• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಗೊಂದೇ ಕಾರು!

By Staff
|

ಬೆಂಗಳೂರಲ್ಲಿ ಸಕತ್ತು ಟ್ರಾಫಿಕ್‌ ಜಾಮ್‌! ಈ ಕಿರಿಕಿರಿ ತಪ್ಪಿಸಲು ಎಷ್ಟು ಫ್ಲೈಓವರ್‌ ಕಟ್ಟಿಸಿದರೂ ಫಲ ದೊರೆತಿಲ್ಲ. ದಿಕ್ಕು ತೋಚದೇ ಆಡಳಿತ ಯಂತ್ರ ಕಂಗೆಟ್ಟಿದೆ. ಸಾರ್ವಜನಿಕರಂತೂ ಯಾವುದೋ ಜನ್ಮದ ಕರ್ಮ, ಈಗ ಕಾಡುತ್ತಿದೆ ಎಂದು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ!

ಈ ಮಧ್ಯೆ ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು, ಕುಟುಂಬಕ್ಕೊಂದು ಕಾರು ಕಾಯ್ದೆಯನ್ನು ಜಾರಿಗೆ ತಂದರೆ ಹೇಗೆ ಎಂಬ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ. ಈ ಬಗ್ಗೆ ಪ್ರಸ್ತಾವನೆಯಾಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ರಾಜ್ಯ ಸಾರಿಗೆ ಸಚಿವ ಎನ್‌.ಚೆಲುವರಾಯಸ್ವಾಮಿ ಹೇಳಿದ್ದಾರೆ.

***

ಶಾಸಕ-ತಹಶೀಲ್ದಾರ್‌ ಕದನ!

ಅಧಿಕಾರಿಗಳದು ಒಂದು ರೀತಿಯ ಸೊಕ್ಕು. ಜನಪ್ರತಿನಿಧಿಗಳದು ಇನ್ನೊಂದು ರೀತಿಯ ಸೊಕ್ಕು. ಒಬ್ಬರನ್ನು ಇನ್ನೊಬ್ಬರು ಬಗ್ಗಿಸುವ ಕಸರತ್ತು ದಿನೇದಿನೇ ಇದ್ದದ್ದೇ. ಅಥಣಿ ತಹಶೀಲ್ದಾರ್‌ ಮತ್ತು ಕಾಗವಾಡ ಶಾಸಕ ರಾಜು ಕಾಗೆ ನಡುವಿನ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ವರದಿಯಾಗಿದೆ.

ಬಡವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರ್‌ ಒಪ್ಪಲಿಲ್ಲ. ವಿದ್ಯಾರ್ಥಿಗಳ ದೂರು ಕೇಳಿದ ಶಾಸಕರು, ತಹಶೀಲ್ದಾರ್‌ಗೆ ಕಪಾಳಮೋಕ್ಷ ಮಾಡಿದರು. ಕೊನೆಗೆ ಕದನ ಪ್ರಕರಣ ರಾಜಿಯಲ್ಲಿ ಅಂತ್ಯಗೊಂಡಿದೆ.

***

ಭಾನುವಾರ ಕೇಂದ್ರ ಸಚಿವೆ ಆಗಮನ

ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವೆ ಕಾಂತಿಸಿಂಗ್‌ ಅವರು ಮೇ 26ರಂದು ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಅವರು ಹೆಚ್‌.ಎಂ.ಟಿ. ಕಾರ್ಖಾನೆಗೆ ಭೇಟಿ ನೀಡಿ ಮರುದಿನ ಉದಕಮಂಡಲಕ್ಕೆ ಪ್ರಯಾಣ ಮಾಡುವರೆಂದು ಪ್ರಕಟಣೆ ತಿಳಿಸಿದೆ.

***

ಗಗನಸಖಿ ಆಗುವ ಬಯಕೆ ಇದೆಯಾ?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗಾಗಿ ಒಂದು ವರ್ಷದ ಗಗನಸಖಿ ತರಬೇತಿಯನ್ನು ಏರ್ಪಡಿಸಿದೆ.

ವಾರ್ಷಿಕ ಆದಾಯ ರೂ. ಒಂದು ಲಕ್ಷದೊಳಗಿರುವ, ದ್ವಿತೀಯ ಪಿ.ಯು.ಸಿ. ವಿದ್ಯಾರ್ಹತೆ ಹೊಂದಿರುವ, 24 ವರ್ಷ ವಯೋಮಿತಿಯಾಳಗಿನ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಯುವತಿಯರು ಕನಿಷ್ಠ 157 ಸೆಂ. ಮೀ ಎತ್ತರ, ಹಾಗೂ ಯುವಕರಿಗೆ ಕನಿಷ್ಠ 170 ಸೆ.ಮೀ ಎತ್ತರವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್‌ 11 ಕೊನೆಯ ದಿನಾಂಕವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.

***

ಪ್ರಥಮ ದರ್ಜೆ ಕಾಲೇಜು ಪ್ರವೇಶಕ್ಕೆ ಅರ್ಜಿ

ರಾಜ್ಯ ಸರ್ಕಾರವು 2007-08ನೇ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ನಗರದ ಜಯನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುತ್ತಿದೆ.

ಈ ಕಾಲೇಜು ಯಡಿಯೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿಯೇ ಕಾರ್ಯಾರಂಭ ಮಾಡಲಿದ್ದು ಬಿ.ಎ., ಬಿ.ಎಸ್‌.ಸಿ., ಬಿ.ಕಾಂ ಹಾಗೂ ಬಿ.ಬಿ.ಎಂ. ಕೋರ್ಸುಗಳಿಗೆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆಯನ್ನು ಮೇ 28 ರಿಂದ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಕಾಲೇಜಿನಲ್ಲಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9448504003 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

***

ಮೀನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ನಿರುದ್ಯೋಗಿ ಯುವಕರಿಗಾಗಿ ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆಯು ಒಳನಾಡು ಮೀನುಗಾರಿಕೆಯಲ್ಲಿ ಹದಿನೈದು ದಿನಗಳ ತರಬೇತಿ ನೀಡಲಿದೆ.

ತರಬೇತಿಯನ್ನು ಚನ್ನಪಟ್ಟಣ ತಾಲ್ಲೂಕು ಕಣ್ವ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ದಿನಕ್ಕೆ ಒಂದು ನೂರು ರೂಪಾಯಿಗಳ ದಿನಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಜೂನ್‌ 5 ಕೊನೆಯ ದಿನ.

ತರಬೇತಿ ಪಡೆಯಬಯಸುವವರು ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆ, ಎರಡನೇ ಮಹಡಿ, ಜಯನಗರ ವಾಣಿಜ್ಯ ಸಂಕೀರ್ಣ, 4 ನೇ ಬಡಾವಣೆ, ಬೆಂಗಳೂರು - 560 011 ದೂರವಾಣಿ ಸಂಖ್ಯೆ 26630627 ಇವರನ್ನು ಸಂಪರ್ಕಿಸಲು ಕೋರಿದೆ.

***

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕು ವ್ಯಾಪ್ತಿಗೆ ಬರುವ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಿ.ಯು.ಸಿ. ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಪಿ.ಯು.ಸಿ. ವಿದ್ಯಾರ್ಥಿ ನಿಲಯ ಆಸ್ಟಿನ್‌ ಟೌನ್‌, ಬೆಂಗಳೂರು ಇಲ್ಲಿ ಅರ್ಜಿ ಸಲ್ಲಿಸಬೇಕು.

5ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೂ, ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ವಸತಿ ಶಾಲೆ, ಬಾಗಲೂರು ಲೇಔಟ್‌ (ಟ್ಯಾನರಿ ರಸ್ತೆ) ಬೆಂಗಳೂರು ಇಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಜೂನ್‌ 11 ಕೊನೆಯ ದಿನ. ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಬೆಂಗಳೂರು ಉತ್ತರ ತಾಲ್ಲೂಕು, ಸಮಾಜ ಕಲ್ಯಾಣ ಕಚೇರಿ ಅಥವಾ ವಸತಿ ಶಾಲೆಯ ಮೇಲ್ವಿಚಾರಕರಿಂದ ಪಡೆದು, ಭರ್ತಿಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಯಾಡನೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಬೆಂಗಳೂರು ಉತ್ತರ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

***

ಇಂದಿರಾ ನಗರದಲ್ಲಿ ಸಾರಿಗೆ ಅದಾಲತ್‌

ಇಂದಿರಾನಗರದಲ್ಲಿರುವ ಬೆಂಗಳೂರು (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜೂನ್‌ 5 ರಂದು ಮಧ್ಯಾಹ್ನ 3.00 ಗಂಟೆಗೆ ಸಾರಿಗೆ ಅದಾಲತ್‌ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

***

ಉಚಿತ ಪರೀಕ್ಷಾ ಪೂರ್ವ ತರಬೇತಿ

2007ನೇ ಸಾಲಿನಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ವತಿಯಿಂದ ನಡೆಸುವ ಐ.ಎ.ಎಸ್‌./ಐ.ಪಿ.ಎಸ್‌/ಐಎಫ್‌ಎಸ್‌/ಐಇಎಸ್‌ ಇತ್ಯಾದಿ ಮುಖ್ಯ ಪರೀಕ್ಷೆಗೆ ಕುಳಿತುಕೊಳ್ಳುವ ಇತರೆ ಹಿಂದುಳಿದ ವರ್ಗಗಳ 20 ಅಭ್ಯರ್ಥಿಗಳಿಗೆ ಬೆಂಗಳೂರು ನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಬೋಧನಾ ಕೇಂದ್ರಗಳಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಹಾಗೂ ನಿಬಂಧನೆಗಳನ್ನು ಮೇ 25 ರಿಂದ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಂ 14/3, ಎರಡನೇ ಮಹಡಿ, ಸಿ.ಎಫ್‌.ಸಿ. ಕಟ್ಟಡ, (ಯವನಿಕಾ ಎದುರು ಅಥವಾ ಆರ್‌. ಬಿ.ಐ. ಎದರು) ನೃಪತುಂಗ ರಸ್ತೆ, ಬೆಂಗಳೂರು - 1 ಇವರಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದು. ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂನ್‌ 8 ಕೊನೆಯ ದಿನವಾಗಿರುತ್ತದೆ.

***

ಸಚಿವರ ಪ್ರವಾಸ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹೆಚ್‌. ಕೆ. ಕುಮಾರಸ್ವಾಮಿ ಅವರು ಮೇ 24ರಿಂದ 29 ರವರೆಗೆ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮೇ 29ರಂದು ನಗರಕ್ಕೆ ಹಿಂದಿರುಗುವರು.

***

ರಾಯಚೂರು ಜಿಲ್ಲೆಗೆ ಕ್ರೀಡಾ ಸಚಿವ

ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಹನುಮಂತಪ್ಪ ಯ ಆಲ್ಕೋಡ್‌ ಅವರು ಮೇ 24ರಿಂದ 27ರವರೆಗೆ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮೇ 27ರಂದು ನಗರಕ್ಕೆ ಹಿಂದಿರುಗುವರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more