ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಂಪಿಯನ್‌ಷಿಪ್‌ ಆರಂಭ : ವಾರವಿಡೀ ಚೆಸ್‌ ಭರಾಟೆ

By Staff
|
Google Oneindia Kannada News

Second Karnataka State Chess Championship gets underwayಬೆಂಗಳೂರು : ಎರಡನೇ ರಾಜ್ಯ ಮಟ್ಟದ ಚೆಸ್‌ ಚಾಂಪಿಯನ್‌ಷಿಪ್‌, ಮಂಗಳವಾರ ಮಲ್ಲೇಶ್ವರಂ ಕ್ಲಬ್‌ನಲ್ಲಿ ಆರಂಭಗೊಂಡಿದೆ.

ಮಲ್ಲೇಶ್ವರಂ ಸಂಘ(ಎಂಎ)ದ ಅಧ್ಯಕ್ಷ ಎಂ.ಪ್ರಭಾಕರ್‌ ಪಂದ್ಯಾವಳಿ ಉದ್ಘಾಟಿಸಿದರು. 48,000ರೂಪಾಯಿ ನಗದು ಬಹುಮಾನವುಳ್ಳ ಚಾಂಪಿಯನ್‌ಷಿಪ್‌ 6ದಿನಗಳ ಕಾಲ ನಡೆಯಲಿದೆ.

175 ಆಟಗಾರರು ಭಾಗವಹಿಸಲಿರುವ ಈ ಪಂದ್ಯಾವಳಿಯಲ್ಲಿ, ಚೆಸ್‌ನ ಬಾಲಪ್ರತಿಭೆ ಗಿರೀಶ್‌ ಕಶ್ಯಪ್‌ ಸೇರಿದಂತೆ 50ಕ್ಕೂ ಹೆಚ್ಚು ಫೀಡೆ(ವಿಶ್ವ ಚೆಸ್‌ ಫೆಡರೇಷನ್‌) ಮಾಸ್ಟರ್‌ಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.

ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆಯುತ್ತಿದೆ. ಈ ಚಾಂಪಿಯನ್‌ಷಿಪ್‌ನಲ್ಲಿ ಆಯ್ಕೆಯಾಗುವ ನಾಲ್ವರು ಅತ್ಯುತ್ತಮ ಆಟಗಾರರು, ಜೂನ್‌ ತಿಂಗಳು ದಿಂಡಿಗಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಹಾಗಾಗಿ ಪಂದ್ಯಾವಳಿಗೆ ಭಾರೀ ಕುತೂಹಲ ಹುಟ್ಟುಹಾಕಿದೆ.

ಬಹುತೇಕ ಎಲ್ಲ ಜಿಲ್ಲೆಗಳ ಆಟಗಾರರೂ ಭಾಗವಹಿಸಿರುವುದು ಗಮನಾರ್ಹ. ಫೀಡೆ ರೇಟಿಂಗ್‌ನಲ್ಲಿ ಗಮನಸೆಳೆದಿರುವ ಬೆಂಗಳೂರಿನ ಸಂಜಯ್‌.ಎನ್‌, ಶಿವಮೊಗ್ಗ ಜಿಲ್ಲೆ ಸಾಗರದ ಶಿವಾನಂದ.ಬಿ.ಎಸ್‌, ಮೈಸೂರಿನ ಶ್ರೀನಿವಾಸ ಸರ್ಜಾ ಹಾಗೂ ಅರವಿಂದ ಶಾಸ್ತ್ರಿ ಪಂದ್ಯಾವಳಿಯ ಸೀನಿಯರ್‌ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ.

ಗಿರೀಶ್‌ ಕಶ್ಯಪ್‌ 10 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಎಂಟು ವರ್ಷದೊಳಗಿನವರ ಏಷಿಯನ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಕಿರಿಯರ ವಿಭಾಗದಲ್ಲಿ ಗಮನ ಸೆಳೆದಿರುವ ಬಾಲಕ. ಈತ ಕೂಡ ಪಂದ್ಯಾವಳಿಯ ಪ್ರಮುಖ ಆಕರ್ಷಣೆ. ರಾಜ್ಯ ಮಹಿಳಾ ಚಾಂಪಿಯನ್‌ ಶ್ರುತಿ ಕೂಡ ಚಾಂಪಿಯನ್‌ಷಿಪ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.

ನೋಡಿ :
http://www.karnatakachess.com/

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X