ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಶತಕ : ಭಾರತ 610-3 ಡಿಕ್ಲೇರ್‌ ; ಬಾಂಗ್ಲಾ ತತ್ತರ

By Staff
|
Google Oneindia Kannada News

Dinesh Karthik showing the bat at spectators, after completing his maiden Century ಢಾಕಾ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ, ಭಾರತದ ಮೊದಲ ನಾಲ್ವರು ಆಟಗಾರರು ಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಎರಡನೇ ದಿನದ ಆಟ ಮುಂದುವರಿಸಿದ ಭಾರತ ಒಟ್ಟು 3 ವಿಕೆಟ್‌ ಕಳೆದುಕೊಂಡು 610 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಭಾರತೀಯರ ಬ್ಯಾಟಿಂಗ್‌ ಆರ್ಭಟಕ್ಕೆ ಬಾಂಗ್ಲಾ ತಂಡದ ಬೌಲರುಗಳು ತತ್ತರಿಸಿಹೋದರು.

Rahul Dravidತನ್ನ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ ದಿನದಾಟ ಮುಗಿದಾಗ, 5 ವಿಕೆಟ್‌ ಕಳೆದುಕೊಂಡು 58ರನ್‌ ಗಳಿಸಿ ಶೋಚನೀಯ ಸ್ಥಿತಿಯಲ್ಲಿತ್ತು. ಜಹೀರ್‌ ಖಾನ್‌ 3, ಆರ್‌ಪಿ ಸಿಂಗ್‌ ಹಾಗೂ ಅನಿಲ್‌ ಕುಂಬ್ಳೆ ತಲಾ ಒಂದು ವಿಕೆಟ್‌ ಗಳಿಸಿದರು.

ಬೆಳಗ್ಗಿನ ಅವಧಿ :

  • 109 ಇನ್ನಿಂಗ್ಸ್‌ಗಳಲ್ಲಿ 65 ಬಾರಿ ಶತಕದ ಜತೆಯಾಟದಲ್ಲಿ ಭಾಗಿಯಾಗಿ, ವಿಶ್ವದಲ್ಲಿ ಅತಿಹೆಚ್ಚು ಶತಕದ ಜತೆಯಾಟದಲ್ಲಿ ಪಾಲ್ಗೊಂಡ ಕೀರ್ತಿಗೆ ಪಾತ್ರರಾಗಿದ್ದ ರಾಹುಲ್‌ ದ್ರಾವಿಡ್‌ ದಿನದಾಟವನ್ನು ಉತ್ತಮವಾಗಿ ಆರಂಭಿಸಿದರು.
  • ನಿನ್ನೆ 88 ರನ್‌ ಹೊಡೆದಿದ್ದ ದ್ರಾವಿಡ್‌ ಇಂದು ತಮ್ಮ 24 ನೇ ಶತಕ ದಾಖಲಿಸಿದರು. 144 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್‌ ಅವರ ಶತಕದಲ್ಲಿ ಸೇರಿತ್ತು.
  • ತೆಂಡೂಲ್ಕರ್‌ ಜತೆಗೆ ದ್ರಾವಿಡ್‌ 31.2 ಓವರ್‌ಗಳಲ್ಲಿ 127 ರನ್‌ಗಳ ಜತೆಯಾಟ ದಾಖಲಿಸಿದರು.
  • 108.2 ಓವರ್‌ಗಳ ನಂತರ ಭಾರತದ ಮೊತ್ತ 408ರನ್ನಾಗಿದ್ದಾಗ, ದ್ರಾವಿಡ್‌ ರೂಪದಲ್ಲಿ ಮೊದಲ ವಿಕೆಟ್‌ ಪತನ.
  • ರಫೀಕ್‌ ಬೌಲಿಂಗ್‌ನಲ್ಲಿ ಪಾಯಿಂಟ್‌ನಲ್ಲಿದ್ದ ಓಮರ್‌ಗೆ ಕ್ಯಾಚಿತ್ತು ಔಟಾಗುವ ಮುನ್ನ , ದ್ರಾವಿಡ್‌ 176 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿದ 129 ರನ್‌ಗಳಿಸಿದ್ದರು.
  • 21 ವರ್ಷದ ದಿನೇಶ್‌ ಕಾರ್ತಿಕ್‌ ಪುನಃ ಆಡಲು ಬಂದು, ತಮ್ಮ 13ನೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. 180 ಎಸೆತಗಳಲ್ಲಿ 13 ಬೌಂಡರಿಗಳನ್ನೊಳಗೊಂಡ ಅವರ ಶತಕ ಆಕರ್ಷಕವಾಗಿತ್ತು.
Waseem Jafferಭೋಜನ ವಿರಾಮ : ಮೊತ್ತ 442/1, ತೆಂಡೂಲ್ಕರ್‌ 63 ರನ್‌ (122 ಎಸೆತಗಳು 3 ಬೌಂಡರಿ, 1 ಸಿಕ್ಸರ್‌)

ನಿನ್ನೆ ವಿಕೆಟ್‌ ನಷ್ಟವಿಲ್ಲದೆ 329 ಗಳಿಸಿದ್ದ ಭಾರತ ಇಂದು ಮೊದಲ ಅವಧಿಯ 27 ಓವರ್‌ಗಳಲ್ಲಿ 116 ರನ್‌ಗಳಿಸಿ ರಾಹುಲ್‌ ದ್ರಾವಿಡ್‌ ರೂಪದಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು.

ಭೋಜನದ ನಂತರದ ಅವಧಿ :

  • ಕಾರ್ತಿಕ್‌ ಬೌಂಡರಿಗಳನ್ನು ಪೇರಿಸುವತ್ತ ಸಾಗಿದರೆ, ಸಚಿನ್‌ ಒಂದು , ಎರಡು ರನ್‌ ಗಳಿಸುತ್ತ ಪ್ರೇಕ್ಷಕರಿಗೆ ಬೋರು ಹೊಡೆಸಿದರು.
  • ಕಾರ್ತಿಕ್‌ 126 ರನ್‌ ಗಳಿಸಿದ್ದಾಗ ಮೊರ್ತಜಾ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರೂ, ಖಲೀದ್‌ ಮಸೂದ್‌ ಕೈಚೆಲ್ಲಿದ ಪರಿಣಾಮ ಜೀವದಾನ ಪಡೆದರು.
  • ಆದರೆ ಕಾರ್ತಿಕ್‌ 129 ರನ್‌ ಗಳಿಸಿ ಮೊರ್ತಜಾ ಬೌಲಿಂಗ್‌ನಲ್ಲಿ ಬಷರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಮೊತ್ತದಲ್ಲಿ 212 ಎಸೆತಗಳಲ್ಲಿ 16 ಬೌಂಡರಿಗಳಿದ್ದವು.
  • ನಂತರ ಗಂಗೂಲಿ ಹಾಗೂ ತೆಂಡೂಲ್ಕರ್‌ ತಂಡದ ಮೊತ್ತ ಹೆಚ್ಚಿಸಲು ತಿಣುಕಾಡಿದರು. 62 ಎಸೆತಗಳಲ್ಲಿ ಈ ಜೋಡಿ 32 ರನ್‌ ಗಳಿಸಿದ್ದಾಗ, 15 ರನ್‌ ಗಳಿಸಿದ್ದ ಗಂಗೂಲಿ ರಫೀಕ್‌ಗೆ ಬಲಿಯಾದರು.
  • ಗಂಗೂಲಿಯ ನಂತರ ಬಂದ ಮಹೇಂದ್ರಸಿಂಗ್‌ಧೋನಿ ಆರಾಮವಾಗಿ 50 ಎಸೆತಗಳಲ್ಲಿ 51 ರನ್‌ ಬಾರಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳಿದ್ದವು.
Sachin Tendulkarಶತಕಗಳ ದಾಖಲೆ:

ತೆಂಡೂಲ್ಕರ್‌ ನಿಧಾನಗತಿಯಲ್ಲಿ ತಮ್ಮ 37 ನೇ ಶತಕ ಪೂರೈಸಿದರು. ಟೆಸ್ಟ್‌ ಇತಿಹಾಸದಲ್ಲಿ ಭಾರತದ ಪರ ಮೊದಲ ನಾಲ್ಕು ಜನ ಆಟಗಾರರು ಶತಕ ಗಳಿಸಿದ ಸಾಧನೆ ಮಾಡಿದಂತಾಯಿತು.

ಆದರೆ ತೆಂಡೂಲ್ಕರ್‌ 50 ರಿಂದ 100 ರನ್‌ ಗಳಿಸಲು 92 ಎಸೆತಗಳನ್ನು ಉಪಯೋಗಿಸಿದ್ದು, ಶತಕ ಗಳಿಸುವುದಕ್ಕಾಗಿಯೇ ನಿಧಾನಗತಿಯ ಆಟಕ್ಕೆ ಮೊರೆ ಹೋದಂತೆ ತೋರುತ್ತಿತ್ತು. ತೆಂಡೂಲ್ಕರ್‌ರವರ ಸ್ಟ್ರೈಕ್‌ ರೇಟ್‌ ಶೇ. 53.98. ಅವರ ಆಟದ ವೈಖರಿಯನ್ನು ಸೂಚಿಸುತ್ತದೆ.

(ದಟ್ಸ್‌ಕನ್ನಡ ನ್ಯೂಸ್‌ಡೆಸ್ಕ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X