ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್‌, ರಿಲೆಯನ್ಸ್‌ ಮೊಬೈಲ್‌ ರೋಮಿಂಗ್‌ ದರ ಇಳಿಕೆ

By Staff
|
Google Oneindia Kannada News

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಹಾಗೂ ಅನಿಲ್‌ಅಂಬಾನಿ ಒಡೆತನದ ರಿಲೆಯನ್ಸ್‌ ಇನ್ಫೋಕಾಂ ಸಂಸ್ಥೆ ಮೊಬೈಲ್‌ ರೋಮಿಂಗ್‌ ದರ ಕಡಿತಗೊಳಿಸಿವೆ.

ಜೂನ್‌3 ರಿಂದ ಜಾರಿಗೆ ಬರುವಂತೆ ಕೆಲ ನಿರ್ದಿಷ್ಟ ಪೊಸ್ಟ್‌ ಪೇಯ್ಡ್‌ ಯೋಜನೆಗಳಿಗೆ ಮಾತ್ರ ರೋಮಿಂಗ್‌ದರವನ್ನು ಕಡಿತಗೊಳಿಸಲಾಗಿದೆ. ಬಿಎಸ್ಸೆನ್ನೆಲ್‌ ಹೊಸ ರೋಮಿಂಗ್‌ ದರ 550 ರೂ.ಯೋಜನೆ ಪೋಸ್ಟ್‌ ಪೇಯ್ಡ್‌, ಗ್ರಾಹಕರಿಗೆ ಈ ಸೌಲಭ್ಯ ಲಭ್ಯ. ರಿಲೆಯನ್ಸ್‌ ರೋಮಿಂಗ್‌ ಫ್ರೀ 390, 990 ಯೋಜನೆಗಳಿಗೆ ಕೂಡ 15 ಗಂಟೆಗಳ ಕಾಲ ರೋಮಿಂಗ್‌ ಉಚಿತವಾಗಲಿದೆ.

ರಿಲೆಯನ್ಸ್‌ ಪ್ಲಾನ್‌ ಹೀಗಿದೆ:

ಇಂಡೕಯಾ ರೋಮ್‌ಫ್ರೀಪ್ಲಾನ್‌ 990 ಪ್ರಕಾರ 400 ನಿಮಿಷ ಸ್ಥಳೀಯ ಕರೆ ಹಾಗೂ 900 ನಿಮಿಷ ಒಳ ಬರುವ ರೋಮಿಂಗ್‌ ಕರೆಗಳು ಉಚಿತವಾಗಲಿದೆ. 390 ಪ್ಲಾನ್‌ ಪ್ರಕಾರ ಮೊದಲ ಐದು ತಾಸು 300 ನಿಮಿಷ ಒಳ ಬರುವ ಕರೆಗಳು ಉಚಿತ. ಈ ಅವಧಿಯಲ್ಲಿ ಹೊರ ಹೋಗುವ ಎಸ್‌ಟಿಡಿ ಕರೆಗಳಿಗೆ 40 ಪೈಸೆ ಮತ್ತು ಸ್ಥಳೀಯ ಕರೆಗಳಿಗೆ 1 ರು, ಶುಲ್ಕ ವಿಧಿಸಲಾಗಿದೆ.

ಬಿಎಸ್ಸೆನ್ನೆಲ್‌ ಪ್ಲಾನ್‌ :

550 ರೂ ಮಾಸಿಕ ಬಾಡಿಗೆಯ ಪ್ಲಾನ್‌ಗೆ ಮಾತ್ರ ರೋಮಿಂಗ್‌ ದರ ಇಳಿಕೆ ಅನ್ವಯವಾಗುತ್ತದೆ. ರೋಮಿಂಗ್‌ನಲ್ಲಿರುವಾಗ ಪ್ರತಿನಿಮಿಷಕ್ಕೆ ಒಳಬರುವ ಎಸ್‌ಟಿಡಿ ಕರೆಗಳಿಗೆ 1 ರೂ. ಹೊರಹೋಗುವ ಕರೆಗಳಿಗೆ 40 ಪೈಸೆ ವಿಧಿಸಲಾಗಿದೆ.

ಹೊಸ ಸೌಲಭ್ಯದಂತೆ 5 ಗಂಟೆಗಳ ಉಚಿತ ಟಾಕ್‌ ಟೈಂನಲ್ಲಿ ಒಳಬರುವ ಕರೆಗಳು ಉಚಿತ ಹಾಗೂ ಹೊರಹೋಗುವ ಕರೆಗಳಿಗೆ 40 ಪೈಸೆ ತೆರಬೇಕಾಗುತ್ತದೆ.

5 ಗಂಟೆಗಳ ಟಾಕ್‌ ಟೈಂ ನಂತರ ಒಳಬರುವ ಪ್ರತಿ ಕರೆಗಳಿಗೆ 1 ರೂ. ದರ ನೀಡಬೇಕು. ರೋಮಿಂಗ್‌ನಲ್ಲಿರುವಾಗ ಸ್ಥಳೀಯ ಕರೆ ಮಾಡಿದರೆ 1 ರೂ. ದರ ತೆರಬೇಕು.

ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿರವರ ಹುಟ್ಟುಹಬ್ಬದ ಕೊಡುಗೆಯಾಗಿ ಜೂನ್‌ 3 ರಿಂದ ಈ ಹೊಸ ಯೋಜನೆಗಳು ಜಾರಿಗೆ ಬರಲಿವೆ ಎಂದು ಕೇಂದ್ರದ ನೂತನ ಸಂಪರ್ಕ ಸಚಿವ ಹಾಗೂ ಡಿಎಂಕೆ ಮುಖಂಡ ಎಂ.ರಾಜಾ ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X