ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಈ ಬೆಕ್ಕಿನ ಬೆಲೆ ಕೇವಲ ಒಂದೂವರೆ ಲಕ್ಷ!

By Staff
|
Google Oneindia Kannada News

ಬೆಂಗಳೂರು : ಬೆಕ್ಕೆ ಬೆಕ್ಕೆ ಏನಿದು ಸೊಕ್ಕೆ? ಅನ್ನುತ್ತಾ ಮೂಗು ಮುರಿಯುವಂತಿಲ್ಲ. ಇದು ಪರ್ಷಿಯನ್‌ ಬೆಕ್ಕು. ಇದರ ಬೆಲೆ ಕೇವಲ ಒಂದೂವರೆ ಲಕ್ಷ! ಕಳ್ಳರಿಂದ ಅಪಹರಿಸಲ್ಪಟ್ಟಿದ್ದ ಈ ಬೆಕ್ಕು ಹೇಗೋ ತನ್ನ ಒಡೆಯನನ್ನು ಮತ್ತೆ ಸೇರಿಕೊಂಡಿದೆ.

ಜಯನಗರದ ನಾಲ್ಕನೇ ಟಿ ಬ್ಲಾಕ್‌ನಲ್ಲಿರುವ ಮಹಮದ್‌ ಆಸಿನ್‌ ಬಾಬಾ ಮನೆಯಲ್ಲಿ ಈ ಪರ್ಷಿಯನ್‌ ಬೆಕ್ಕು ವಾಸ ಮಾಡುತ್ತಿದೆ. ಮಹಮದ್‌ ಆಸಿನ್‌ ಮಗ ಬೆಕ್ಕಿನ ಜೊತೆ ಆಟವಾಡುತ್ತಿದ್ದಾಗ, ಇಬ್ಬರು ಅಪರಿಚಿತರು ಬೆಕ್ಕನ್ನು ಅಪಹರಿಸಿದ್ದರು.

ಬೆಕ್ಕನ್ನು ಕಳೆದುಕೊಂಡ ಮಹಮದ್‌ ಆಸಿನ್‌ ಬಾಬಾ ಮನೆಯವರು ನೋವಿನಲ್ಲಿದ್ದರು. ತಮ್ಮ ಸಂಕಟವನ್ನು ಟೀವಿ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಜೊತೆಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇತ್ತ ಬೆಕ್ಕನ್ನು ಕದ್ದ ಅಪರಿಚಿತರು, 1000 ರೂ.ಗೆ ಯಾರಿಗೋ ಮಾರಾಟ ಮಾಡಿದ್ದರು. ಬೆಕ್ಕು ಖರೀದಿ ಮಾಡಿದವರು, ಟೀವಿಯಲ್ಲಿ ಬಂದ ಸುದ್ದಿ ಕಂಡ ನಂತರ, ಪೊಲೀಸ್‌ ಠಾಣೆಗೆ ಬೆಕ್ಕನ್ನು ಒಪ್ಪಿಸಿದರು. ಈಗ ತನ್ನ ಒಡೆಯನೊಂದಿಗೆ ಬೆಕ್ಕು ಆರಾಮವಾಗಿದೆ.

ಅಂದ ಹಾಗೇ ಈ ಬೆಕ್ಕು ಹಾಲು ಕುಡಿಯುವುದಿಲ್ಲ. ಮನೆಯಲ್ಲಿರುವ ಇಲಿ ಹಿಡಿಯುವುದಿಲ್ಲ. ಬೆಕ್ಕಿಗಾಗಿಯೇ ತಯಾರಿಸಲಾದ ವಿಶೇಷ ಆಹಾರವನ್ನು ಮಾತ್ರ, ಅದು ಸ್ವೀಕರಿಸುತ್ತದೆ. ಈ ಆಹಾರದ ಬೆಲೆ ಅರ್ಧ ಕಿಲೋಗೆ 300 ರುಪಾಯಿ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X