ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30ಸಾವಿರ ಕಿ.ಮೀ ಮ್ಯಾರಥಾನ್‌ಗೆ ಕೋಲಾರದ ಜೈರಾಜ್‌

By Staff
|
Google Oneindia Kannada News

ಕೋಲಾರ : ನಗರದ ಸುನೀಲ್‌ ಜೈರಾಜ್‌ 30,000ಕಿಲೋ ಮೀಟರ್‌ ಮ್ಯಾರಥಾನ್‌ಗೆ ಆಯ್ಕೆಯಾಗಿದ್ದಾರೆ. ಈ ಮ್ಯಾರಥಾನ್‌ 16 ದೇಶಗಳನ್ನು ವ್ಯಾಪಿಸಲಿದೆ.

ಸುನೀಲ್‌ ಜೈರಾಜ್‌ಗೆ ಮ್ಯಾರಥಾನ್‌ಗಳ ಬಗೆಗೆ ವಿಶೇಷ ಆಸ್ಥೆ. ಆದರೆ ಯಾವುದೇ ಸ್ವಾರ್ಥದ ಲಾಭಕ್ಕಾಗಿ ಅಲ್ಲ ; ಬದಲಿಗೆ ಸಾಮಾಜಿಕ ಕಾರಣಗಳಿಗಾಗಿ.

ಪ್ರಸ್ತುತ ನ್ಯೂಯಾರ್ಕ್‌ನ ಮಿಚಿಗನ್‌ನಲ್ಲಿ ವಾಸಿಸುತ್ತಿರುವ ಇವರು, ಮಳೆನೀರು ಕೊಯ್ಲು ಹಾಗೂ ಸಂಸ್ಕರಣದ ಕುರಿತು ಪಿಎಚ್‌.ಡಿ., ಮಾಡುತ್ತಿದ್ದಾರೆ. ಉತ್ಸಾಹೀ ಅಥ್ಲೀಟ್‌ ಆಗಿರುವ ಇವರು, 2005ರಲ್ಲಿ ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.

ಇತ್ತೀಚೆಗೆ ತಮ್ಮೂರು ಕೋಲಾರಕ್ಕೆ ಭೇಟಿ ನೀಡಿದಾಗ ಅವರು ಸುದ್ದಿಗಾರರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಬ್ಯ್ಲೂ ಪ್ಲ್ಯಾನೆಟ್‌ ರನ್‌ ಫೌಂಡೇಷನ್‌ ಈ ಮ್ಯಾರಥಾನ್‌ ಆಯೋಜಿಸಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 4ರವರೆಗೆ ಮ್ಯಾರಥಾನ್‌ ನಡೆಯಲಿದೆ. 13 ದೇಶಗಳ 135 ಕುಡಿಯುವ ನೀರಿನ ಯೋಜನೆಗಳಿಗೆ ನಿಧಿ ಸಂಗ್ರಹಿಸುವುದು ಮ್ಯಾರಥಾನ್‌ ಉದ್ದೇಶವಾಗಿದೆ.

ಚೆನ್ನೈ ಮಾದರಿಯಲ್ಲಿ ಕೋಲಾರದಲ್ಲೂ ಮಳೆನೀರು ಸಂಸ್ಕರಣ ತರಬೇತಿ ಕೇಂದ್ರ ಆರಂಭಿಸುವ ಇಚ್ಛೆಯಿದೆ. ಈ ಯೋಜನೆಯ ವೆಚ್ಚ ಸುಮಾರು 80 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳಾಗಬಹುದು. ಇದಕ್ಕಾಗಿ ನಿಧಿ ಸಂಗ್ರಹಿಸುವ ಕೆಲಸ ಮಾಡುವೆ ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X