ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಏರ್‌ ಡೆಕ್ಕನ್‌’ ಮೇಲೂ ಹಿಡಿತ ಸಾಧಿಸಿದ ವಿಜಯಮಲ್ಯ!

By Staff
|
Google Oneindia Kannada News

ನವದೆಹಲಿ : ಯುಬಿ ಸಾಮ್ರಾಜ್ಯದ ದೊರೆ ವಿಜಯ ಮಲ್ಯ, ಏರ್‌ ಡೆಕ್ಕನ್‌ ಏರ್‌ಲೈನ್ಸ್‌ನಲ್ಲಿ ಪಾಲು ಪಡೆದಿದ್ದಾರೆ. ಈ ವಿಚಾರವನ್ನು ನಂಬಲರ್ಹ ಮೂಲಗಳು ಗುರುವಾರ ಸಂಜೆ ಖಚಿತಪಡಿಸಿವೆ.

ಕಡಿಮೆ ವೆಚ್ಚದಲ್ಲಿ ವಾಯುಯಾನ ಸೇವೆ ನೀಡುತ್ತೇವೆ ಎನ್ನುವ ಏರ್‌ ಡೆಕ್ಕನ್‌ನಲ್ಲಿನ ಶೇ.26ರಷ್ಟು ಷೇರುಗಳನ್ನು, ವಿಜಯ ಮಲ್ಯ ಖರೀದಿಸಿದ್ದಾರೆ. ಆ ಮೂಲಕ ಏರ್‌ಡೆಕ್ಕನ್‌ನಲ್ಲಿ ಅತಿ ದೊಡ್ಡ ಷೇರುದಾರ ಎಂಬ ಕೀರ್ತಿಗೆ ಯುಬಿ ಪಾತ್ರವಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶುಕ್ರವಾರ ಹೊರಬೀಳುವ ನಿರೀಕ್ಷೆ ಇದೆ.

ಭಾರತದ ಪ್ರಮುಖ ಖಾಸಗಿ ವಾಯುಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಏರ್‌ ಡೆಕ್ಕನ್‌, ರಾಷ್ಟ್ರದ ಏಳು ಕೇಂದ್ರಗಳಲ್ಲಿ ತನ್ನ ನೆಟ್‌ವರ್ಕ್‌ ಹೊಂದಿದೆ. 1997ರಿಂದ ಬೆಂಗಳೂರಿನಲ್ಲಿ ಸೇವೆಯನ್ನು ಆರಂಭಿಸಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X