ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ ಟ್ಯಾಂಕರ್‌ಗೆ ಬೆಂಕಿ; 4 ಜನ ಸಜೀವ ದಹನ

By Staff
|
Google Oneindia Kannada News

ಬೀದರ್‌: ಪೆಟ್ರೋಲ್‌ ಟ್ಯಾಂಕರ್‌ವೊಂದು ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಸಜೀವ ದಹನವಾದ ಘಟನೆ ಬೀದರ್‌ ಹಾಗೂ ಗುಲ್ಭರ್ಗ ಮುಖ್ಯ ರಸ್ತೆಯ ಹಳ್ಳಿಖೇಡ ಗ್ರಾಮದ ಬಳಿ ಶನಿವಾರ (ಮೇ 12) ಸಂಭವಿಸಿದೆ.

ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗುಲ್ಭರ್ಗ ಕಡೆಯಿಂದ ಬೀದರ್‌ ಕಡೆಗೆ ಬರುತ್ತಿದ್ದ ಟ್ಯಾಂಕರ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿತು. ತಕ್ಷಣವೇ ಬೆಂಕಿ ಹತ್ತಿಕೊಂಡು, ವಾಹನದಲ್ಲಿದ್ದ ಚಾಲಕ ಸಂತೋಷ್‌, ಕ್ಲೀನರ್‌ ಶಿವಕುಮಾರ್‌ ಹಾಗೂ ಮತ್ತಿಬ್ಬರು ಸ್ಥಳದಲ್ಲೇ ಬೆಂಕಿ ಆಹುತಿಯಾಗಿದ್ದಾರೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(ಐಓಸಿ) ಸಂಸ್ಥೆಗೆ ಸೇರಿದ ಇಂಧನ ಟ್ಯಾಂಕರ್‌ಗೆ ಬೆಂಕಿ ಬಿದ್ದ ಪರಿಣಾಮ ಅಕ್ಕಪಕ್ಕದ ಹೊಲಗದ್ದೆಗಳಿಗೂ ಬೆಂಕಿ ತಗುಲಿ ಹಾನಿಯಾಗಿದೆ. ಸುಮಾರು 100 ರಿಂದ 200 ಮೀಟರ್‌ವರೆಗೂ ಪೆಟ್ರೋಲ್‌ ಇಂಧನ ಚೆಲ್ಲಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಾತನೂರ್‌ ಅವರು ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X