ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟ್‌ ಕ್ರಿಕೆಟ್‌: ಭಾರತೀಯರಿಗೆ ಶರಣಾದ ಬಾಂಗ್ಲಾ ಹುಲಿ

By Staff
|
Google Oneindia Kannada News

India Thrash Bangladesh By Innings And 239 Runsಢಾಕಾ: ಭಾರತ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 239 ರನ್‌ಗಳಿಂದ ಗೆದ್ದು ಕೊಂಡಿದೆ. ಈ ಮೂಲಕ ಭಾರತದ ಪಾಲಿಗೆ 1-0 ಅಂತರದಿಂದ ಟೆಸ್ಟ್‌ ಸರಣಿ ದಕ್ಕಿದೆ.

ಜಹೀರ್‌ಖಾನ್‌ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ ಮಾತ್ರ ಗಳಿಸಿ ಫಾಲೋ ಆನ್‌ ಪಡೆಯಿತು. ಎರಡನೆ ಇನ್ನಿಂಗ್ಸ್‌ನಲ್ಲೂ , ಅಳುಕಿನಿಂದಲೆ ಆಡಿ ಕೊನೆಗೆ 253 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಭಾರತಕ್ಕೆ ಪಂದ್ಯ ಹಾಗೂ ಸರಣಿಯನ್ನು ಒಪ್ಪಿಸಿತು.

ಭಾರತದ ಪರ ಜಹೀರ್‌ ಖಾನ್‌ ಮೊದಲ ಇನ್ನಿಂಗ್ಸ್‌ನಲ್ಲಿ 34 ರನ್ನಿತ್ತು 5 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಅವರಿಗೆ ಕುಂಬ್ಳೆ 32ಕ್ಕೆ 3 ಉತ್ತಮ ಬೆಂಬಲ ನೀಡಿದರು.

ಎರಡನೇ ಇನ್ನಿಂಗ್ಸ್‌ ನಲ್ಲಿ ಬಾಂಗ್ಲಾ ಪರ ಮಹಮದ್‌ ಅಶ್ರಫುಲ್‌ 67 ರನ್‌(41 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್‌) ,ಸಲೆಹಾ 42 ರನ್‌(46 ಎಸೆತಗಳಲ್ಲಿ 8 ಬೌಂಡರಿ), ಮೊರ್ತಜಾ 70 ರನ್‌(68 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್‌) ಗಳಿಸಿ ಕೊಂಚ ಭರವಸೆ ಮೂಡಿಸಿದರೂ ಅಂತಿಮವಾಗಿ ಭಾರತದ ಬೌಲರ್‌ಗಳಿಗೆ ಶರಣಾದರು.

ಭಾರತದ ಪರ ಆಫ್‌ಸ್ಪಿನ್ನರ್‌ ರೋಮೆಶ್‌ ಪವಾರ್‌ 33 ಕ್ಕೆ 3, ಜಹೀರ್‌ 54ಕ್ಕೆ 2, ಸಚಿನ್‌ 35ಕ್ಕೆ 2, ಕುಂಬ್ಳೆ 72 ಕ್ಕೆ 2 ಹಾಗೂ ಆರ್‌ಪಿ ಸಿಂಗ್‌ 28 ಕ್ಕೆ 1 ವಿಕೆಟ್‌ ಪಡೆದು ಭಾರತದ ಗೆಲುವಿಗೆ ಕಾರಣರಾದರು.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ
ದಾಖಲೆ ಶತಕ : ಭಾರತ 610-3 ಡಿಕ್ಲೇರ್‌ ; ಬಾಂಗ್ಲಾ ತತ್ತರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X