ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಜೆಡಿ ಸಂಸದ ಶಹಾಬುದ್ದೀನ್‌ಗೆ ಜೀವಾವಧಿ ಶಿಕ್ಷೆ

By Staff
|
Google Oneindia Kannada News

ಸಿವಾನ್‌ : ಭಾರತದ ಓರ್ವ ಲೋಕಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಾರ್ತೆ, ಈ ಮಂಗಳವಾರದ ಸುದ್ದಿವಿಶೇಷವಾಗಿದೆ.

ಇನ್ನೊಂದು ಪಕ್ಷದ ನಾಯಕನನ್ನು ಅಪಹರಿಸಿದ ಆರೋಪ ಎದುರಿಸುತ್ತಿದ್ದ ರಾಷ್ಟ್ರೀಯ ಜನತಾದಳದ(ಆರ್‌ಜೆಡಿ) ಮೊಹಮದ್‌ ಶಹಾಬುದ್ದೀನ್‌ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು.

ಸಿಪಿಐ ನಾಯಕ ಛೋಟೇಲಾಲ್‌ ಗುಪ್ತ ಅವರನ್ನು ಸಿವಾನ್‌ ಜಿಲ್ಲೆಯಲ್ಲಿ 1999ರಲ್ಲಿ ಅಪಹರಿಸಿದ್ದ ಆರೋಪವನ್ನು ಶಹಾಬುದ್ದೀನ್‌ ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ ಶಹಾಬುದ್ದೀನ್‌ ತಪ್ಪಿತಸ್ಥ ಎಂದು ನ್ಯಾಯಾಲಯ ಪರಿಗಣಿಸಿತು. ಶಹಾಬುದ್ದೀನ್‌ ಅವರಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 10.000 ರೂಗಳ ದಂಡವನ್ನು ನ್ಯಾಯಾಲಯ ವಿಧಿಸಿತು.

ಅಪಹೃತರಾಗಿದ್ದ ಛೋಟೇಲಾಲ್‌ ಗುಪ್ತ ಅವರ ಪತ್ನಿ , ಮಗಳು ಮತ್ತು ಮಾವ ದಿನಾನಾಥ್‌ ಸಾಹ್‌ ವಿಚಾರಣೆ ಮತ್ತು ತೀರ್ಪನ್ನು ಆಲಿಸಲು ನ್ಯಾಯಾಲಕ್ಕೆ ಆಗಮಿಸಿದ್ದರು. ಶಹಾಬುದ್ದೀನ್‌ ಅವರಿಗೆ ಶಿಕ್ಷೆ ಕೊಟ್ಟದ್ದಕ್ಕೆ ಪ್ರತಿಕ್ರಿಯಿಸಿದ ಗುಪ್ತ ಅವರ ಪತ್ನಿ ಅನಿತಾ ದೇವಿ , ನನಗೆ ಸಂತೋಷವಾಗಿದೆ ಆದರೆ ಈ ಶಿಕ್ಷೆ ಸಾಕಾಗುವುದಿಲ್ಲ, ಶಹಾಬುದ್ದೀನ್‌ ಅವರಿಗೆ ಮರಣದಂಡನೆ ವಿಧಿಸಬೇಕು ಎಂದು ನ್ಯಾಯಾಲಕ್ಕೆ ಮೊರೆಯಿಟ್ಟರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X