದ ಕಂಪ್ಯೂಟರ್‌, ಪ್ರಿಂಟರ್‌ ಹಾಗೂ 12,000ರೂಪಾಯಿ ಮೌಲ್ಯದ 100ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X