ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್‌ ಪೊಲೀಸಣ್ಣನ ಕೈಯಲ್ಲಿ ಬ್ಲಾಕ್‌ಬೆರಿ... ಹುಷಾರು!

By Staff
|
Google Oneindia Kannada News

ಬೆಂಗಳೂರು : ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗಲೆಂದು, ಟ್ರಾಫಿಕ್‌ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನುಮುಂದೆ ಟ್ರಾಫಿಕ್‌ ಪೊಲೀಸರ ಕೈಯಲ್ಲಿ ಬ್ಲಾಕ್‌ ಬೆರಿ ದರ್ಬಾರು ನಡೆಸಲಿದೆ.

ಹಸ್ತ ಗಣಕ ಎಂದೇ ಹೇಳಬಹುದಾದ ಬ್ಲಾಕ್‌ಬೇರಿ ಸಾಧನಗಳನ್ನು ಜೂನ್‌ 1ರಿಂದ ನಗರದ 280 ಟ್ರಾಫಿಕ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಹೊಂದಲಿದ್ದಾರೆ. ಬ್ಲಾಕ್‌ ಬೆರಿ ಜೊತೆಗೆ ನಿಸ್ತಂತು ಮುದ್ರಕ(ವೈರ್‌ಲೆಸ್‌ ಪ್ರಿಂಟರ್‌)ಗಳನ್ನು ಹೊಂದಲಿದ್ದಾರೆ.

ಪದೇಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಸುಲಭವಾಗಿ ಹಿಡಿಯಲು ಈ ಸಾಧನಗಳಿಂದ ಸಾಧ್ಯವಾಗಲಿದೆ.

ಇನ್ನು ಮುಂದೆ ಸಿಗ್ನಲ್‌ ಜಂಪ್‌ ಮಾಡಿ ನಾನು ಮಾಡೇ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಏಕೆಂದರೆ ಪೊಲೀಸರ ಹೊಸ ಸಾಧನ ಎಲ್ಲವನ್ನು ದಾಖಲಿಸಿರುತ್ತದೆ. ಈ ರೀತಿ ಒಮ್ಮೆ ಅಪರಾಧ ಮಾಡಿ ಸಿಕ್ಕಿಬಿದ್ದರೆ, ನಿಮ್ಮ ವಿವರಗಳು ಗಣಕಕ್ಕೆ ಸೇರಿಸಲ್ಪಡುತ್ತದೆ.

ಹೊಸ ಸಾಧನಗಳು ಇನ್ನೂ ಬರಲಿವೆ..

ಮುಂಬರುವ ದಿನಗಳಲ್ಲಿ ಹೊಸ ಬಗೆಯ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ, ಟ್ರಾಫಿಕ್‌ ಮೇಲೆ ನಿಗಾ ಇಡುವ ಕೆಮೆರಾ ಮುಂತಾದ ಅನೇಕ ಹೈಟೆಕ್‌ ವ್ಯವಸ್ಥೆಗಳನ್ನು ಬೆಂಗಳೂರು ಹೊಂದಲಿದೆ ಎನ್ನುತ್ತಾರೆ ಹೆಚ್ಚುವರಿ ಆಯುಕ್ತ(ಟ್ರಾಫಿಕ್‌) ಎಂ.ಎನ್‌.ರೆಡ್ಡಿ.

ಟ್ರಾಫಿಕ್‌ ಪೊಲೀಸರು ದಂಡ ವಸೂಲಿ ರಸೀತಿಯನ್ನು ಅಪರಾಧಿಗಳ ಮನೆಗೆ ಕಳಿಸಿದರೆ, ಅದನ್ನು ಕಟ್ಟದೆ ಶೇ. 75ಕ್ಕೂ ಅಧಿಕ ಜನ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ಅಪರಾಧಿಗಳನ್ನು ಹಿಡಿಯುವುದು ಕಷ್ಟವಾಗುತ್ತಿತ್ತು. ಈಗ ಹೈಟೆಕ್‌ ಸಾಧನಗಳ ಬಳಕೆಯಿಂದ ಕೆಲಸ ಸುಲಭವಾಗಲಿದೆ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X