ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌-ಕೆ ಪರೀಕ್ಷೆ ಬರೆದು ಉತ್ತರವನ್ನು ಪರೀಕ್ಷಿಸಿ

By Staff
|
Google Oneindia Kannada News

ಬೆಂಗಳೂರು : ಕಾಮೆಡ್‌ -ಕೆ ವೃತ್ತಿ ಶಿಕ್ಷಣ ಪರೀಕ್ಷೆ ಬರೆದ ಅಭ್ಯರ್ಥಿಗಳು ಸರಿಯುತ್ತರವನ್ನು ಕಾಮೆಡ್‌- ಕೆಯ ವೆಬ್‌ ಸೈಟ್‌www.comedk.org ನಲ್ಲಿ ಸಂಜೆ ವೀಕ್ಷಿಸಬಹುದಾಗಿದೆ.

ಬೆಳಗ್ಗೆ 10 ಕ್ಕೆ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ಪ್ರಾರಂಭವಾಗಿದ್ದು, ಮಧ್ಯಾಹ್ನ 12 ರವರೆಗೂ ಜಾರಿಯಲ್ಲಿರುತ್ತದೆ. ಮಧ್ಯಾಹ್ನ 2 ರಿಂದ 3 ರವರೆಗೆ ಜೀವಶಾಸ್ತ್ರ ಮೇಲಿನ 60 ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಲಿದ್ದಾರೆ. ನಂತರ 3:30 ರಿಂದ 4:30 ರವರೆಗೂ ಗಣಿತಶಾಸ್ತ್ರದ ಪರೀಕ್ಷೆ ನಡೆಯಲಿದೆ.

ಸುಮಾರು 100 ಕ್ಕೂ ಅಧಿಕ ಅಭ್ಯರ್ಥಿಗಳನ್ನು ಅನುಮಾನದ ಮೇಲೆ ರೆಡ್‌ ಲಿಸ್ಟ್‌ಗೆ ಸೇರಿಸಲಾಗಿದ್ದು, ಅಕ್ರಮ , ನಕಲಿ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ .ಸುಮಾರು 24 ಜನ ಪರೀಕ್ಷಾಮೇಲ್ವಿಚಾರಕರು ನಗರದಲ್ಲಿ ನಡೆಯುತ್ತಿರುವ ಕಾಮೆಡ್‌-ಕೆ ಪರೀಕ್ಷೆ ಯ 105 ಕೇಂದ್ರಗಳಲ್ಲಿ ಸಂಚರಿಸಲಿದ್ದಾರೆ.ಎಂದು ಕಾಮೆಡ್‌- ಕೆ ಕಾರ್ಯದರ್ಶಿ ಡಾ .ಎಸ್‌ .ಕುಮಾರ್‌ ಹೇಳಿದ್ದಾರೆ.

ಮ್ಯಾನೇಜ್‌ಮೆಂಟ್‌ ಸೀಟುಗಳು ಎಷ್ಟಿವೆ?

ಮೆಡಿಕಲ್‌: 888
ಡೆಂಟಲ್‌ : 776
ಇಂಜಿನೀಯರಿಂಗ್‌ : 9,063

ನಗರದ 73 ಕೇಂದ್ರ ಹಾಗೂ ಹೊರವಲಯದ 32 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ (ಯುಜಿಇಟಿ) ಜಾರಿಯಲ್ಲಿದೆ.

ಹೊರನಾಡ ಕನ್ನಡಿಗರು:

ಹೊರನಾಡ ಕನ್ನಡಿಗ ಅಭ್ಯರ್ಥಿಗಳಲ್ಲಿ ಬಿಹಾರದಿಂದ ಅಧಿಕ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.

ಬಿಹಾರ-10,820
ಆಂಧ್ರಪ್ರದೇಶ-7,020
ಜಾರ್ಖಂಡ್‌-6,213

ಹಾಗೂ ಅಂಡಮಾನ್‌ ನಿಕೋಬಾರ್‌ ಹಾಗೂ ಲಕ್ಷದ್ವೀಪದ ತಲಾ ಒಂದು ಅಭ್ಯರ್ಥಿಗಳು ಪ್ರವೇಶ ಬಯಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X