• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈ:ಡಬ್ಲ್ಯುಟಿಸಿ ಧ್ವಂಸಕ್ಕೆ ಇಂದು ಉಗ್ರರ ಮುಹೂರ್ತ?

By Staff
|


ಮುಂಬೈನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ ಜಂಟಿ ಕಟ್ಟಡಗಳನ್ನು, ಇಂದು(ಮೇ.24) ಧ್ವಂಸ ಮಾಡುವುದಾಗಿ ಉಗ್ರಗಾಮಿ ಸಂಘಟನೆಯಾಂದು ಬೆದರಿಕೆಯಾಡ್ಡಿದೆ. ಈ ಬಗೆಗೊಂದು ವಿಶೇಷ ವರದಿ.

WTC Mumbai-24 May-Blasts-Security aspectsಮುಂಬಯಿ : ಇತ್ತೀಚೆಗೆ ಹೈದರಾಬಾದ್‌ ಮತ್ತು ಗೋರಖಪುರಗಳಲ್ಲಿ ಬಾಂಬ್‌ ಸ್ಫೋಟದ ಬಗೆಗೆ ನಾವೆಲ್ಲ ಓದಿದ್ದೇವೆ. ಇದೇ ಸಮಯದಲ್ಲಿ, 1993ರಲ್ಲಿ ಮುಂಬಯಿಯಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟಗಳ ತನಿಖೆ ಮುಕ್ತಾಯ ಹಂತಕ್ಕೆ ಬರುತ್ತಿದೆ. ನ್ಯಾಯಾಲಯವು ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದಾರೆ. ಪರಿಸ್ಥಿತಿ ಚಿತ್ರ ಹೀಗಿರುವಾಗಲೇ ಮುಂಬಯಿಯ ವಾಣಿಜ್ಯ ಕೇಂದ್ರಕ್ಕೊಂದು ಆಘಾತಕಾರೀ ಸುದ್ದಿ ಬಂದಿದೆ.

ಇಲ್ಲಿಯ ಕಫೆ ಪರೇಡ್‌ ಪ್ರದೇಶದಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ ಜಂಟಿ ಕಟ್ಟಡಗಳಾದ ಐಡಿಬಿಐ ಟವರ್‌ (25 ಅಂತಸ್ತುಗಳ ಕಟ್ಟಡ) ಮತ್ತು ವಾಣಿಜ್ಯ ಕೇಂದ್ರ (32 ಅಂತಸ್ತುಗಳ ಕಟ್ಟಡ) ಇವೆರಡನ್ನೂ ಸ್ಫೋಟಿಸುವುದಾಗಿ ಲಷ್ಕರ್‌-ಎ-ತೊಯಬಾ ಸಂಘಟನೆಯಿಂದ ಎಂದು ಹೇಳಲಾದ ಪತ್ರವೊಂದು ಮೊನ್ನೆಯ ದಿನ ಅಂಚೆಯ ಮೂಲಕ ಬಂದಿದೆ. ತಕ್ಷಣ ಕಾರ್ಯೋನ್ಮುಖರಾದ ಕಟ್ಟಡಗಳ ಆಡಳಿತ ಮಂಡಳಿ, ಪೊಲೀಸರಿಗೆ ದೂರು ಸಲ್ಲಿಸಿದೆ.

ನಿನ್ನೆಯ ದಿನ ಬೆಳಗ್ಗೆ ಎಂದಿನಂತೆ ನಾನು ಕಚೇರಿಗೆ ಬರುವಾಗ, ಎರಡು ಪೊಲೀಸರ ತುಕಡಿಗಳು ಕಟ್ಟಡಗಳ ಮುಂಭಾಗದಲ್ಲಿಯೇ ಇದ್ದು, ಹೋಗ ಬರುವವರೆಲ್ಲರನ್ನೂ ತಪಾಸಿಸುತ್ತಿದ್ದರು. ಅದರಲ್ಲೇನೂ ನನಗೆ ವಿಶೇಷ ಕಾಣಿಸಲಿಲ್ಲ. ಆದರೆ, ಸ್ವಲ್ಪ ಕಾಲದಲ್ಲಿಯೇ ನಮ್ಮ ಬ್ಯಾಂಕಿನ ಸುರಕ್ಷಾ ಅಧಿಕಾರಿಗಳು ಸುತ್ತೋಲೆಯನ್ನು ಹೊರಡಿಸಿದ್ದರು.

ವಿಶ್ವ ವ್ಯಾಪಾರ ಕೇಂದ್ರದವರಿಂದ ಬಂದಿರುವ ಮಾಹಿತಿ ಪ್ರಕಾರ, ಲಷ್ಕರ್‌-ಎ-ತೊಯಬಾ ಉಗ್ರಗಾಮಿ ಸಂಘಟನೆ 24ನೇ ತಾರೀಖಿನಂದು, ಸ್ಫೋಟಕಗಳ ಸಹಾಯದಿಂದ ಭಯೋತ್ಪಾದನೆ ಚಟುವಟಿಕೆಗಳನ್ನು ಮುಂದುವರಿಸುವರು, ಹಾಗಾಗಿ ನಮ್ಮ ಕಚೇರಿಯ ಸುರಕ್ಷಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂಬುದು ಸುತ್ತೋಲೆ ಮುಖ್ಯಾಂಶ.

ಎಲ್ಲರೂ ಪರಿಚಯ ಪತ್ರವನ್ನು ಧರಿಸಿರಬೇಕು, ಯಾವುದೇ ಕಾಲದಲ್ಲಿ, ಕಚೇರಿಯ ಎಲ್ಲೇ ಆಗಲಿ ತಪಾಸಣೆಯನ್ನು ಮಾಡಬಹುದು - ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದ್ದರು. ಅದಲ್ಲದೇ ಆಗಬಹುದಾದ ಅನಾಹುತಗಳನ್ನು ತಡೆಯಲು, ಪ್ರತಿ ಮಾಳಿಗೆಗಳಲ್ಲೂ ತಂಡವನ್ನು ರೂಪಿಸಿ, ತಂಡದಲ್ಲಿರುವವರ ಹೆಸರುಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಯಾವುದೇ ಅನಾಹುತದ ಸೂಚನೆ ಕಂಡು ಬಂದರೂ ಅಥವಾ ತಿಳಿದು ಬಂದರೂ, ತಕ್ಷಣ ಕಂಟ್ರೋಲ್‌ ರೂಮಿಗೆ ತಿಳಿಸಬೇಕು. ತಂಡದವರ ಸೂಚನೆ ಮೇರೆಗೆ, ಅತಿ ಕಡಿಮೆ ಸಮಯದಲ್ಲಿ ಕಟ್ಟಡದಿಂದ ಹೊರಬರಬೇಕು ಎಂದು ತಿಳಿಸಿದ್ದರು. ಈ ವಿಷಯವು ಟೀವಿಯ ವಾರ್ತಾ ಪ್ರಸಾರದಲ್ಲಿಯೂ ಬಿತ್ತರವಾಯಿತು..

ಇಂದು ಅಂದರೆ ಗುರುವಾರ(ಮೇ 24), ಉಗ್ರಗಾಮಿಗಳು ಸೂಚಿಸಿರುವ ದಿನ ಕಟ್ಟಡದ ಭದ್ರತಾ ವ್ಯವಸ್ಥೆಯನ್ನು ಚಾಚೂ ತಪ್ಪದಂತೆ ಹೆಚ್ಚಿನ ಮುತುವರ್ಜಿಯಿಂದ ಬಿಗಿಗೊಳಿಸಿದ್ದಾರೆ. ಕಟ್ಟಡಗಳ ಸಂಕೀರ್ಣಕ್ಕೆ ಬರಲು ಇರುವ 8 ಗೇಟುಗಳಲ್ಲಿ 6 ಗೇಟುಗಳನ್ನು ಮುಚ್ಚಲಾಗಿದ್ದು, ಇರುವ ಎರಡು ಗೇಟುಗಳಲ್ಲಿ ಒಂದರಿಂದ ಒಳಗೆ ಬರಲು ಮತ್ತು ಇನ್ನೊಂದರಿಂದ ಹೊರ ಹೋಗಲು ವ್ಯವಸ್ಥೆ ಮಾಡಿದ್ದಾರೆ.

ಪರಿಚಯ ಪತ್ರ ಹೊಂದಿರದೇ ಇರುವವರನ್ನು ಒಳಗೆ ಬಿಡುತ್ತಿಲ್ಲ. ಅತಿಥಿಗಳು ಅಥವಾ ಸಂದರ್ಶಕರುಗಳನ್ಯಾರನ್ನೂ ಒಳಗೆ ಬಿಡುತ್ತಿಲ್ಲ. ಕಟ್ಟಡದೊಳಗಿರುವ ಐಡಿಬಿಐ, ಎಕ್ಸಿಮ್‌ ಬ್ಯಾಂಕ್‌, ಆರ್‌ಬಿಐ ಮತ್ತಿತರೇ ಕಛೇರಿಗಳು ಸಂದರ್ಶನ ಅಥವಾ ಮೀಟಿಂಗುಗಳನ್ನೂ ಮಾಡಬಾರದೆಂದು ತಿಳಿಸಿದ್ದಾರೆ.

ನನ್ನಲ್ಲಿ ಉದ್ಭವಿಸಿರುವ ಪ್ರಶ್ನೆಗಳು ಹತ್ತಾರು. ಉಗ್ರಗಾಮಿಗಳು ಹೇಳಿ-ಕೇಳಿ ಆಕ್ರಮಣವನ್ನು ಮಾಡುವರೇ? ಹಾಗೆ ಹೇಳಿದರೆ ಇಷ್ಟೆಲ್ಲಾ ಮುತುವರ್ಜಿ ವಹಿಸಿ ಸುರಕ್ಷಾ ಕಾರ್ಯಕ್ರಮವನ್ನು ಕೈಗೊಳ್ಳುವವರು, ಎಂದಿಗೂ ಇದೇ ತರಹದ ಕೆಲಸವನ್ನು ಮಾಡಲಾಗುವುದಿಲ್ಲವೇ?
ಸುರಕ್ಷಾ ಕರ್ಮಿಗಳು ಮಾತ್ರವಲ್ಲದೇ ಸಾಮಾನ್ಯ ಜನಗಳೂ ಸದಾ ಕಾಲ ಸುರಕ್ಷೆಯ ಬಗ್ಗೆ ಅರಿವು ತೋರಿದರೆ, ದುರ್ಘಟನೆಗಳನ್ನು ತಡೆಯಲಾಗುವುದಿಲ್ಲವೇ? ಇಂತಹ ಮುನ್ನೆಚ್ಚರಿಕೆ ಅಥವಾ ಸೂಚನೆಗಳು ಬಂದಾಗ ತೋರುವ ಆಸಕ್ತಿಯನ್ನು ನಿತ್ಯ ಬದುಕಿನಲ್ಲಿ ಸದಾ ಅಳವಡಿಸಿಕೊಳ್ಳುವಂತೆ ಮಾಡಬಹುದಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more