ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸ್‌ಜಪಾನ್‌ ರಿಯೋಮೋರಿಗೆ ವಿಶ್ವಸುಂದರಿ ಕಿರೀಟ!!!

By Staff
|
Google Oneindia Kannada News

Miss Japan crowned Miss Universe 2007ಮೆಕ್ಸಿಕೋ: 20ರ ಹರೆಯ ಜಪಾನಿನ ನೃತ್ಯಗಾರ್ತಿ ರಿಯೋ ಮೋರಿ 2007ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾಳೆ.

ಕಪ್ಫು, ಕೆಂಪು ಹಾಗೂ ನೆರಳೆ ಬಣ್ಣದಿಂದ ಕೂಡಿದ್ದ ಜಪಾನಿ ಮಾದರಿಯ ಗೌನ್‌ ಧರಿಸಿದ್ದ ಸುಂದರಿ ರಿಯೋ, ಬ್ರೆಜಿಲ್‌ನ ನಟಾಲಿಯಾ ಗುಮರಾಸ್‌ ಅವರನ್ನು ಹಿಂದಿಕ್ಕಿ, ತನ್ನ ದೇಶಕ್ಕೆ ಎರಡನೇ ಬಾರಿಗೆ ವಿಶ್ವಸುಂದರಿಯ ಪಟ್ಟವನ್ನು ದೊರಕಿಸಿಕೊಟ್ಟಿದ್ದಾಳೆ.

ವಜ್ರಖಚಿತ ಹಾಗೂ ಮುತ್ತಿನ ಸಾಲಿನಿಂದ ಕೂಡಿದ ಕಿರೀಟ(ಇದರ ಬೆಲೆ ಸುಮಾರು 2,50,000ಯುಎಸ್‌ ಡಾಲರ್‌)ವನ್ನು ಕಳೆದ ಬಾರಿಯ ವಿಶ್ವಸುಂದರಿ ಜುಲೈಕಾ ರಿವೇರಾ , ಈಗಿನ ವಿಶ್ವಸುಂದರಿ ರಿಯೋ ಮೋರಿಯ ಮುಡಿಗೇರಿಸಿದರು.

ಜಪಾನಿನ ಫುಜಿ ಪರ್ವತದ ತಪ್ಪಲಿನ ಸಣ್ಣ ನಗರ ಶಿಜೌಕದಿಂದ ಆಗಮಿಸಿದ ಸುಂದರಿ ರಿಯೋ ಮೋರಿಗೆ ಜಗತ್ತಿಗೆ ಸಂತಸದಲ್ಲಿ ಬಾಳುವುದನ್ನು ಕಲಿಸುವ ಆಸೆ. ತಾಳ್ಮೆಯಿಂದ ಇರಿ, ಧೃಢವಾಗಿರಿ ಎನ್ನುವುದು ನಾವು ಮುಂದಿನ ಪೀಳಿಗೆಗೆ ಕಲಿಸಬೇಕಾದ ವಿಷಯಗಳು ಎಂದಿದ್ದಾರೆ.

ಜಪಾನಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಶಾಲೆ ಪ್ರಾರಂಭಿಸುವ ಇರಾದೆಯನ್ನು ವಿಶ್ವಸುಂದರಿ ವ್ಯಕ್ತಪಡಿಸಿದ್ದಾರೆ.

ಈ ಮುಂಚೆ 1959 ರಲ್ಲಿ ಜಪಾನ್‌ ದೇಶದ ಅಕಿಕೋ ಕೋಜಿಮಾ ವಿಶ್ವಸುಂದರಿಯಾಗಿದ್ದರು. ಭಾರತದ ಸುಂದರಿ ಪೂಜಾ ಗುಪ್ತಾ ಕೊನೆಯ ಐದರಲ್ಲೂ ಸ್ಥಾನ ಗಿಟ್ಟಿಸಲು ವಿಫಲರಾದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X