ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಬಿಪಿಓಗೆ ‘ಬೆಸ್ಟ್‌ ಎಂಪ್ಲಾಯರ್‌’ ಎಂಬ ಕೀರ್ತಿ...!

By Staff
|
Google Oneindia Kannada News

Survey rates Wipro BPO as Best Employerಬೆಂಗಳೂರು : ವಿಪ್ರೋ ಸಂಸ್ಥೆ, ಹೊರಗುತ್ತಿಗೆ(ಬಿಸಿನೆಸ್‌ ಪ್ರೋಸೆಸ್‌ ಔಟ್‌ಸೋರ್ಸಿಂಗ್‌) ಕ್ಷೇತ್ರದಲ್ಲಿ ದೇಶದ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಗಳಲ್ಲೊಂದು ಎಂದು ‘ಬೆಸ್ಟ್‌ ಎಂಪ್ಲಾಯರ್ಸ್‌ ಹೆವಿಟ್‌ ಸಮೀಕ್ಷೆ-2007’ ಹೇಳಿದೆ.

ವಿಪ್ರೋ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಈಓ) ಟಿ.ಕೆ.ಕುರಿಯನ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹೊರಗುತ್ತಿಗೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 230 ಸಂಸ್ಥೆಗಳ ಪೈಕಿ, ಒಟ್ಟು 25 ಸಂಸ್ಥೆಗಳನ್ನು ಅತ್ಯುತ್ತಮವಾದವುಗಳೆಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ವಿಪ್ರೋ 11ನೇ ಸ್ಥಾನ ಪಡೆದಿದೆ ಎಂದು ವಿವರಿಸಿದರು.

ಉದ್ಯೋಗದ ಪರಿಸರಕ್ಕೆ ಸಂಬಂಧಿಸಿದಂತೆ ಹೆವಿಟ್‌ ಸಮೀಕ್ಷೆ ಜಾಗತಿಕ ಮಾನದಂಡಗಳನ್ನು ಇರಿಸಿಕೊಂಡಿದೆ. ಈ ಸಮೀಕ್ಷೆಯಲ್ಲಿ ಸಂಸ್ಥೆಗೆ ಸ್ಥಾನ ದೊರೆತಿರುವುದು ಒಂದು ಗೌರವವೇ ಸರಿ. ಸಮೀಕ್ಷೆ, ಸಂಸ್ಥೆಯ ಮೌಲ್ಯಾಧಾರಿತ ಹಾಗೂ ಗ್ರಾಹಕ ಕೇಂದ್ರಿತ ಸೇವೆಯನ್ನು ಗುರುತಿಸಿರುವುದು ಹರ್ಷ ತಂದಿದೆ ಎಂದು ಅವರು ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X