ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ವಲಸೆ ನೀತಿ ಬದಲು; ಕುಶಲಮತಿಗಳಿಗೆ ಮಣೆ

By Staff
|
Google Oneindia Kannada News

ನವದೆಹಲಿ : ಅಮೆರಿಕದ ವಲಸೆ ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಕೌಟುಂಬಿಕ ಸಂಪರ್ಕಕ್ಕಿಂತ ಕೌಶಲ್ಯ ಹಾಗೂ ಶೈಕ್ಷಣಿಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಹೊಸ ನೀತಿಯಿಂದ ವಲಸಿಗರಿಗೆ ಅನುಕೂಲವಾಗಲಿದೆ. ಈ ಮುಂಚೆ ಕೌಟುಂಬಿಕ ಪುನರ್ಮಿಲನದ ಮೇಲೆ ಅವಲಂಬಿತವಾಗಿದ್ದ ವಲಸೆ ನೀತಿ, ಮೊದಲ ಬಾರಿಗೆ ಔದ್ಯೋಗಿಕ ರಂಗದ ಮೇಲೆ ಕಣ್ಣು ಹಾಯಿಸಿರುವುದು ಭಾರಿ ಬದಲಾವಣೆಯಾಗಿದೆ ಎಂದು ವಲಸೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಗಸ್ಟ್‌ 2007ಕ್ಕೆ ವಲಸೆ ಸುಧಾರಿತ ನೀತಿ ಜಾರಿಗೆ ತರಲು ಅಧ್ಯಕ್ಷ ಬುಷ್‌ ಕಾತರರಾಗಿದ್ದಾರೆ. 2008ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಧಾರಿತ ವಲಸೆ ನೀತಿ ಬಹು ಚರ್ಚೆಯ ವಿಷಯವಾಗುವ ಎಲ್ಲಾ ಸಾಧ್ಯತೆಗಳಿವೆ. ಭಾರತಕ್ಕೆ ಪೂರಕವಾಗಿರುವ ಸುಧಾರಿತ ವಲಸೆ ನೀತಿಯ ಬಗ್ಗೆ ಮುಂದಿನ ವಾರದಿಂದ ಅಮೆರಿಕ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ ನಡೆಯಲಿದೆ.

ಕೌಟುಂಬಿಕ ಆಧಾರಿತ ವ್ಯವಸ್ಥೆಯ ಮೇಲೆ ವಲಸಿಗರಾಗಿ ಅಮೆರಿಕದಲ್ಲಿ ತೊಡಗಿರುವವರಲ್ಲಿ ಭಾರತದ ಗುಜರಾತ್‌, ಪಂಜಾಬ್‌ ಹಾಗೂ ಆಂಧ್ರಪ್ರದೇಶದ ಮೂಲದ ವಲಸಿಗರು ಹೆಚ್ಚಾಗಿದ್ದಾರೆ. ಈ ಸುಧಾರಿತ ವಲಸೆ ನೀತಿ, ಇವರ ಮೇಲೆ ಯಾವ ರೀತಿ ಪರಿಣಾಮ ಬೀರುವುದು ಎಂಬುದನ್ನು ಕಾದು ನೋಡಬೇಕಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X