• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯಂತಿ, ತಾರಾಗೆ ಸಕತ್ತು ಕೆಲಸ!

By Staff
|

ಜಯಂತಿ, ತಾರಾ ಮತ್ತು ಅನು ಪ್ರಭಾಕರ್‌ಗೆ ಈಗ ಪುರುಸೊತ್ತಿಲ್ಲ. ಉಳ್ಳಾಲ ಉಪಚುನಾವಣೆ ಹಿನ್ನೆಲೆ ಜೆಡಿಎಸ್‌ ಪರವಾಗಿ ಈ ನಟಿಮಣಿಯರು ಪ್ರಚಾರಕ್ಕೆ ನಿಂತಿದ್ದಾರೆ.

ಜೂ.2ರಂದು ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿವೆ. ಯಾರಿಗೆ ಜಯಲಕ್ಷ್ಮಿ ಒಲಿಯವಳೋ ನೋಡೋಣ.

***

ಇಂದಿನಿಂದ ಸಿಇಟಿ ಕೌನ್ಸಲಿಂಗ್‌

ಮಲ್ಲೇಶ್ವರದ ಸಿಇಟಿ ಘಟಕದಲ್ಲಿ ಬುಧವಾರ ಬೆಳಗ್ಗೆ ಅಂಗವಿಕಲ ಅಭ್ಯರ್ಥಿಗಳ ಪರೀಕ್ಷೆ ನಡೆಯಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೀಟು ಆಯ್ಕೆ ಪ್ರಕ್ರಿಯೆ ಆರಂಭಗೊಂಡಿತು. ಮೇ 31 ಹಾಗೂ ಜೂನ್‌ 1ರಂದು ಎನ್‌ಸಿಸಿ ವಿದ್ಯಾರ್ಥಿಗಳಿಗೆ, ಜೂನ್‌ 2 ಮತ್ತು 4ರಂದು ಕ್ರೀಡಾಪಟುಗಳಿಗೆ ಕೌನ್ಸಲಿಂಗ್‌ನಡೆಯಲಿದೆ.

ಜೂನ್‌ 6ರಿಂದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೌನ್ಸಲಿಂಗ್‌ ಆರಂಭ. ಜೂನ್‌ 13ರಿಂದ ಇಂಜಿನೀಯರಿಂಗ್‌ ಸೀಟುಗಳ ಹಂಚಿಕೆ ಪ್ರಕ್ರಿಯೆ. ಜುಲೈ 9ರಿಂದ ಕ್ಯಾಷುಯಲ್‌ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ. ಅಂದಾಜಿನ ಪ್ರಕಾರ 2,100 ವೈದ್ಯಕೀಯ, 821 ದಂತ ವೈದ್ಯಕೀಯ ಹಾಗೂ 29,000 ಇಂಜಿನೀಯರಿಂಗ್‌ ಸೀಟುಗಳು ಹಂಚಿಕೆಗೆ ಲಭ್ಯ.

***

ಸಯಾಮಿ ಅವಳಿ ರಾಮ-ಲಕ್ಷ್ಮಣರ ಮಧ್ಯೆ ಗೆರೆ!

ಹೊಟ್ಟೆಯ ಭಾಗದಲ್ಲಿ ಬೆಸೆದುಕೊಂಡಿದ್ದ ಸಯಾಮಿ ಅವಳಿ ರಾಮ-ಲಕ್ಷ್ಮಣರನ್ನು ಬೇರ್ಪಡಿಸುವಲ್ಲಿ ರಾಯಪುರದ ಡಾ. ಅಶೋಕ್‌ ಶರ್ಮಾ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದೆ.

ರಾಮ್‌ಪ್ರಸಾದ್‌ ದಂಪತಿಗಳ 10 ತಿಂಗಳ ಹಸುಳೆಗಳನ್ನು ಬೇರ್ಪಡಿಸಲು ಸುಮಾರು 5 ತಾಸಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಯಪುರದ ಮೆಡಿಕಲ್‌ ಆಸ್ಪತ್ರೆ ವಹಿಸಿದೆ. ರಾಮ - ಲಕ್ಷ್ಮಣರ ಆರೋಗ್ಯದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

***

ಎವರೆಸ್ಟ್‌ ಏರಿದ ಹಿರಿಯ ಜಪಾನಿ

ಮೇ 22ರಂದು 71 ವರ್ಷ ವಯಸ್ಸಿನ ಜಪಾನಿನ ಕತ್ಸುಸುಕೆ ಯಂಗಿಸಾವಾ ಎಂಬ ನಿವೃತ್ತ ಶಿಕ್ಷಕ, ಎವರೆಸ್ಟ್‌ ಪರ್ವತವನ್ನು ಏರಿದ ಜಗತ್ತಿನ ಹಿರಿಯ ವ್ಯಕ್ತಿ ಎಂಬ ಸಾಧನೆ ಮೆರೆದಿದ್ದಾರೆ.

***

ಇಂದು ರವಿಮಾಮನ ಬರ್ಥ್‌ ಡೇ

ಬುಧವಾರ(ಮೇ.30) 47ನೇ ವರ್ಷಕ್ಕೆ ಕನಸುಗಾರ ರವಿಚಂದ್ರನ್‌ ಕಾಲಿಟ್ಟಿದ್ದಾರೆ.

‘ಪ್ರೇಮಲೋಕ’ದ ಈ ಕನಸುಗಾರ, ಇನ್ನೊಂದು ಪ್ರೇಮಲೋಕ ಸೃಷ್ಟಿ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ಪ್ರಯತ್ನದಲ್ಲಿ ಅವರು ಗೆದ್ದದ್ದಕ್ಕಿಂತ ಬಿದ್ದದ್ದೇ ಹೆಚ್ಚು!

ಬಣ್ಣದ ಲೋಕದ ಏಳು-ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿರುವ ರವಿಚಂದ್ರನ್‌, ಹೊಸ ಉತ್ಸಾಹದಿಂದ ಸಿನಿಮಾ ರೀಲ್‌ ಸುತ್ತುತ್ತಲೇ ಇದ್ದಾರೆ. ಅವರ ಕನಸುಗಳು ಇನ್ನೂ ಮುಗಿದಿಲ್ಲ. ಹೀಗಾಗಿ ಕನ್ನಡ ಪ್ರೇಕ್ಷಕರು ನಿರೀಕ್ಷೆ ಮಾಡಿದರೆ ತಪ್ಪೇನಿಲ್ಲ. ಅಂದ ಹಾಗೆ ಅವರ ಹೊಸ ಚಿತ್ರ ‘ಮಂಜಿನ ಹನಿ’.

ರವಿಚಂದ್ರನ್‌ಗೆ ಜನ್ಮದಿನದ ಶುಭಾಶಯಗಳು

***

ಬಸವಣ್ಣನಿಗೆ ಅವಮಾನ

ಬಂಜಗೆರೆ ಜಯಪ್ರಕಾಶ್‌ರ ‘ಆನುದೇವ ಹೊರಗಣವನು’ ಪುಸ್ತಕವನ್ನು ನಿಷೇಧಿಸಬೇಕು. ಈ ಪುಸ್ತಕ ಸಮರ್ಥಿಸಿದ ಗೃಹ ಸಚಿವ ಎಂ.ಪಿ.ಪ್ರಕಾಶ್‌ರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿಶ್ವ ಬಸವ ಧರ್ಮ ಮಹಾಸಭಾ ಆಗ್ರಹಿಸಿದೆ.

ಬಸವಣ್ಣ ಅವರನ್ನು ಮಾದಿಗ ಜನಾಂಗಕ್ಕೆ ಸೇರಿದವನೆಂದು, ಅವರ ತಾಯಿಗೆ ಅನೇಕ ಗಂಡಂದಿರು ಇದ್ದರೆಂದು ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ. ಪೂರಕ ಅಧ್ಯಯನವಿಲ್ಲದೇ, ಪ್ರಚಾರಕ್ಕಾಗಿ ಬಂಜಗೆರೆ ಜಯಪ್ರಕಾಶ್‌ ಈ ಪ್ರಯತ್ನ ಮಾಡಿದ್ದಾರೆ ಎಂದು ಮಹಾಸಭಾ ದೂರಿದೆ.

***

ಅಂಬಿಗೆ 55 :ತಟ್ಟಿ ಚಪ್ಪಾಳೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X