ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಸ್‌ಪಿಎನ್‌-ಸ್ಟಾರ್‌ನಲ್ಲಿ ಆಫ್ರೋ-ಏಷ್ಯನ್‌ ಕ್ರಿಕೆಟ್‌ ನೋಡಿ

By Staff
|
Google Oneindia Kannada News

ನವದೆಹಲಿ: ಬೆಂಗಳೂರು ಹಾಗೂ ಚೆನ್ನೈನಲ್ಲಿ ಜೂನ್‌ 5 ರಿಂದ 10 ರವರೆಗೆ ನಡೆಯಲಿರುವ ಆಫ್ರೋ-ಏಷ್ಯನ್‌ ಕ್ರಿಕೆಟ್‌ ಪಂದ್ಯಾವಳಿಗಳ ಪ್ರಸಾರದ ಹಕ್ಕನ್ನು ಇಎಸ್‌ಪಿಎನ್‌-ಸ್ಟ್ರಾರ್‌ ಸಂಸ್ಥೆ ತಮ್ಮದಾಗಿಸಿಕೊಂಡಿದೆ.

ಆಫ್ರೋ-ಏಷ್ಯನ್‌ ಕ್ರಿಕೆಟ್‌ಪ ಂದ್ಯಗಳ ಪ್ರಸಾರದ ಹಕ್ಕನ್ನು ಹೊಂದಿದ್ದ ನಿಂಬಸ್‌ ಸಂಸ್ಥೆ , ಪ್ರಮುಖ ಆಟಗಾರರ ಅಲಭ್ಯತೆಯ ಕಾರಣ ಕೊಟ್ಟು, ಕೊನೆ ಕ್ಷಣದಲ್ಲಿ ಕಣದಿಂದ ಹೊರಗುಳಿದಿದ್ದರಿಂದ ಪ್ರಸಾರದ ಹಕ್ಕು ಇಎಸ್‌ಪಿಎನ್‌ ಸ್ಟಾರ್‌ಸಂಸ್ಥೆ ಪಾಲಾಗಿದೆ.

ಆಫ್ರಿಕಾ ಹಾಗೂ ಏಷ್ಯಾ ಖಂಡಗಳ ನಡುವಿನ ಕ್ರಿಕೆಟ್‌ ಟೂರ್ನಿಯ ಆರಂಭದ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗುತ್ತಿದೆ. ಜೂನ್‌ 6ರಂದು ಮೊದಲ ಏಕದಿನ ಪಂದ್ಯನಡೆಯಲಿದ್ದು, ನಂತರ ಚೆನ್ನೈನಲ್ಲಿ ಉಳಿದೆರಡು ಪಂದ್ಯಗಳನ್ನು ಆಡಲಾಗುವುದು. ಇದಲ್ಲದೆ ಮಹಿಳೆಯ ತಂಡಗಳು ಕೂಡ ಟ್ವೆಂಟಿ-ಟ್ವೆಂಟಿ ಪಂದ್ಯವನ್ನು ಜೂನ್‌ 5ರಂದು ಆಡಲಿವೆ.

ಹಣದ ಹೊಳೆ:

ಪ್ರಶಸ್ತಿ ಗೆಲ್ಲುವ ತಂಡಕ್ಕೆ 100,000 ಡಾಲರ್‌ ಹಣ ದೊರೆಯಲಿದೆ. ಪ್ರತಿ ಪಂದ್ಯ ಗೆಲ್ಲುವ ತಂಡಕ್ಕೆ 25,000 ಡಾಲರ್‌, ಪಂದ್ಯಶ್ರೇಷ್ಠ ಪ್ರಶಸ್ತಿ ಪುರಸ್ಕೃತರಿಗೆ 5,000 ಡಾಲರ್‌ ಹಾಗೂ ಸರಣಿ ಶ್ರೇಷ್ಠ ಆಟಗಾರನಿಗೆ 10.000 ಡಾಲರ್‌ ಲಭಿಸಲಿದೆ.

ಇದಲ್ಲದೆ ಪಂದ್ಯವನ್ನಾಡುವ ಪ್ರತಿ ಆಟಗಾರ/ಗಾರ್ತಿಗೆ 5,000ಡಾಲರ್‌ ಲಭಿಸಲಿದೆ.

ಸ್ಟಾರ್‌ ಆಟಗಾರರಿಗೆ ರೆಸ್ಟ್‌!?

ದ್ರಾವಿಡ್‌, ತೆಂಡೂಲ್ಕರ್‌, ಶೋಯಿಬ್‌ ಅಕ್ತರ್‌, ಮುರಳಿಧರನ್‌, ಚಮಿಂಡಾ ವಾಸ್‌ ಹಾಗೂ ಗ್ರಹಾಂ ಸ್ಮಿತ್‌ರಂತಹ ಸ್ಟಾರ್‌ ಆಟಗಾರರ ಅನುಪಸ್ಥಿತಿಯಲ್ಲಿ ಮಹೇಲ ಜಯವರ್ಧನೆ ನೇತೃತ್ವದ ಏಷ್ಯಾ ತಂಡ ಮಾರ್ಕ್‌ ಬೌಚರ್‌ ನೇತೃತ್ವದ ಆಫ್ರಿಕಾ ತಂಡದ ವಿರುದ್ಧ ಸೆಣಸಲಿದೆ.

ಟ್ವೆಂಟಿ ಪಂದ್ಯಗಳಿಗೆ ಏಷ್ಯಾ ತಂಡದ ನಾಯಕತ್ವವನ್ನು ಪಾಕಿಸ್ತಾನದ ಶೋಯಿಬ್‌ ಮಲ್ಲಿಕ್‌ ವಹಿಸಿಕೊಂಡಿದ್ದಾರೆ. ಆಫ್ರಿಕಾ ತಂಡಕ್ಕೆ ಕೀನ್ಯಾದ ತನ್ಮಯ್‌ ಮಿಶ್ರಾ ನಾಯಕರಾಗಿದ್ದಾರೆ.

ಮಹಿಳೆಯರ ಏಷ್ಯಾತಂಡಕ್ಕೆ ಭಾರತದ ಮೈಥಿಲಿ ರಾಜ್‌ ಹಾಗೂ ಆಫ್ರಿಕಾ ತಂಡಕ್ಕೆ ಕೀನ್ಯಾದ ಮಾರ್ಗರೇಟ್‌ ಬಂಜಾ ನಾಯಕಿಯಾಗಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X