ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ್ಮಾಂಗ ಕಚ್ಚಿದ್ದು ಬೀದಿ ನಾಯಲ್ಲ... ಸಾಕಿದ ನಾಯಿ!

By Staff
|
Google Oneindia Kannada News

ಬೆಂಗಳೂರು : ಬೀದಿ ನಾಯಿ ಅವರ್ನ ಕಚ್ಚಿತು, ಇವರ್ನ ಕಚ್ಚಿತು ಎಂದು ಪತ್ರಿಕೆಗಳು ವರದಿ ಮಾಡುತ್ತಲೇ ಇವೆ. ಟೀವಿ ಚಾನೆಲ್‌ಗಳು, ಅಂತಹ ದೃಶ್ಯಗಳಿಗೆ ಕ್ಯಾಮೆರಾ ಹಿಡಿಯುತ್ತಲೇ ಇವೆ!

ಆದರೆ, ಇಲ್ಲಿ ನೋಡಿ. ಸಾಕಿದ ನಾಯಿಯೇ, ಬಾಲಕನ ಮರ್ಮಾಗವನ್ನು ಕಚ್ಚಿದೆ. ಸಕಾಲಕ್ಕೆ ಆಸ್ಪತ್ರೆ ಸೇರಿದ್ದರಿಂದ, ಪುಣ್ಯಕ್ಕೆ ಬಾಲಕ ಅಪಾಯದಿಂದ ಪಾರಾಗಿದ್ದಾನೆ.

ಅತ್ತಿಗುಪ್ಪೆಯ 10ವರ್ಷದ ಕಿರಣ್‌ ನಾಯಿ ಕಡಿತದಿಂದ ಆಸ್ಪತ್ರೆ ಸೇರಿದ ಬಾಲಕ. ಐಸ್‌ ಕ್ರೀಮ್‌ ಖರೀದಿಸಿ ಮನೆಗೆ ಬಂದ ಕಿರಣ್‌ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಬಾಲಕ ಚೀರಿಕೊಂಡಾಗ, ಸಾರ್ವಜನಿಕರು ತಕ್ಷಣ ಸ್ಥಳಕ್ಕೆ ಬಂದು, ಅಪಾಯ ತಪ್ಪಿಸಿದ್ದಾರೆ.

ಪ್ರಸ್ತುತ ನಾಯಿಯನ್ನು ಪ್ರಾಣಿ ದಯಾ ಸಂಘದ ವಶಕ್ಕೆ ನೀಡಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X