ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ನೇ ತರಗತಿಗೆ ಎಬಿಸಿಡಿ ಬೇಡ : ಜೂ.1ರಿಂದ ಪ್ರತಿಭಟನೆ

By Staff
|
Google Oneindia Kannada News

ಬೆಂಗಳೂರು : ಜೂನ್‌ನಿಂದ ಆರಂಭವಾಗಲಿರುವ ಹೊಸ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿಯಲಿದ್ದಾರೆ.

ಈ ಮಧ್ಯೆ ಒಂದನೇ ತರಗತಿಯಿಂದ ಇಂಗ್ಲಿಷ್‌ ಭಾಷೆ ಕಲಿಸಲು ಮುಂದಾಗಿರುವ, ರಾಜ್ಯಸರ್ಕಾರದ ಧೋರಣೆ ವಿರುದ್ಧ ಪ್ರತಿರೋಧಗಳು ವ್ಯಕ್ತವಾಗಿವೆ. ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು, ಜೂ.1ರಿಂದ ಹೋರಾಟ ನಡೆಸಲು ಮುಂದಾಗಿವೆ.

ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಸುವ ಮೂಲಕ, ನಾಡು-ನುಡಿಯ ಬೇರುಗಳನ್ನು ಸಡಿಲ ಮಾಡಲು ಕುಮಾರಸ್ವಾಮಿ ಸರ್ಕಾರ ಮುಂದಾಗಿದೆ. ಕೂಡಲೇ ತಮ್ಮ ನಿರ್ಧಾರ ಬದಲಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರವಾಗಿ ಹೋರಾಟ ಸಂಘಟಿಸುವುದಾಗಿ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ ಎಚ್ಚರಿಸಿದ್ದಾರೆ.

ಹೋರಾಟದ ಸ್ವರೂಪ ಮತ್ತು ಮುಂದಿನ ಹೆಜ್ಜೆ ಚರ್ಚಿಸಲು ಮೇ.29ರಂದು ಸಭೆ ಕರೆದಿದ್ದೇವೆ. ಸಭೆಯಲ್ಲಿ ನಾಡಿನ ಹಿತ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಚಂದ್ರಶೇಖರ ಪಾಟೀಲ ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X