ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌-ಕೆ ಸಿಇಟಿ : ರ್ಯಾಂಕ್‌ ವಿಜೇತರ ಪಟ್ಟಿ ಬಹಿರಂಗ

By Staff
|
Google Oneindia Kannada News

ಬೆಂಗಳೂರು : ಕಾಮೆಡ್‌-ಕೆ ಸಿಇಟಿ ಫಲಿತಾಂಶ ಹೊರಬಿದ್ದಿದ್ದು, ವೈದ್ಯಕೀಯ ಹಾಗೂ ಇಂಜಿನೀಯರಿಂಗ್‌ನ ತಲಾ 10ರ್ಯಾಂಕ್‌ ವಿದ್ಯಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.

ಕೆಜಿಎಫ್‌ನ ಎನ್‌.ಗುರುಪ್ರಸಾದ್‌ ವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್‌ ಪಡೆದರೆ, ಮೈಸೂರಿನ ಸಾಗರ್‌.ಜಿ.ವಿ ಇಂಜಿನೀಯರಿಂಗ್‌ ವಿಭಾಗದಲ್ಲಿ ಮೊದಲ ರ್ಯಾಂಕ್‌ ಪಡೆದು ಸಾಧನೆ ಮೆರೆದಿದ್ದಾರೆ. ಗುರುಪ್ರಸಾದ್‌ 180ಅಂಕಗಳಿಗೆ 163 ಅಂಕ ಗಳಿಸಿದರೆ, ಸಾಗರ್‌ 180ಕ್ಕೆ 167ಅಂಕ ಗಳಿಸಿದ್ದಾರೆ.

ಒಟ್ಟು 20ರ್ಯಾಂಕುಗಳ ಪೈಕಿ, ಬೆಂಗಳೂರು ವಿದ್ಯಾರ್ಥಿಗಳು ಎರಡೂ ವಿಭಾಗಗಳಲ್ಲಿ ತಲಾ ಮೂರು ರ್ಯಾಂಕ್‌ ಪಡೆದಿದ್ದಾರೆ. ಉಳಿದಂತೆ ರಾಜ್ಯ ವಿವಿಧ ಭಾಗಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ವೈದ್ಯಕೀಯ ವಿಭಾಗದಲ್ಲಿ ಪುತ್ತೂರಿನ ಅರ್ಚನಾ ಪೂಜಾರಿ ತೃತೀಯ ರ್ಯಾಂಕ್‌, ಬೆಂಗಳೂರಿನ ಎನ್‌.ವಿ.ಅಂಕಿತ್‌ 6ನೇ ರ್ಯಾಂಕ್‌, ಬೆಂಗಳೂರಿನ ಕರುಣ್‌ ಶೆಟ್ಟಿ 7ನೇ ರ್ಯಾಂಕ್‌, ಹುಬ್ಬಳ್ಳಿಯ ವೆಂಕಟೇಶ್‌ ಎಸ್‌.ಕೌಲಗುಡ್ಡ 8ನೇ ರ್ಯಾಂಕ್‌, ಭದ್ರಾವತಿಯ ನಕುಲ್‌ ಆರ್‌.ಹೆರೂರ್‌ 9ನೇ ರ್ಯಾಂಕ್‌, ಬೆಂಗಳೂರಿನ ಶ್ರೀಕಾಂತ್‌ ವೆಂಕಟಕೃಷ್ಣನ್‌ 10ನೇ ರ್ಯಾಂಕ್‌ ಪಡೆದಿದ್ದಾರೆ.

ಇಂಜಿನೀಯರಿಂಗ್‌ ವಿಭಾಗದಲ್ಲಿ ಬೆಂಗಳೂರಿನ ಆರ್‌.ವಿಕಾಸ್‌ 4ನೇ ರ್ಯಾಂಕ್‌, ಬೆಂಗಳೂರಿನ ಎಸ್‌.ಸುವಿನಯ್‌ 5ನೇ ರ್ಯಾಂಕ್‌, ಗುಲ್ಬರ್ಗಾದ ಎಸ್‌.ಅನೂಷಾ ರೆಡ್ಡಿ 6ನೇ ರ್ಯಾಂಕ್‌, ಮಂಗಳೂರಿನ ಸುದೇಶ್‌ಕುಮಾರ್‌ 7ನೇ ರ್ಯಾಂಕ್‌, ಬೆಂಗಳೂರಿನ ಎನ್‌.ಶ್ವೇತಾ 8ನೇ ರ್ಯಾಂಕ್‌, ಮಂಗಳೂರಿನ ಕೆ.ರಾಮಚಂದ್ರ ಪೈ 10ನೇ ರ್ಯಾಂಕ್‌ ಪಡೆದಿದ್ದಾರೆ.

ಕಾಮೆಡ್‌-ಕೆ, ಜೂನ್‌ 4ರಂದು ಸಂಜೆ ವೆಬ್‌ಸೈಟ್‌ನಲ್ಲಿ ರ್ಯಾಂಕ್‌ ಪಟ್ಟಿ ಪ್ರಕಟಿಸಲಿದೆ.

ಜೂನ್‌ 21ರಿಂದ ಕೌನ್ಸೆಲಿಂಗ್‌ : ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜಿನೀಯರಿಂಗ್‌ ಪದವಿ ಕೋರ್ಸ್‌ಗಳಿಗೆ ಜೂನ್‌ 21ರಿಂದ ಕೌನ್ಸೆಲಿಂಗ್‌ ಆರಂಭಿಸಲಾಗುವುದು ಎಂದು ಕಾಮೆಡ್‌-ಕೆ ಪ್ರಕಟಿಸಿದೆ. ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X