• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಗರದ ಶಿವಾನಂದನ್‌ಗೆ ಚೆಸ್‌ಚಾಂಪಿಯನ್‌ಷಿಪ್‌ ಕಿರೀಟ

By Staff
|

Sagar taluks Sivanandan wins state FIDE Chess Championshipಬೆಂಗಳೂರು : ಸಾಗರದ ಬಿ.ಎಸ್‌.ಶಿವಾನಂದನ್‌, ಎರಡನೇ ರಾಜ್ಯ ಮಟ್ಟದ ಫೀಡೆ ಶ್ರೇಯಾಂಕಿತ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದಾರೆ.

ಮಲ್ಲೇಶ್ವರಂ ಕ್ಲಬ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶಿವಾನಂದ್‌ ಸಂಭವನೀಯ 11 ಅಂಕಗಳ ಪೈಕಿ 9 ಅಂಕ ಗಳಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರಿನ ಎಂ.ಎಸ್‌.ತೇಜ್‌ಕುಮಾರ್‌ ಕೂಡ 9 ಅಂಕಗಳನ್ನು ಗಳಿಸಿದರು. ಆದರೆ ಮೂರನೇ ಸುತ್ತಿನಲ್ಲಿ ಅವರು ಸುಶ್ರುತ ರೆಡ್ಡಿ ಎದುರು ಬೇಗನೆ ಡ್ರಾ ಮಾಡಿಕೊಂಡ ಪರಿಣಾಮ ಪ್ರಶಸ್ತಿ ಗಳಿಸಲು ಅಸಾಧ್ಯವಾಯ್ತು.

ಚಾಂಪಿಯನ್‌ಷಿಪ್‌ನ ಕೊನೆಯ ಸುತ್ತಿನ ಪಂದ್ಯಗಳು ಕುತೂಹಲಕಾರಿಯಾಗಿದ್ದವು. ವಿಶೇಷವಾಗಿ ಅರವಿಂದ್‌ ಶಾಸ್ತ್ರಿ, ತೇಜ್‌ಕುಮಾರ್‌ ನಡುವಿನ ಸೆಣಸಾಟ ಗಮನಸೆಳೆಯಿತು. ಹಾಲಿ ಚಾಂಪಿಯನ್‌ ಎನ್‌.ಸಂಜಯ್‌ ನಿರಾಶಾದಾಯಕ ಪ್ರದರ್ಶನ ನೀಡಿ ಐದನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.

ಅಂತಿಮ ಸ್ಥಾನಮಾನ :

14 ವರ್ಷ ಮೇಲ್ಪಟ್ಟವರ ವಿಭಾಗ :

1.ಬಿ.ಎಸ್‌.ಶಿವಾನಂದನ್‌

2.ಎಂ.ಎಸ್‌.ತೇಜ್‌ಕುಮಾರ್‌

3.ಅರವಿಂದ್‌ ಶಾಸ್ತ್ರಿ

4.ಶ್ರೀರಾಮ್‌ ಸರ್ಜಾ

14 ವರ್ಷದೊಳಗಿನವರ ವಿಭಾಗ :

1.ಎ.ಬಾಲಕಿಶನ್‌

2.ಆರ್‌.ನಾಗೇಶ್‌

3.ಡಿ.ಯಶಸ್‌

ಮಹಿಳಾ ವಿಭಾಗ :

1.ಕೆ.ಮಾನಸಾ

2.ಎಸ್‌.ಪ್ರಿಯಾಂಕಾ

3.ಸೃಷ್ಟಿ ಜೆ. ಶೆಟ್ಟಿ

ಹಿರಿಯರ ವಿಭಾಗ : ಎನ್‌.ಆರ್‌.ರಘುರಾಮನ್‌

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more