• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೋಸ್ಟ್‌ ಆಫೀಸಲ್ಲಿ ರೈಲ್ವೆ ಟಿಕೀಟು.. ಆ ದಿನ ಹತ್ತಿರದಲ್ಲಿದೆ!

By Staff
|

ಬೆಂಗಳೂರು : ರೈಲು ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಕುಂಭಮೇಳದಿಂದಾಗಿ, ಟಿಕೀಟು ಕೊಳ್ಳುವುದು ತುಂಬಾ ತ್ರಾಸ.

ಟಿಕೀಟು ಸಿಕ್ಕರೆ ಪ್ಲಾಟ್‌ಫಾರಂ ಸಂಖ್ಯೆ ಹುಡುಕುತ್ತಾ , ನಾವು ಹತ್ತಲೇಬೇಕಾಗಿರುವ ರೈಲನ್ನೇ ಹತ್ತುವುದು ಇನ್ನೊಂದು ಕಷ್ಟ. ಟಿಕೀಟು ಹಂಚಿಕೆ ಸುಗಮಗೊಳಿಸಲು, ಬೆಂಗಳೂರಿನ ನಾನಾಕಡೆ ಕಂಪ್ಯೂಟರ್‌ ಮುಂಗಡ ವ್ಯವಸ್ಥೆ ಇದ್ದರೂ ಸಹ ಎಲ್ಲಿಹೋದರೂ ಜನವೋ ಜನ. ಮೈಲುದ್ದ ಕ್ಯೂ. ಈ ಟಿಕೇಟೂ ಬೇಡ, ಈ ಪ್ರಯಾಣನೂ ಬೇಡ, ಯಾವುದಾದರೂ ಬಸ್ಸೇ ಸರಿ ಅನ್ನಿಸಿಬಿಡತ್ತೆ.

ಪ್ರಯಾಣಿಕರಿಗೆ ತೊಂದರೆ ಆಗದಿರಲಿ ಎಂದು ಇಡೀ ಭಾರತವನ್ನು ಹೊತ್ತು ತಿರುಗುವ ರೈಲುವೆ ಆಡಳಿತ, ಕಾಲಕಾಲಕ್ಕೆ ಏನೇನೋ ಸರ್ಕಸ್‌ ಮಾಡುತ್ತದೆ. ಹೊಸಾ ಸರ್ಕಸ್‌ ಅಂದರೆ ಅಂಚೆ ಕಚೇರಿಗಳಲ್ಲೂ ಟಿಕೀಟು ಮಾರಾಟ ವ್ಯವಸ್ಥೆ ಮಾಡಿದರೆ ಹೇಗಿರತ್ತೆ ? ಅನ್ನುವುದು ರೈಲುವೆ ಮೇಲಧಿಕಾರಿಗಳ ಒಂದು ಚಿಂತನೆ.

ಈ ದಿಕ್ಕಿನಲ್ಲಿ ರೈಲು ಮತ್ತು ಅಂಚೆ ಇಲಾಖೆ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಈ ಚಿಂತನೆ ಕಾರ್ಯಗತವಾದರೆ ದೇಶದ ಯಾವುದೇ ಸ್ಥಳಕ್ಕೆ ಯಾವುದೇ ಅಂಚೆ ಕಚೇರಿಯಿಂದ ಟಿಕೀಟು ಖರೀದಿಸುವ ವ್ಯವಸ್ಥೆ ಜಾರಿಗೆ ಬರಬಹುದು ಎನ್ನುತ್ತಾರೆ ನೈಋತ್ಯ ರೈಲ್ವೆಯ ಜನರಲ್‌ ಮ್ಯಾನೇಜರ್‌ ಪ್ರವೀಣ್‌ ಕುಮಾರ್‌.

ಇಂತಹ ಸುದ್ದಿಗಳು ಹೊರಬಿದ್ದಾಗ ಸಾಮಾನ್ಯವಾಗಿ ಕನ್ನಡಜನ ಮಾತಾಡಿಕೊಳ್ಳುವುದು ಹೇಗಿರುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ನೋಡಿ :

‘ಇನ್ಮೇಲೆ ಪೋಸ್ಟ್‌ ಆಫೀಸಿನಲ್ಲೇ ರೈಲ್ವೆ ಟೆಕೆಟ್‌ ಸಿಗತ್ತಂತ್ರೀ.. ನೀವು ಬೆಂಗಳೂರು ಮೈನ್‌ ಸ್ಟೇಷನ್‌ ತನಕ ಯಾಕೆ ಹೋಗ್ತೀರಿ? ಇಲ್ಲೇ ಶಾಂತಿನಗರ ಪೋಸ್ಟ್‌ ಆಫೀಸ್‌ನಲ್ಲಿ ಹೋಗಿ ತಗೋಳಿ.’

ಇಂಥ ಮಾತುಗಳನ್ನು ಕೇಳಿದರೆ ಮುಗೀತು ನಿಮ್ಮಕಥೆ. ರೈಲು ಮತ್ತು ಅಂಚೆ ಅಧಿಕಾರಿಗಳ ನಡುವೆ ಮಾತುಕತೆ ಪೂರ್ಣ ಆಗಿ ಟಿಕೀಟು ಮಾರಾಟ ವ್ಯವಸ್ಥೆ ಒಪ್ಪಂದಕ್ಕೆ ಪರಸ್ಪರ ಎರಡೂ ಮಂತ್ರಾಲಯಗಳು ಒಪ್ಪಬೇಕು. ಅಂಚೆ ಕಚೇರಿಗೆ ಅಗತ್ಯವಾದ ಹೆಚ್ಚುವರಿ ಸಿಬ್ಬಂದಿ ಬೇಕು. ಅವರಿಗೆ ತರಬೇತಿ ಆಗಬೇಕು. ಕಂಪ್ಯೂಟರ್‌ ಬೇಕು. ನೆಟ್‌ವರ್ಕ್‌ ಇನ್‌ಸ್ಟಾಲ್‌ ಆಗಬೇಕು. ಎಲ್ಲಾ ಅನುಕೂಲಗಳು, ವ್ಯವಸ್ಥೆಗಳು ಅಚ್ಚುಕಟ್ಟಾದ ನಂತರ ನಾವೇ ಇಲ್ಲಿ ಬರಿತೀವಿ. ಆಮೇಲೆ ನೀವು ನಿಮ್ಮ ಮನೆಗೆ ಹತ್ತಿರ ಇರುವ ಅಂಚೆಕಚೇರಿಗೆ ಹೋಗಿ ಟಿಕೀಟು ತೊಗೊಂಡು ಮಾವನ ಊರಿಗೆ ಹೋಗುವಿರಂತೆ!

(ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more