ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಳೇದಗುಡ್ಡದಲ್ಲಿ ದಾಖಲೆಯ 10 ಸೆಂ.ಮೀ ಭರ್ಜರಿ ಮಳೆ

By Staff
|
Google Oneindia Kannada News

ಬೆಂಗಳೂರು : ನಗರದ ಹವಾಮಾನ ಇಲಾಖೆಯ ವರದಿ ಪ್ರಕಾರ ಗುಳೇದಗುಡ್ಡ ಹಾಗೂ ಬಂಗಾರಪೇಟೆಯಲ್ಲಿ ಅಧಿಕ ಮಳೆ ಸುರಿದಿದೆ.

ಭಾನುವಾರ ಬಿದ್ದ ಮಳೆ ಪ್ರಮಾಣ : ಗುಳೇದ ಗುಡ್ಡದಲ್ಲಿ 10 ಸೆಂ.ಮೀ, ಬಂಗಾರಪೇಟೆಯಲ್ಲಿ 7ಸೆಂ.ಮೀ, ತಾವರೆಕೆರೆಯಲ್ಲಿ 4ಸೆಂ.ಮೀ, ಪಣಂಬೂರು, ಬಾದಾಮಿಯಲ್ಲಿ ತಲಾ 3 ಸೆಂ.ಮೀ,ಚಿತ್ರದುರ್ಗ, ಕೆ.ಆರ್‌.ಸಾಗರದಲ್ಲಿ ತಲಾ 2 ಸೆಂ.ಮೀ, ಮೂಲ್ಕಿ, ಪುತ್ತೂರು, ಕೆರೂರು, ಲಿಂಗಸುಗೂರು, ಪಾವಗಡ, ಬೆಂಗಳೂರು ನಗರ, ಬಾಳೆಹೊನ್ನೂರು, ತೊಂಡೆಬಾವಿಗಳಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದರೂ ಉತ್ತರ ಒಳನಾಡು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಗುಲ್ಭರ್ಗಾದಲ್ಲಿ 41.2 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ.

ಹವಾ ಮುನ್ಸೂಚನೆ:

ಬುಧವಾರ ಮುಂಜಾನೆಯವರೆಗೂ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ಕೆಲಭಾಗಗಳು ಸೇರಿದಂತೆ ರಾಜ್ಯದ ಹಲೆವೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಸಾಧಾರಣ ಮಳೆ, ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆಯಿದೆ.

ಬೆಂಗಳೂರು ನಗರ : ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆ ಬೀಳುವ ಸಂಭವವಿದ್ದು, ದಿನದ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆ. ಆಸು ಪಾಸಿನಲ್ಲಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು ಪ್ರವೇಶ:

ಕೇರಳದಲ್ಲಿ ನೈರುತ್ಯ ಮುಂಗಾರು ಇಂದು ಬೆಳಗ್ಗೆ ನಿರೀಕ್ಷೆಗಿಂತ ಮೊದಲೇ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X