ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ29ಕ್ಕೆ ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ

By Staff
|
Google Oneindia Kannada News

ನವದೆಹಲಿ: ಸಿಬಿಎಸ್‌ಸಿ ಪಠ್ಯಕ್ರಮದ 10 ನೇ ತರಗತಿಯ ಪರೀಕ್ಷೆ ಫಲಿತಾಂಶ ಮೇ 29 ರಂದು ಬೆಳಗ್ಗೆ 8 ಗಂಟೆಗೆ ಪ್ರಕಟವಾಗಲಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ -ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜ್ಯುಕೇಷನ್‌) ಪ್ರಕಟಿಸಿದೆ.

ಅಜ್ಮೈರ್‌, ಚೆನ್ನೈಗಳಲ್ಲಿ ಮೇ 28 ರಂದು ಹಾಗೂ ಅಲಹಾಬಾದ್‌, ದೆಹಲಿ, ಗುವಾಹತಿ ಮುಂತಾದೆಡೆ ಮೇ 29 ರಂದು ಫಲಿತಾಂಶ ಪ್ರಕಟವಾಗಲಿದೆ.

ವೆಬ್‌ ಸೈಟ್‌ ಮೂಲಕ ಫಲಿತಾಂಶ:

www.results.nic.in ; http://www.cbseresults.nic.in/ ; www.cbse.nic.in ನಲ್ಲಿ ಫಲಿತಾಂಶ ಲಭ್ಯ. ವಿದ್ಯಾರ್ಥಿಗಳು ಇ-ಮೇಲ್‌ ವಿಳಾಸವನ್ನು ನೀಡಿ, ಈ ವೆಬ್‌ಸೈಟ್‌ಗಳಲ್ಲಿ ನೊಂದಾಣಿ ಮಾಡಿಕೊಂಡು ಫಲಿತಾಂಶವನ್ನು ಈ ಮೇಲ್‌ ಮೂಲಕ ಪಡೆಯಬಹುದಾಗಿದೆ.

ಮೇಲ್ಕಂಡ ವೆಬ್‌ಸೈಟುಗಳನ್ನು ಹೊರತುಪಡಿಸಿದಂತೆ, http://mtnldelhi.in ; http://delhi.mtnl.net.in ನಲ್ಲೂ ಫಲಿತಾಂಶ ಲಭ್ಯವಿರುತ್ತದೆ.

ಫೋನ್‌ ಮೂಲಕ ಫಲಿತಾಂಶ ತಿಳಿಯಲು ಕರೆ ಮಾಡಬಹುದಾದ ಸಂಖ್ಯೆಗಳು:

ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) -24357270.
ಎಂಟಿಎನ್‌ಎಲ್‌ ಗ್ರಾಹಕರು 95 11(011)-28127030.
ಐಡಿಯಾ -456068
ಹಚ್‌-12310
ಏರ್‌ಟೆಲ್‌-56461
ಟಾಟಾ ಇಂಡಿಕಾಮ್‌-12971

(ದಟ್ಸ್‌ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X