ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

95ರಲ್ಲೂ ವಿಶ್ವ ದಾಖಲೆ ಮಾಡಿದ ತಾಯಿ; ಗಂಗೂಬಾಯಿ

By Staff
|
Google Oneindia Kannada News

Gangubai Hangal breaks her own record at 95ಬೆಳಗಾವಿ : ಖ್ಯಾತ ವಿದುಷಿ ಗಂಗೂಬಾಯಿ ಹಾನಗಲ್‌, ಇತ್ತೀಚೆಗೆ ತಮ್ಮ 95ರ ಪ್ರಾಯದಲ್ಲಿ ಸಂಗೀತ ಕಚೇರಿ ನೀಡಿ, ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಶಾಸ್ತ್ರೀಯ ಗಾಯನ ಮಾಡಿ, ತಾವೇ ನಿರ್ಮಿಸಿದ್ದ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

ಭೈರವಿ, ಜಯಜವಂತಿ ಮುಂತಾದ ರಾಗಗಳನ್ನು ಹರಿಸುತ್ತಾ, ಬೋಲಿನಾ ಬೋಲ್‌ ಪಿಯಾ ಸಂಗ್‌ ಹಾಗೂ ಮನಮೋಹನ್‌ ಲಾಜ್‌ನಾ ಆಯೇ ಎಂದು ಹಾಡುವಾಗಲಂತೂ ಅವರು, ಅಗಲಿದ ತಮ್ಮ ಮಗಳ ನೆನಸಿಕೊಂಡು ಕಣ್ಣೀರು ಸುರಿಸುತ್ತಾ, ಗಾನಸುಧೆಯನ್ನು ತಮ್ಮ ಮಗಳಿಗೆ ಅರ್ಪಿಸಿದರು.

ಗಾನ ಕೋಗಿಲೆಯ ದನಿಗೆ ಸಾಥಿದಾರರಾಗಿ ಹಯವದನ್‌ ಜೋಷಿ, ಶ್ರೀಧರ್‌ ಮಾನೆ, ಅಶೋಕ್‌ ನಾಡಿಗೇರ್‌, ಡಾ. ರಾಜೇಂದ್ರಭಂಡಾರ್ಕರ್‌, ಜ್ಞಾನೇಶ್ವರ ವಾರಂಗ್‌, ಸಾಯಿನಾಥ್‌ ಮೊಹಿತೆ ಹಾಗೂ ಅರ್ಚನಾ ಹಾನಗಲ್‌ ಮುದ ನೀಡಿದರು.

1924ರಲ್ಲಿ ಮಹಾತ್ಮ ಗಾಂಧಿಯವರ ಸಮ್ಮುಖದಲ್ಲಿ ಗಾಯನ ಮಾಡುವ ಅವಕಾಶ ದೊರೆತಿದ್ದದ್ದು ನೆನೆಸಿಕೊಂಡ ಗಂಗೂಬಾಯಿ, ಸರ್ಕಾರ ಸಂಗೀತವನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸಬೇಕು . ಸಂಗೀತಕ್ಕೆ ಕಾಯಿಲೆಯನ್ನು ದೂರ ಮಾಡುವ ಶಕ್ತಿಯಿದೆ ಎಂದರು.

ಕಲಾ ಅಕಾಡೆಮಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್‌.ಸುಬ್ಬರಾವ್‌ ಹಾಗೂ ಕೆಎಲ್‌ಇ ವಿದ್ಯಾಸಂಸ್ಥೆಯ ಉಪಕುಲಪತಿ ಡಾ. ಚಂದ್ರಕಾಂತ್‌ ಕೊಕಟೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಗಂಗೂಬಾಯಿಯವರ ಹೇಳಿಕೆ ಪುರಸ್ಕರಿಸಿದ ಚಂದ್ರಕಾಂತ್‌ ಕೊಕಟೆಯವರು ಕೆಎಲ್‌ಇ ವಿದ್ಯಾಸಂಸ್ಥೆಯಲ್ಲಿ ಸಂಗೀತವನ್ನು ಡಿಗ್ರಿ ಹಾಗೂ ಡಿಪ್ಲೋಮ ಮಟ್ಟದಲ್ಲಿ ಕಲಿಸುವುದಾಗಿ ಭರವಸೆ ನೀಡಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X