ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ ಸರಣಿ ಸ್ಫೋಟ : 83ರ ವೃದ್ಧನಿಗೆ ಜೀವಾವಧಿ ಶಿಕ್ಷೆ

By Staff
|
Google Oneindia Kannada News

ಮುಂಬಯಿ : ಟಾಡಾ ವಿಶೇಷ ನ್ಯಾಯಾಲಯ, 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ, 83ವರ್ಷದ ವೃದ್ಧ ಸೇರಿದಂತೆ ಒಟ್ಟು ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ಪಿ.ಡಿ.ಕೋಡೆ ಬುಧವಾರ ಶಿಕ್ಷೆ ಪ್ರಕಟಿಸುತ್ತಾ, ದಾವೂದ್‌ ಫನ್ಸೆ(83) ವಯಸ್ಸು ಪರಿಗಣಿಸಿ ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಹೇಳಿದರು.

ದಾವೂದ್‌ ಫನ್ಸೆ ಸರಣಿ ಸ್ಫೋಟ ನಡೆಯುವುದಕ್ಕಿಂತ ಮೊದಲು, ದುಬೈನಲ್ಲಿ ದಾವೂದ್‌ ಇಬ್ರಾಹಿಂನನ್ನು ಭೇಟಿಯಾಗಿ, ಆರ್‌ಡಿಎಕ್ಸ್‌ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಾಣಿಕೆ ಮಾಡುವುದಾಗಿ ಒಪ್ಪಿದ್ದಕ್ಕಾಗಿ ಈ ಶಿಕ್ಷೆಗೆ ಗುರಿಯಾಗಿದ್ದಾನೆ.

ಜೀವಾವಧಿ ಶಿಕ್ಷೆಗೆ ಗುರಿಯಾದ ಇನ್ನೊಬ್ಬ ಆರೋಪಿ ಮುಜಮ್ಮಿಲ್‌ ಕತ್ರಿ. ಸರಣಿ ಬಾಂಬ್‌ ಸ್ಫೋಟದ ಸಂದರ್ಭದಲ್ಲಿ, ಮಾರಕಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಹಾಗೂ ಸಾಗಾಣಿಕೆ ಮಾಡಿದ್ದಕ್ಕಾಗಿ ಈತನಿಗೆ ಶಿಕ್ಷೆ ವಿಧಿಸಲಾಗಿದೆ.

ರಾಜಸ್ಥಾನದ ಟಾಂಕ್‌ನ ರಾಜವಂಶಸ್ಥ ಅಹ್ಮದ್‌ ಶಾ ಖಾನ್‌ ದುರಾನಿ, ಆರೋಪಿಗಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಕ್ಕಾಗಿ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾನೆ. ಇದಲ್ಲದೆ ಈತನಿಗೆ 25,000ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X