ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ : 1.85ಲಕ್ಷ ನಪಾಸು ವಿದ್ಯಾರ್ಥಿಗಳಿಗೆ ಸತ್ವಪರೀಕ್ಷೆ

By Staff
|
Google Oneindia Kannada News

ಬೆಂಗಳೂರು : ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ರಾಜ್ಯಾದ್ಯಂತ ಸೋಮವಾರ ಬೆಳಗ್ಗೆ ಆರಂಭವಾಗಿವೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಂ.ವಿ.ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅನುತ್ತೀರ್ಣರಾದ ಸುಮಾರು 1.85ಲಕ್ಷ ವಿದ್ಯಾರ್ಥಿಗಳು ಎರಡನೇ ಅವಕಾಶದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮುಂದಿನ ಆರು ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 770 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿದಿನ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಪರೀಕ್ಷೆ ನಡೆಯುವುದು ಎಂದು ತಿಳಿಸಿದರು.

ಸೋಮವಾರ ಗಣಿತ, ಮಂಗಳವಾರ ಪ್ರಥಮ ಭಾಷೆ, ಬುಧವಾರ ತೃತೀಯ ಭಾಷೆ. ಗುರುವಾರ ಸಾಮಾನ್ಯ ವಿಜ್ಞಾನ, ಶುಕ್ರವಾರ ಸಮಾಜ ವಿಜ್ಞಾನ ಹಾಗೂ ಶನಿವಾರ ತೃತೀಯ ಭಾಷೆ ಪರೀಕ್ಷೆಗಳು ನಡೆಯಲಿವೆ. ಜೂನ್‌ 5ರಿಂದ ಮೌಲ್ಯಮಾಪನ ಆರಂಭಿಸಿ ಜೂನ್‌ ಅಂತ್ಯದೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X