• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳದಲ್ಲಿ ಮುಂಗಾರು ಮಳೆಯ ಹನಿಗಳ ಲೀಲೆ ಪ್ರಾರಂಭ

By Staff
|

ಕೇರಳದ ಯಾವುದೇ ಥಿಯೇಟರ್‌ನಲ್ಲಿ ಕನ್ನಡದ ಬ್ಲಾಕ್‌ಬಸ್ಟರ್‌ ‘ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗುತ್ತಿಲ್ಲ. ಖಂಡಿತವಾಗಿಯೂ ಇಂದು ಬೆಳಿಗ್ಗೆ ನೈರುತ್ಯ ಮಾನ್ಸೂನ್‌ ಕೇರಳವನ್ನು ಪ್ರವೇಶಿಸಿದೆ. ನಿರೀಕ್ಷೆಗಿಂತ ಮೊದಲೇ ಮುಂಗಾರು ಪ್ರಾರಂಭವಾಗಿದ್ದರೂ, ನಿರೀಕ್ಷಿಸಿದಷ್ಟು ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲವೇ ದಿನಗಳಲ್ಲಿ ಕರ್ನಾಟಕವನ್ನೂ ಪ್ರವೇಶಿಸಲಿರುವ ಈ ಮುಂಗಾರು ಮಳೆ ಆ ‘ಮುಂಗಾರು ಮಳೆ’ಯಾಡನೆ ಯಾವ ರೀತಿ ಪೈಪೋಟಿಗೆ ಬೀಳಲಿದೆ ನೋಡಬೇಕು. ಒಟ್ಟಿನಲ್ಲಿ ಕರ್ನಾಟಕದ ರೈತರ ಮೊಗದಲ್ಲಿ ಹರುಷ ಉಕ್ಕಿದರೆ ಸಾಕು.

ರೈತರ ಮೊಗದಲ್ಲಿ ಹರುಷ ಉಕ್ಕಲು ಇನ್ನೊಂದು ಕಾರಣ

ರಾಜ್ಯದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೂ ಕಬ್ಬು ರೈತರ ಕಪಾಳದ ಮೇಲಿರುವ ನೀರು ಮಳೆ ಹನಿಯಲ್ಲ. ಸಾಲ ಮನ್ನಾ, ಬಡ್ಡಿ ದರದ ಇಳಿತ ಮುಂತಾದ ಸೌಲಭ್ಯ, ಆಮಿಷಗಳೊಡ್ಡಿದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ. ಕಂಗಾಲಾದ ರೈತರ ಸಂಕಷ್ಟ ನಿವಾರಿಸಲು ಮುಖ್ಯಮಂತ್ರಿಕುಮಾರಸ್ವಾಮಿ ಮತ್ತೊಂದು ಪರಿಹಾರವನ್ನು ಷೋಷಿಸಿದ್ದಾರೆ.

ಕಬ್ಬು ಫ್ಯಾಕ್ಟರಿಗಳು ಕೈಎತ್ತಿದ್ದರಿಂದ ಸಂಕಷ್ಟಕ್ಕೆ ಗುರಿಯಾದ ರೈತರ ಪ್ರತಿ ಹೆಕ್ಟೇರ್‌ ಜಮೀನಿಗೆ 25 ಸಾವಿರ ಪರಿಹಾರ ನೀಡುವುದಾಗಿ ಕುಮಾರಸ್ವಾಮಿ ಚಾಮರಾಜನಗರದಲ್ಲಿ ಇಂದು ಭರವಸೆ ನೀಡಿದ್ದಾರೆ.

ವರುಣನ ನರಬಲಿ ಯಾತ್ರೆ.. !

ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಗುಳೇದಗುಡ್ಡ ಸಮೀಪದ ಕೋಟೆಕಲ್‌ ಸಮೀಪದಲ್ಲಿನ ಹಳ್ಳದಲ್ಲಿ 13ಕಾರ್ಮಿಕರು ಕೊಚ್ಚಿಕೊಂಡು ಹೋಗಿದ್ದಾರೆ. ಸೋಮವಾರ ಲಭ್ಯವಿರುವ ವರದಿ ಪ್ರಕಾರ, ಮೂವರ ಮೃತದೇಹಗಳು ಪತ್ತೆಯಾಗಿವೆ. ವರುಣನ ನರಬಲಿ ಯಾತ್ರೆ, ಮುಂಗಾರು ಮಳೆ ಆರಂಭದಲ್ಲಿಯೇ ಭಯ ಹುಟ್ಟಿಸುವಂತಿದೆ!

***

ಮುಂಬಡ್ತಿ

ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಈ ಕೆಳಕಂಡ ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಲಾಗಿದೆ.

ಸಿ. ಸರೋಜ, ಉಪ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ ಮಂಜೂರಾತಿ ಮತ್ತು ಭೂಮಾಪನ) ಹಾಗೂ ಎಸ್‌. ಚಂದ್ರಶೇಖರಪ್ಪ ಅವರಿಗೆ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯಾಗಿ (ಉನ್ನತೀಕರಿಸಿದ ಉಪ ಕಾರ್ಯದರ್ಶಿ ಹುದ್ದೆಯಲ್ಲಿ) ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.

***

ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಕ್ಲರ್ಕ್‌-ಕಂ-ಟೈಪಿಸ್ಟ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ಲೋಕಯುಕ್ತ ಸಂಸ್ಥೆಯ ಪ್ರಧಾನ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

***

ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು

ವಿದೇಶಿ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ಒದಗಿಸಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆರ್ಥಿಕ ನೆರವನ್ನು ಮೂರು ವರ್ಷಗಳ ಅವಧಿಗೆ, ವಾರ್ಷಿಕವಾಗಿ ಗರಿಷ್ಠ 3.50 ಲಕ್ಷ ರೂ ನಂತೆ ಅಥವಾ ಇಡೀ ವ್ಯಾಸಂಗ ಅವಧಿಗೆ 10.00 ಲಕ್ಷ ರೂ ಒದಗಿಸಲಾಗುತ್ತಿದೆ.

ಅಭ್ಯರ್ಥಿಗಳು ಪದವಿ : ಸ್ನಾತಕೋತ್ತರ ಅಥವಾ ಡಾಕ್ಟರೇಟ್‌ ಪದವಿಯಲ್ಲಿ ಶೇ 60 ಅಂಕ ಗಳಿಸಿರಬೇಕು, ವಯೋಮಿತಿ 35 ವರ್ಷ ಮೀರಿರಬಾರದು, ಕುಟುಂಬದ ಮಾಸಿಕ ಆದಾಯ ರೂ 12,000 ಒಳಗಿರಬೇಕು. ಭರ್ತಿಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಮೇ 30 ರೊಳಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕರೆ ಮಾಡಿ ದೂರವಾಣಿ - 22232105 : 22232214

***

ಸಚಿವರ ಪ್ರವಾಸ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹೆಚ್‌. ಕೆ. ಕುಮಾರಸ್ವಾಮಿ ಅವರು ಮೇ 28 ಹಾಗೂ 29ರಂದು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮೇ 29ರಂದು ನಗರಕ್ಕೆ ಹಿಂದಿರುಗುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X