ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟೇಲಿಯಾಕ್ಕೆ ಹಾರಿದ ಭಾರತದ ಮಾವು

By Staff
|
Google Oneindia Kannada News

ನಾಸಿಕ್‌: ಅಮೇರಿಕದ ಮಾರುಕಟ್ಟೆಯನ್ನು ಪ್ರವೇಶಿಸಿದ ಬೆನ್ನಲ್ಲೇ ಭಾರತದ ಹಣ್ಣುಗಳ ರಾಜ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡಿನ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆದಿದೆ.

ವಿಕಿರಣಗಳನ್ನು ಹಾಯಿಸಿ ಸಂಸ್ಕರಿತಗೊಂಡ ಮಾವುಗಳನ್ನು ಆಸೀಸ್‌ನ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಕಾಣಲಿದೆ.

ಈ ಮುಂಚೆ ಸುಮಾರು 18 ವರ್ಷಗಳ ಹಿಂದೆ ಭಾರತದ ಮಾವುಗಳು ಕೀಟಗಳ ವಾಹಕಗಳೆಂದು ಆಸ್ಟ್ರೇಲಿಯಾ ದೇಶ ಮಾವಿನ ಮೇಲೆ ನಿಷೇಧ ಹೇರಿತ್ತು.

***

ಎಂ.ಜಿ ರಸ್ತೆ -ಏರ್‌ಪೋರ್ಟ್‌ಗೆ ಸಂಪರ್ಕ ಸುಲಭ

ಇಂದಿರಾನಗರದಿಂದ ಮಹಾತ್ಮಾಗಾಂಧಿ ರಸ್ತೆಗೆ ಸಂಪರ್ಕಕಲ್ಪಿಸುವ ವಿಮಾನ ನಿಲ್ದಾಣ ರಸ್ತೆಯಲ್ಲಿನ ನಾಲ್ಕು ಲೂಪ್‌ಗಳಲ್ಲಿ ಮೊದಲ ಲೂಪ್‌ ಗುರುವಾರ(ಮೇ 31)ರಂದು ಸಂಚಾರಕ್ಕೆ ಮುಕ್ತವಾಗಲಿದೆ.

ಇಂದು ಸಂಜೆ 5: 30ಕ್ಕೆ ಬಿಡಿಎ ಆಯುಕ್ತ ಎಂ.ಕೆ .ಶಂಕರಲಿಂಗೇಗೌಡರವರಿಂದ ದೊಮ್ಮಲೂರು ರಸ್ತೆ ಗ್ರೇಡ್‌ ಸಪರೇಟರ್‌ ಪ್ರದೇಶದಲ್ಲಿ ಲೂಪ್‌ ರಸ್ತೆ ಉದ್ಘಾಟನೆಗೊಳ್ಳಲಿದೆ.

***

ಉಡುಪಿ ವಿದ್ಯಾರ್ಥಿ ಖಗೋಳ-ಒಲಂಪಿಯಾಡ್‌ಗೆ ಆಯ್ಕೆ

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಉತ್ತಮ್‌ಭಟ್‌ ಅಂತಾರಾಷ್ಟ್ರೀಯ ಖಗೋಳ ಒಲಂಪಿಯಾಡ್‌-2007ಗೆ ಆಯ್ಕೆ ಆಗಿದ್ದಾರೆ.

ಮುಂಬರುವ ಸೆಪ್ಟೆಂಬರ್‌ನಲ್ಲಿ ಉಕ್ರೇನಿನ ಕ್ರೆಮ್ಲೆನ್‌ನಲ್ಲಿ ಖಗೋಳ ಒಲಂಪಿಯಾಡ್‌ ನಡೆಯಲಿದ್ದು, ಇದರಲ್ಲಿ 80 ದೇಶದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭಾರತದಿಂದ ಉತ್ತಮ್‌ಭಟ್‌ ಸೇರಿದಂತೆ 6 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X