ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳ್ಳಾಲ ಚುನಾವಣೆ: ಕಾಂಗ್ರೆಸ್ಸಿಗ ಖಾದರ್‌ನಿಂದ ನೀತಿ ಉಲ್ಲಂಘನೆ

By Staff
|
Google Oneindia Kannada News

ಉಳ್ಳಾಲ: ಕಾಂಗ್ರೆಸ್ಸಿನ ಯು.ಟಿ. ಖಾದರ್‌ರವರ ಮೇಲೆ ಚುನಾವಣಾ ನೀತಿ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ.

ಉಳ್ಳಾಲ ಚುನಾವಣೆಯ ಮುಖ್ಯಾಂಶಗಳು:

  • ಉಳ್ಳಾಲದ ಬಿಎಂ ಶಾಲೆಯ ಆವರಣದಲ್ಲಿ ಮೊಬೈಲ್‌ ಮಾಡಿದ ಖಾದರ್‌ರವರು, ತಮ್ಮ 10 ಜನ ಸಹಚರರೊಂಡಿಗೆ ನಿರ್ಬಂಧಿತ ಪ್ರದೇಶಕ್ಕೆ ಕಾಲಿರಿಸಲು ಯತ್ನಿಸಿದರು ಎನ್ನಲಾಗಿದೆ. ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು ಖಾದರ್‌ರವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಅಲ್ಲಲ್ಲಿ ಅಹಿತಕರ ಘಟನೆಗಳು ವರದಿಯಾಗಿದೆ.
  • ಸುಮಾರು 1,45,000 ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದ್ದು, ಸುರಕ್ಷಿತ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
  • ಕಲ್ಲಪು ಹಾಗೂ ಮದನಿನಗರ ಪ್ರದೇಶಗಳಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಪ್ರಮುಖ ಪಕ್ಷಗಳ ಕಾರ್ಯಕರ್ತರನ್ನು ಸೆರೆಹಿಡಿಯಲಾಗಿದೆ.
  • ಇನ್ನೊಂದು ಕಡೆ ಕಾರ್ಯಕರ್ತರಿಂದ 62,000 ರೂ ಹಾಗೂ ಬೆಂಗಳೂರು ನೊಂದಣಿಯಿರುವ ಟಯೋಟಾ ಇನ್ನೊವ ವಾಹನವನ್ನು ಜಫ್ತಿ ಮಾಡಲಾಗಿದೆ.
  • ಮಂಜನಾಡಿ ಬಳಿ ಹಣ ಹಂಚುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದ್ದು, 65,000 ರೂ ಹಾಗೂ ಜೀಪ್‌ವೊಂದನ್ನು ವಶಪಡಿಸಿಕೊಳ್ಳಲಾಗಿದೆ.
  • ಉಳ್ಳಾಲದಲ್ಲಿ ಸುಮಾರು 1,61,070 ಮತದಾರರಿದ್ದಾರೆ. ಇವರಲ್ಲಿ 80,000 ಪುರುಷರು ಹಾಗೂ 81,070 ಮಹಿಳೆಯರು. 140 ಮತಕೇಂದ್ರಗಳಲ್ಲಿ 56ರನ್ನು ಅತಿ ಸೂಕ್ಷ್ಮಮತಗಟ್ಟೆ ,70 ಮತ ಗಟ್ಟೆಗಳನ್ನು ಸೂಕ್ಷ್ಮ ಹಾಗೂ 14 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ.
  • ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಪ್ರಕ್ರಿಯೆಯಲ್ಲಿ ಕಣದಲ್ಲಿರುವ ಐವರು ಅಭ್ಯರ್ಥಿಗಳು ಮತ ಚಲಾಯಿಸಿದ್ದಾರೆ. ಮುಂಜಾನೆಯಲ್ಲಿ ಬೊಲಿಯೂರಿನಲ್ಲಿ ಕಾಂಗ್ರೆಸ್ಸಿನ ಯು.ಟಿ. ಖಾದರ್‌,ಉಂಚಿಳ್‌ನಲ್ಲಿ ಬಿಜೆಪಿಯ ಚಂದ್ರಶೇಖರ್‌ ಉಂಚಿಳ್‌, ಬಜಳ ದಲ್ಲಿ ಸಿಪಿಐ(ಎಂ) ನ ಬಾಲಕೃಷ್ಣ ಶೆಟ್ಟಿ ಹಾಗೂ ಜೆಡಿ(ಎಸ್‌)ನ ಅಬ್ಬೂಬಕರ್‌ ನಟೇಕಲ್‌ ಮತ ಚಲಾಯಿಸಿರುವುದಾಗಿ ವರದಿ ಬಂದಿದೆ.
  • ಮಧ್ಯಾಹ್ನ 2:30 ರ ವೇಳೆಗೆ ಶೇ 40ರಷ್ಟು ಜನ ಮತದಾನ ಮಾಡಿದ್ದರೆಂದು ತಿಳಿದು ಬಂದಿದೆ.
  • ಸುಮಾರು 1100 ಪೊಲೀಸರು, 25 ಸಂಚಾರಿ ಪೊಲೀಸ್‌ ಪಡೆ ಸೂಕ್ಷ್ಮಪ್ರದೇಶಗಳಲ್ಲಿ ಗಸ್ತು ತಿರುಗುತ್ತಾ, ಶಾಂತಿ ಕಾಪಾಡಲು ಶ್ರಮಿಸುತ್ತಿದ್ದಾರೆ.
(ಏಜನ್ಸೀಸ್‌)

ಪೂರಕ ಓದಿಗೆ
ಬಿಎಸ್‌ವೈ, ಖರ್ಗೆಗೆ ಚುನಾವಣಾ ಆಯೋಗದ ನೋಟೀಸ್‌
ಉಳ್ಳಾಲ ಉಪಚುನಾವಣೆ ಕಣದೊಳಗೆ ಯಾರ್ಯಾರಿದ್ದಾರೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X