ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಬೆಂಗಳೂರಲ್ಲಿ ಬೆಳಗ್ಗೆ 8.30ಕ್ಕೆ ಶಾಲೆಗಳು ಶುರು?

By Staff
|
Google Oneindia Kannada News

ಬೆಂಗಳೂರು : ನಗರದ ಸಾರಿಗೆ ಕಿರಿಕಿರಿ ಕಡಿಮೆ ಮಾಡಲು, ಶಾಲಾ ಸಮಯವನ್ನು ಬದಲಿಸುವ ಸರ್ಕಾರದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ತೀವ್ರ ಶಾಲಾ ಸಮಯ ಬದಲಿ ಮಾಡುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗಲೂ ಶಾಲಾ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.

ಬೆಳಗ್ಗೆ 8.30ಕ್ಕೆ ಶಾಲೆಯನ್ನು ಆರಂಭಿಸುವುದರಿಂದ ಸಂಚಾರ ವ್ಯವಸ್ಥೆ ಸ್ವಲ್ಪ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ನೇತೃತ್ವದಲ್ಲಿ ನಡೆದ ಸಭೆ ವ್ಯಕ್ತ ಪಡಿಸಿದೆ. ಈ ಸಂಬಂಧದ ಆದೇಶ ಸದ್ಯದಲ್ಲೇ ಹೊರಬೀಳಲಿದೆ.

ಬೆಂಗಳೂರು ನಗರಕ್ಕೆ ಸೀಮಿತವಾಗುವಂತೆ ಶಾಲಾ ಸಮಯ ಬದಲಾಗಲಿದ್ದು, ಮುಂದಿನ 3ತಿಂಗಳ ಕಾಲ ಪರಿಸ್ಥಿತಿಯ ಅವಲೋಕನ ನಡೆಯಲಿದೆ. ಹೊಸ ನಿಯಮದ ಪ್ರಕಾರ ಶಾಲಾ ಸಮಯ ಬೆಳಗ್ಗೆ 8.30ರಿಂದ ಮಧ್ಯಾಹ್ನ 3.30. ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಜೊತೆಗೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಸಮಯ ಬದಲಾವಣೆ ಅನ್ವಯವಾಗಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X