ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ನಗ್ನ ಚಿತ್ರ ರಚಿಸಿದ ಹುಸೇನ್‌ ಆಸ್ತಿ ಢಮಾರ್‌!!

By Staff
|
Google Oneindia Kannada News

Haridwar court ordered the attachment of M F Husain’s propertiesಮುಂಬಯಿ: ಹಿಂದೂ ದೇವತೆಯರನ್ನು ತನ್ನ ಕುಂಚದಿಂದ ನಗ್ನವಾಗಿ ಚಿತ್ರಿಸಿದ್ದ ಆರೋಪ ಹೊತ್ತಿರುವ ಖ್ಯಾತ ಕಲಾವಿದ ಎಂ. ಎಫ್‌. ಹುಸೇನ್‌ರವರ ಆಸ್ತಿ ಮುಟ್ಟುಗೋಲು ಹಾಕಬೇಕೆಂದು ಹರಿದ್ವಾರದ ನ್ಯಾಯಾಲಯ ಆದೇಶ ನೀಡಿದೆ.

ಕಾನೂನು ತಜ್ಞರ ಅಚ್ಚರಿ:

An art pice of M F Hussain containing Sita and Hanumanಈ ರೀತಿಯ ನಿರ್ಣಯವನ್ನು ಕುಖ್ಯಾತ ಅಪರಾಧಿಗಳಿಗೆ ಮಾತ್ರ ನೀಡಲು ಸಾಧ್ಯ. ವ್ಯಕ್ತಿಯಾಬ್ಬನನ್ನು ಹುಡುಕಲು ಸಾಧ್ಯವಾಗದಂತೆ ಕಣ್ಮರೆಯಾದ ಸಂದರ್ಭದಲ್ಲಿ, ಅಂತಿಮವಾಗಿ ನ್ಯಾಯಾಲಯಗಳು ಆಸ್ತಿ ಮುಟ್ಟುಗೋಲಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಹುಸೇನ್‌ರಂತಹ ಖ್ಯಾತ ಕಲಾವಿದ ಪೊಲೀಸರಿಗೆ ಕಣ್ಮರೆಯಾದಂತೆ ಕಂಡುಬಂದಿದೆ ಎಂದರೆ ಇದು ಪೊಲೀಸರ ಕಾರ್ಯವಿಧಾನದ ವೈಫಲ್ಯವೇ ಸರಿ. ಆದರೆ ಹರಿದ್ವಾರದ ನ್ಯಾಯಾಲಯದ ನಿರ್ಣಯ ಪ್ರಶ್ನಿಸುವಂತದ್ದು ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ಕಾನೂನು ತಜ್ಞ ವೈ.ಪಿ. ಸಿಂಗ್‌ ಅಭಿಪ್ರಾಯ್ಪಟ್ಟಿದ್ದಾರೆ.

ಹರಿದ್ವಾರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. ಆದರೆ ಪೊಲೀಸರು ಅದನ್ನು ಸರಿಯಾಗಿ ಹುಸೇನ್‌ ಅವರಿಗೆ ತಲುಪಿಸಿರುವ ಸಾಧ್ಯತೆ ಕಮ್ಮಿ ಎಂದು ಸರ್ಕಾರಿ ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.

ಪೊಲೀಸ್‌ ಸಮರ್ಥನೆ:

ಹುಸೇನ್‌ ಅವರ ಬಹುಚರ್ಚಿತ ಹಿಂದೂ ದೇವತೆಗಳ ನಗ್ನ ಕಲಾಕೃತಿಗಳ ವಿರುದ್ಧ ಸಲ್ಲಿಸಲಾಗಿದ್ದ ಮೊಕದ್ದಮೆಯ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಕಳಿಸಿದ್ದ ಆದೇಶಕ್ಕೆ ಉತ್ತರಿಸದೆ, ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮುಂಬೈನ ಡಿಸಿಪಿ ಬ್ರಿಜೇಶ್‌ ಸಿಂಗ್‌ ಹೇಳಿದ್ದಾರೆ.

ಎಂ.ಎಫ್‌. ಹುಸೇನ್‌ ಮನೆಗೆ ಬೀಗ ಜಡಿಯಲಾಗಿದ್ದು, ಆಸ್ತಿ ಜಪ್ತಿ ಮಾಡುವ ನೋಟಿಸನ್ನು ಅಂಟಿಸಲಾಗಿದೆ. ಸದ್ಯ ವಿದೇಶದಲ್ಲಿರುವ ಹುಸೇನ್‌ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X