• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಟಿಆರ್‌ ಘಟಕಕ್ಕೆ ಬೀಗ ;900 ನೌಕರರು ಬೀದಿಗೆ

By Staff
|

Ready for the talks with workers says MTR MD Sadananada Maiya ಬೆಂಗಳೂರು : ಬೊಮ್ಮಸಂದ್ರ ಬಳಿಯ ಎಂಟಿಆರ್‌ ಆಹಾರ ಉತ್ಪಾದನಾ ಘಟಕಕ್ಕೆ ಶನಿವಾರ(ಮೇ 05)ದಿಂದ ಬೀಗ ಹಾಕಿ ಲಾಕೌಟ್‌ ಎಂದು ಎಂಟಿಆರ್‌ ಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿಗಳು ಘೋಷಿಸಿದ್ದಾರೆ.

ನಾರ್ವೆ ಮೂಲದ ಓರ್ಕ್ಲಾ ಸಂಸ್ಥೆ ಸ್ವಾಮ್ಯದ ಎಂಟಿಆರ್‌ ಪುಡ್ಸ್‌ ಘಟಕವು ನಿಂತದ್ದರಿಂದ ಸುಮಾರು 900 ಜನ ನೌಕರರ ಭವಿಷ್ಯ ಮಂಕಾಗಿದೆ.

ಆಡಳಿತ ಮಂಡಳಿ ಸ್ಪಷ್ಟನೆ:

ಸುಮಾರು 70 ವರ್ಷಗಳಿಗೂ ಹೆಚ್ಚು ಕಾಲದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದ ಎಂಟಿಆರ್‌ ಘಟಕದ ನೌಕರರು ತಿಂಗಳ ಸಂಬಳ ಪಡೆದ ನಂತರ ,ಮೇ 02 ರಿಂದ ನಿಧಾನಗತಿಯ ಕೆಲಸದ ಧೋರಣೆ ಅನುಸರಿಸಿ ಉತ್ಪಾದನಾ ವೇಗವನ್ನು ಕಡಿತಗೊಳಿಸಿದರು. ನೌಕರರಿಗೆ ಕಂಪೆನಿ ಕೊಡುತ್ತಿದ್ದ ಸಂಬಳದ ಬಗ್ಗೆ ಹಲವರಲ್ಲಿ ಅಸಹನೆ ಇತ್ತು.

ಎಂಟಿಆರ್‌ ಸಂಸ್ಥೆ ಯ ಬಹುರಾಷ್ಟ್ರೀಯ ಕಂಪೆನಿಯ ಸ್ವಾದೀನವಾದ ಮೇಲೆ ಸಂಬಳವೂ ಕೂಡ ಅದೇ ಮಟ್ಟದಲ್ಲಿ ಇರಬೇಕೆಂಬ ನಿರೀಕ್ಷೆ ಬಹುತೇಕ ನೌಕರರಲ್ಲಿ ಇತ್ತು ಎನ್ನಲಾಗಿದೆ. ಆದರೆ ಕಂಪೆನಿ ನೌಕರರಿಗೆ ಉಚಿತ ಆಹಾರ, ವಾಹನ ವ್ಯವಸ್ಥೆಮ ಬೋನಸ್‌, 7-8 ಸಾವಿರ ಸಂಬಳ, ಪಿ.ಎಫ್‌ ಒದಗಿಸುತ್ತಿದೆ ಎಂದು ಆಡಳಿತ ಮಂಡಳಿ ಹೇಳಿದೆ.

ನೌಕರರ ಮಂದಗತಿ ಧೋರಣೆಯಿಂದ ಆಹಾರದ ಗುಣಮಟ್ಟ ದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿತ್ತು, ಸಾರ್ವಜನಿಕ ಹಿತದೃಷ್ಟಿ ಹಾಗೂ ಕಂಪೆನಿಯ ಘನತೆಗೆ ಧಕ್ಕೆ ಬರಬಾರದು ಎಂಬ ಕಾರಣದಿಂದ ಕಾರ್ಖಾನೆಗೆ ಬೀಗ ಹಾಕಿರುವುದಾಗಿ ಎಂಟಿಆರ್‌ ಆಹಾರ ಘಟಕದ ವ್ಯವಸ್ಥಾಪಕ ನಿರ್ದೇಶಕ ಪಿ. ಸದಾನಂದ ಮಯ್ಯ ಹೇಳಿದ್ದಾರೆ.

ನೌಕರರ ಅಳಲು:

ಈ ಸಮಸ್ಯೆ ನಿನ್ನೆ- ಮೊನ್ನೆಯದಲ್ಲ ಹತ್ತಿಪ್ಪತ್ತು ವರ್ಷಗಳಿಂದ ನಡೆದಿದೆ. ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ, ಮೂಲಭೂತಸೌಲಭ್ಯವನ್ನು ಕಂಪೆನಿ ಒದಗಿಸುತ್ತಿಲ್ಲ. ತಿಂಗಳಿಗೆ ಕೇವಲ 3ರಿಂದ 3,500 ರೂ ಸಂಬಳಕ್ಕೆ ಬಹುತೇಕ ಜನ ದುಡಿಯುತ್ತಿದ್ದಾರೆ. ರಾತ್ರಿ ಪಾಳಿಯ ಕೆಲಸವೂ ಅದರಲ್ಲಿ ಸೇರಿದೆ ಎಂದು ಕಾರ್ಮಿಕ ಸಂಘ ಹೇಳಿದೆ.

ಸಂಧಾನ ಸಾಧ್ಯತೆ:

ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆ ಪುನರಾರಂಭಿಸಲು ಆಡಳಿತ ಮಂಡಳಿ ಆಸಕ್ತಿ ಹೊಂದಿದ್ದು, ಕಾರ್ಮಿಕ ಮುಖಂಡರೊಡನೆ ಚರ್ಚೆಗೆ ಸಿದ್ಧವಾಗಿದೆ. ಎಲ್ಲವೂ ಸುಖಾಂತ್ಯವಾದರೆ 900 ಜನ ನೌಕರರ ಬಾಳು ಹಸನಾಗುತ್ತದೆ. ಎಲ್ಲದಿದ್ದರೆ ಪ್ರತಿಭಟನೆ, ಮುಷ್ಕರ ಮುಂದುವರೆಯುವ ಎಲ್ಲ ಸಂಭವವಿದೆ ಎಂದು ಸುದ್ದಿ ಸಿಕ್ಕಿದೆ.

300 ಕ್ಕೂ ಅಧಿಕ ನೌಕರರು ಮುಷ್ಕರ ಹೂಡಿದ್ದರೂ, ಪರಿಸ್ಥಿತಿ ಶಾಂತವಾಗಿತ್ತು. ಈ ಬಗ್ಗೆ ಯಾವುದೆ ಅಧಿಕೃತ ದೂರು ದಾಖಲಿಸಿಲ್ಲ. ಪರಿಸ್ಥಿತಿಯನ್ನು ನಿರ್ವಹಣೆಗೆ ಪೊಲೀಸ್‌ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಬೊಮ್ಮಸಂದ್ರ ಪೊಲೀಸ್‌ ಠಾಣಾಧಿಕಾರಿ ಹೇಳಿದ್ದಾರೆ.

(ದಟ್ಸ್‌ ಕನ್ನಡವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more