ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಕಾರಿ ದರ ಅತಿ ದುಬಾರಿ; ತಟ್ಟೆ ತುಂಬಾ ತಿಳಿಸಾರೇ ರೀ!

By Staff
|
Google Oneindia Kannada News

ಬೆಂಗಳೂರು : ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಹೀಗಾಗಿ ಮನೆಯಲ್ಲಿ ತಿಳಿಸಾರಿನದೇ ದರ್ಬಾರು!

ಕಳೆದ ಹದಿನೈದು ದಿನಗಳಿಗೆ ಹೋಲಿಸಿದರೇ, ತರಕಾರಿ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿವೆ. ಏ.30ರಂದು ರೂ. 20-25ಕ್ಕೆ ದೊರೆಯುತ್ತಿದ್ದ ಕಿಲೋ ಕ್ಯಾರೆಟ್‌ ಇಂದು ರೂ.30-35 ಆಗಿದೆ. ಕಿಲೋ ಬೀನ್ಸ್‌ ರೂ.30-32, ಎಲೆಕೋಸು ರೂ.15-20, ಹಸಿರು ಬಟಾಣಿ ರೂ.100-120 ಆಗಿದೆ. ಉಳಿದ ತರಕಾರಿ ಬೆಲೆಗಳೂ ದುಬಾರಿ.

ಬೇಸಿಗೆಯಲ್ಲಿ ತರಕಾರಿ ಬೆಲೆ, ಬೆಂಗಳೂರಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಸಲ ಕತೆಯೇ ಬೇರೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಿಂದ ತರಕಾರಿ ಹೆಚ್ಚು ಪ್ರಮಾಣದಲ್ಲಿ ಬರುತ್ತಿಲ್ಲ. ನೆರೆಯ ರಾಜ್ಯಗಳಿಂದ ತರಕಾರಿ ತರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ದರ ಹೆಚ್ಚಳವಾಗಿದೆ ಎಂಬುದು ವ್ಯಾಪಾರಿಗಳ ಹೇಳಿಕೆ.

ಮೇ ತಿಂಗಳಲ್ಲಿ ಎಲ್ಲೆಲ್ಲೂ ಮದುವೆಗಳದೇ ಕಾರುಬಾರು. ಹೀಗಾಗಿ ಹೆಚ್ಚೆಚ್ಚು ತರಕಾರಿ ಕಲ್ಯಾಣ ಮಂಟಪಗಳ ಸೇರುತ್ತಿವೆ. ಬೇಡಿಕೆ ಹೆಚ್ಚಳದಿಂದ, ತರಕಾರಿ ದರ ದುಬಾರಿಯಾಗಿದೆ ಎನ್ನುವ ವಾದವೂ ಇದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X