ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.10ರಿಂದ ಪಿಯುಸಿ ಪೂರಕ ಪರೀಕ್ಷೆ : ಬೆಸ್ಟ್‌ ಆಫ್‌ ಲಕ್‌

By Staff
|
Google Oneindia Kannada News

ಬೆಂಗಳೂರು : ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ಜುಲೈ 10ರಿಂದ 20ರವರೆಗೆ ನಡೆಯಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಪದವಿಪೂರ್ವ ಶಿಕ್ಷಣ ಆಯುಕ್ತ ಎಸ್‌.ಜಿ.ಹೆಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಹಳೆಯ ಪಠ್ಯಕ್ರಮದಲ್ಲಿ ಪೂರಕ ಪರೀಕ್ಷೆ ಬರೆಯಲು ಇದು ಕೊನೆಯ ಅವಕಾಶ. ಈ ಅವಕಾಶದಲ್ಲಿ ಉತ್ತೀರ್ಣರಾಗದವರು, ಮಾರ್ಚ್‌-ಏಪ್ರಿಲ್‌ 2008ರಲ್ಲಿ ನಡೆಯುವ ಪರೀಕ್ಷೆಯಲ್ಲಿ ಹೊಸ ಪಠ್ಯಕ್ರಮಕ್ಕನುಗುಣವಾಗಿ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ವಿವರಿಸಿದರು.

ಸಪ್ಲಿಮೆಂಟರಿ ಪರೀಕ್ಷೆ ಶುಲ್ಕವನ್ನು, ಸಂಬಂಧಪಟ್ಟ ಕಾಲೇಜುಗಳಲ್ಲಿ ಜೂನ್‌ 4ರಂದು ಅಥವಾ ಅದಕ್ಕೂ ಮೊದಲು ಪಾವತಿಸಬಹುದು.

ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ :

ಜುಲೈ 10 : ಇತಿಹಾಸ, ಭೂಗರ್ಭಶಾಸ್ತ್ರ, ಕಂಪ್ಯೂಟರ್‌ ವಿಜ್ಞಾನ

ಜುಲೈ 11 : ಸಮಾಸಶಾಸ್ತ್ರ, ಗಣಿತಶಾಸ್ತ್ರ, ವ್ಯವಹಾರ ಗಣಿತ(ಓಎಸ್‌), ಮೂಲಭೂತ ಗಣಿತ(ಎನ್‌ಎಸ್‌)

ಜುಲೈ 12 : ಇಂಗ್ಲಿಷ್‌

ಜುಲೈ 13 : ಅಕೌಂಟೆನ್ಸಿ, ರಸಾಯನಶಾಸ್ತ್ರ, ಶಿಕ್ಷಣ-1(ಓಎಸ್‌) ಮತ್ತು ಶಿಕ್ಷಣ(ಎನ್‌ಎಸ್‌)

ಜುಲೈ 14 : ರಾಜಕೀಯ ವಿಜ್ಞಾನ, ಸಂಖ್ಯಾಶಾಸ್ತ್ರ, ತರ್ಕಶಾಸ್ತ್ರ

ಜುಲೈ 16 : ಐಚ್ಛಿಕ ಕನ್ನಡ, ಬಿಜಿನೆಸ್‌ ಸ್ಟಡೀಸ್‌, ಭೌತಶಾಸ್ತ್ರ, ಶಿಕ್ಷಣ-2(ಓಎಸ್‌), ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಜುಲೈ 17 : ಇಲೆಕ್ಟ್ರಾನಿಕ್ಸ್‌, ಭೂಗೋಳಶಾಸ್ತ್ರ , ಜೀವಶಾಸ್ತ್ರ ಭಾಗ-2, ಮನೋವಿಜ್ಞಾನ

ಜುಲೈ 18 : ಅರ್ಥಶಾಸ್ತ್ರ, ಜೀವಶಾಸ್ತ್ರ ಭಾಗ-1

ಜುಲೈ 19 : ಕನ್ನಡ, ತಮಿಳು, ತೆಲುಗು, ಮಲಯಾಳಂ, ಅರೇಬಿಕ್‌ ಮತ್ತು ಫ್ರೆಂಚ್‌

ಜುಲೈ 20 : ಹಿಂದಿ, ಮರಾಠಿ, ಉರ್ದು ಮತ್ತು ಸಂಸ್ಕೃತ

ಕಳಪೆ ಫಲಿತಾಂಶ-ಕಾಲೇಜುಗಳಿಗೆ ಶಾಸ್ತಿ...? : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 40ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಕಾಲೇಜುಗಳಿಗೆ, ವಿದ್ಯಾರ್ಥಿಗಳ ಕಳಪೆ ಫಲಿತಾಂಶಕ್ಕೆ ಕಾರಣವೇನು ಎಂದು ಕೇಳಲಾಗುವುದು. ಖಾಸಗಿ ಕಾಲೇಜುಗಳೂ ಈ ನಿಯಮಕ್ಕೆ ಹೊರತಲ್ಲ. ಇಂತಹ ಕಾಲೇಜುಗಳನ್ನು ಗುರುತಿಸುವ ಪ್ರಕ್ರಿಯೆ ಈಗಾಗಲೇ ನಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಆಯುಕ್ತ ಎಸ್‌.ಜಿ.ಹೆಗಡೆ ಸ್ಪಷ್ಟಪಡಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X