ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್‌ ಮೇಲೆ ಕನ್ನಡ ಸಂಘಟನೆ ದಾಳಿ: ಸರಿಯೋ?ತಪ್ಪೋ?

By Staff
|
Google Oneindia Kannada News

ಬೆಂಗಳೂರು : ಕನ್ನಡ ಪಬ್‌ ಸಂಘಟನೆಯಾಂದು ಪಪ್‌ಗೆ ನುಗ್ಗಿ, ಅಲ್ಲಿ ಮೋಜಿನಲ್ಲಿ ತೇಲಾಡುತ್ತಿದ್ದ ಮೇಲ್ವರ್ಗದ ಯುವಕ-ಯುವತಿಯರ ಹೊರಗಟ್ಟಿದ ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡ ಸಂಘಟನೆ ಒಳ್ಳೆಯ ಕೆಲಸ ಮಾಡಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಕಡಿವಾಣ ಹಾಕಲು ಮತ್ತು ಸಂಸ್ಕೃತಿ ಕಾಯುವ ನಿಟ್ಟಿನಲ್ಲಿ ಇಂತಹ ಕ್ರಮಗಳು ಅನಿವಾರ್ಯ ಎಂಬುದು ಕೆಲವರ ಅಭಿಪ್ರಾಯ.

ಈ ಘಟನೆಯನ್ನು ಖಂಡಿಸಿರುವ ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್‌.ತಿಮ್ಮಪ್ಪ, ಇದು ಕನ್ನಡ ಬೆಳೆಸುವ ಕ್ರಮವಲ್ಲ. ಇಂತಹ ಬೆಳವಣಿಗೆಗಳಿಂದ ಕನ್ನಡಿಗರಿಗೆ ಅವಮಾನ ಎಂದಿದ್ದಾರೆ.

ಘಟನೆಯ ಹಿನ್ನೆಲೆ : ಏರ್‌ಪೋರ್ಟ್‌ ರಸ್ತೆಯ ಲೀಲಾ ಪ್ಯಾಲೇಸ್‌ಗೆ ನುಗ್ಗಿ, ಅಲ್ಲಿದ್ದವರನ್ನು ಹೊರಗಡೆ ಕಳುಹಿಸಿ, ಕರ್ನಾಟಕ ಯುವ ವೇದಿಕೆ ಗೊಂದಲ ಸೃಷ್ಟಿಸಿತ್ತು. ಅಲ್ಲಿನ ಟೇಬಲ್‌, ಕಿಟಕಿ ಗಾಜುಗಳು ಪುಡಿಪುಡಿ ಮಾಡಿತ್ತು. ಈ ಸಂದರ್ಭದಲ್ಲಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು.

ಮಧ್ಯೆ ಪ್ರವೇಶಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 27 ಕಾರ್ಯಕರ್ತರ ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಈ ಕಾರ್ಯಕರ್ತರನ್ನು 20ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ.

ನಗರದಲ್ಲಿ ವ್ಯಾಪಿಸುತ್ತಿರುವ ಪಬ್‌ ಸಂಸ್ಕೃತಿ ಬಗ್ಗೆ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಸಂಸ್ಕೃತಿಗೆ ಕಡಿವಾಣ ಹಾಕುವುದು ನಮ್ಮ ಧ್ಯೇಯ ಎಂದು ಹೇಳಿಕೊಂಡಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X