ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಲಿಗೆ: ಕಲಾ ವಿಭಾಗ ಬೇಕಾ?ಜೇಬಲ್ಲಿ 60ಸಾವಿರ ಇದ್ಯಾ?

By Staff
|
Google Oneindia Kannada News

ಬೆಂಗಳೂರು : ನಗರದ ಕಾಲೇಜುಗಳು ಮೊದಲ ಸುತ್ತಿನ ಸುಲಿಗೆಗೆ ಸಜ್ಜಾಗಿವೆ!

ಪಿಯುಸಿ ಫಲಿತಾಂಶಕ್ಕೆ ಮೊದಲೇ, ನಮ್ಮಲ್ಲಿ ಇಷ್ಟಿಷ್ಟು ಫೀಸು ಕೊಟ್ಟರೇ, ಮಾತ್ರ ಪ್ರವೇಶ ಎಂದು ಕಾಲೇಜುಗಳು, ಪೋಷಕರಿಗೆ ಸೂಚನೆ ನೀಡುತ್ತಿವೆ.

ಕಾಲ್‌ ಸೆಂಟರ್‌ ಮತ್ತಿತರ ಕಡೆ ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವುದರಿಂದ, ವಾಣಿಜ್ಯ ಮತ್ತು ಕಲಾ ವಿಭಾಗಕ್ಕೂ ಬೇಡಿಕೆ ಸೃಷ್ಟಿಯಾಗಿದೆ. ಮಹಾವೀರ ಜೈನ್‌ ಕಾಲೇಜಿನಲ್ಲಿ ಕಲಾ ವಿಭಾಗದ ಪದವಿಗೆ ಪ್ರವೇಶ ಬಯಸುವವರ ಜೇಬಲ್ಲಿ 60ಸಾವಿರ ರೂಪಾಯಿ ಇರಲೇಬೇಕು! ಅಲ್ಲದೇ, ಪದವಿಯ ಎರಡನೇ ಮತ್ತು ಮೂರನೇ ವರ್ಷ ತಲಾ 22,600 ಶುಲ್ಕ ಪಾವತಿಸಲು ಸಿದ್ಧರಿಡಬೇಕು.

ದಯಾನಂದ ಸಾಗರ್‌ ಕಾಲೇಜು, ಸೇಂಟ್‌ ಜಾನ್ಸ್‌ ಕಾಲೇಜು, ಎನ್‌ಎಂಕೆಆರ್‌ವಿ -ಹೀಗೆ ನಗರದ ವಿವಿಧ ಕಾಲೇಜುಗಳು ಪ್ರವೇಶಕ್ಕೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಪೋಷಕರು ದೂರಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X