• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಲಕ್ಷ ವಿದ್ಯಾರ್ಥಿಗಳ ಪಾಲಿಗಿಂದು ಮಹತ್ವದ ದಿನ!?

By Staff
|

ಬೆಂಗಳೂರು : ನಮ್ಮ ಮಕ್ಕಳು ಡಾಕ್ಟರ್‌ ಆಗಬೇಕು, ಇಂಜಿನಿಯರ್‌ ಆಗಬೇಕು ಎಂದು ಕನಸು ಕಾಣುವ ಪೋಷಕರ ಪಾಲಿಗೆ ಬುಧವಾರ(ಮೇ.09) ಮಹತ್ವದ ದಿನ. ವಿದ್ಯಾರ್ಥಿಗಳ ಪಾಲಿಗೆ ಸತ್ವ ಪರೀಕ್ಷೆಯ ದಿನ.

ಬುಧವಾರ ರಾಜ್ಯದ 1,05,127 ವಿದ್ಯಾರ್ಥಿಗಳು ಸಿಇಟಿ ಎದುರಿಸುತ್ತಿದ್ದಾರೆ. ಸರ್ಕಾರದ ವೃತ್ತಿಪರ ಪ್ರವೇಶ ಪರೀಕ್ಷೆ(ಸಿಇಟಿ) ಬೆಂಗಳೂರಿನ 56ಕೇಂದ್ರ ಸೇರಿದಂತೆ ರಾಜ್ಯದ 205ಕೇಂದ್ರಗಳಲ್ಲಿ ನಡೆಯುತ್ತಿದೆ. ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನು ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ನಡೆಸಲಾಗುತ್ತಿದೆ.

ಸಿಇಟಿ ಬಗ್ಗೆ ಮತ್ತಷ್ಟು ವಿವರ :

  • ಬೆಂಗಳೂರಿನ 56ಕೇಂದ್ರಗಳಲ್ಲಿ 29,571ವಿದ್ಯಾರ್ಥಿಗಳು, ರಾಜ್ಯದ ಇತರೆ 149ಕೇಂದ್ರಗಳಲ್ಲಿ 75,556ವಿದ್ಯಾರ್ಥಿಗಳು ಸಿಇಟಿ ತೆಗೆದುಕೊಂಡಿದ್ದಾರೆ.
  • ಈ ವರ್ಷ ಸಿಇಟಿ ವಿದ್ಯಾರ್ಥಿಗಳ ಸಂಖ್ಯೆ 16ಸಾವಿರ ಅಧಿಕಗೊಂಡಿದೆ.
  • ಬೆಳಗ್ಗೆ 10ರಿಂದ 12.30ರ ತನಕ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ(120 ಅಂಕ), ಮಧ್ಯಾಹ್ನ 2ರಿಂದ 3.20ರ ತನಕ ಗಣಿತಶಾಸ್ತ್ರ(60ಅಂಕ ), ಸಂಜೆ 4ರಿಂದ 5.20ರ ತನಕ ಜೀವಶಾಸ್ತ್ರ(60ಅಂಕ) ಪರೀಕ್ಷೆಗಳು ನಡೆಯಲಿವೆ.
  • ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ, ಸಿಇಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ.
  • (ದಟ್ಸ್‌ ಕನ್ನಡ ವಾರ್ತೆ)

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more