ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ಬಲೆಗೆ ಹೆಚ್‌.ಡಿ.ದೇವೇಗೌಡರ ಸಹೋದರ!

By Staff
|
Google Oneindia Kannada News

ವಾಸ್ಕೋ, ಗೋವಾ : ಸ್ಥಳೀಯ ಚುನಾವಣೆಯಲ್ಲಿ ಹಂಚಲು 9ಲಕ್ಷರೂ. ಒಯ್ಯುತ್ತಿದ್ದ ಜೆಡಿಎಸ್‌ ಕಾರ್ಯಕರ್ತ ಚಿಕ್ಕೆಗೌಡ ಅವರಿಂದ, ಪೊಲೀಸರು ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಾಗ್‌ ಮೊಲೊ ಬೀಚ್‌ ರೆಸಾರ್ಟ್‌ ಮೇಲೆ ದಾಳಿ ಮಾಡಿದ ಪೊಲೀಸರು, ಮಾಜಿ ಪ್ರಧಾನಿ ದೇವೇಗೌಡರ ತಮ್ಮ ಚಿಕ್ಕೆಗೌಡ ಅವರ ಬಳಿಯಿದ್ದ ಸೂಟ್‌ಕೇಸನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 500 ರೂ. ನೋಟುಗಳ 9ಲಕ್ಷ ರೂಪಾಯಿ ಹಣವಿತ್ತು. ಜೂನ್‌ 2ರ ಚುನಾವಣೆ ಖರ್ಚು-ವೆಚ್ಚಕ್ಕೆ ಈ ಹಣವನ್ನು ಬಳಸಲು ಉದ್ದೇಶಿಸಲಾಗಿತ್ತು ಎಂದು ಉಪ ಅಯುಕ್ತೆ ಸುನೀತಾ ಬನ್ಸಾಲ್‌ ಹೇಳಿದ್ದಾರೆ.

ಈ ವಿಷಯವನ್ನು ಖಚಿತಪಡಿಸಿದ ಜಿಲ್ಲಾ ಆಯುಕ್ತ ಹಾಗೂ ಚುನಾವಣಾಧಿಕಾರಿ ಸಂತೋಷ್‌ ವೈದ್ಯ, ಚಿಕ್ಕೆಗೌಡ ಅವರು ಮುಂಬರುವ ಚುನಾವಣೆಯಲ್ಲಿ ಗೋವಾ ಜೆಡಿಎಸ್‌ನ ನಿರ್ವಹಣೆ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಪೊಲೀಸರಿಂದ ಅಧಿಕೃತವಾಗಿ ದೂರು ಬಂದ ನಂತರ, ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಚುನಾವಣೆಗೆ ಹಣ ಗೌಡರ ಮನೆಯಿಂದ ಬಂತೆ?

ಚುನಾವಣಾಧಿಕಾರಿಗಳಿಗೆ ಸುಮಾರು 60 ಲಕ್ಷ ಲಂಚ ನೀಡಲು ಕರ್ನಾಟಕದಿಂದ ಕಾರ್ಯಕರ್ತರು ಬಂದಿರುವರೆಂಬ ಮಾಹಿತಿ ಮೇಲೆ ದಾಳಿ ಮಾಡಲಾಯಿತು. ಆದರೆ 9 ಲಕ್ಷ ಮಾತ್ರ ಕೈಸೇರಿತು. ಉಳಿದ ಹಣವನ್ನು ಈಗಾಗಲೇ ಹಂಚಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಸದರಿ ಹಣವನ್ನು ದೇವೇಗೌಡರ ಪದ್ಮನಾಭನಗರದ ಮನೆ ‘ಅಮೋಘ ’ದಿಂದ ತರಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ಈ ಮಧ್ಯೆ ‘ಇದು ಪಕ್ಷದ ಹಣ. ಪ್ರತಿಯಾಂದು ಖರ್ಚುವೆಚ್ಚ ದಾಖಲಾಗುತ್ತದೆ. ಚುನಾವಣೆ ಖರ್ಚಿಗಾಗಿ ತಂದಿದ್ದು ’ ಎಂದು ಚಿಕ್ಕೆಗೌಡ ಹೇಳಿಕೆ ನೀಡಿದ್ದಾರೆ.(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X