ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿಸಂಸ್ಥೆಯನ್ನೇ ಹಿಂದಿಕ್ಕಿದ ಕಾಂಗ್ನಿಜೆಂಟ್‌ ಕಂಪೆನಿ

By Staff
|
Google Oneindia Kannada News

Cognizant outpaces Infosysಚೆನ್ನೈ: ಇನ್ಫೋಸಿಸ್‌, ವಿಪ್ರೋಗಳಂತಹ ಬೃಹತ್‌ ಕಂಪೆನಿಗಳು ಸಾಧಿಸಿದ ಆರ್ಥಿಕ ಬೆಳವಣಿಗೆಯನು ್ನ ಹಿಂದಿಕ್ಕುವ ತವಕದಿಂದ ಕಾಂಗ್ನಿಜೆಂಟ್‌ ಸಂಸ್ಥೆ ಮುನ್ನುಗುತ್ತಿದೆ.

ಸುಮಾರು 17 ತ್ರೆೃಮಾಸಿಕ(ಕ್ವಾಟರ್‌ ರಿಪೋರ್ಟ್‌) ವರದಿಗಳ ಪ್ರಕಾರ ಇತರೆ ದೊಡ್ಡ ಕಂಪೆನಿಗಳು ಸಾಧಿಸಿದ್ದ ಆರ್ಥಿಕ ಬೆಳವಣಿಗೆ ಸಾಧನೆಗಿಂತ ಕಾಂಗ್ನಿಜೆಂಟ್‌ ಸಾಧಿಸಿದ ಆರ್ಥಿಕ ಬೆಳವಣಿಗೆ ಅತಿ ಶೀಘ್ರದ್ದಾಗಿದೆ. ಪ್ರತಿ ಹಂತದಲ್ಲೂ ಇತರೆ ಕಂಪೆನಿಗಳನ್ನು ಹಿಂದಿಕ್ಕಿ ಮುನ್ನೆಡೆದಿದೆ.

ಆರ್ಥಿಕ ಬೆಳವಣಿಗೆಯ ತುಲನೆ ಹೀಗಿದೆ:

100 ಮಿಲಿಯನ್‌ ಡಾಲರ್‌ ಗಳಿಂದ 250 ಮಿಲಿಯನ್‌ ಡಾಲರ್‌ಗಳಿಗೆ ಬೆಳವಣಿಗೆ ಸಾಧಿಸಲು ಇನ್ಫಿ, ವಿಪ್ರೋ ಸಂಸ್ಥೆಗಳು 12 ತ್ರೆೃಮಾಸಿಕ ತೆಗೆದುಕೊಂಡವು. ಸತ್ಯಂ ಸಂಸ್ಥೆ ಗೆ ಈ ಗುರಿ ಸಾಧಿಸಲು 16 ತ್ರೆೃಮಾಸಿಕ ಬೇಕಾಯಿತು. ಆದರೆ ಈ ಸಾಧನೆಯನ್ನು ಕಾಂಗ್ನಿಜೆಂಟ್‌ ಕಂಪೆನಿ 9 ತ್ರೆೃಮಾಸಿಕದಲ್ಲೇ ಸಾಧಿಸಿದೆ.

ಇದೇ ರೀತಿ 250 ಮಿಲಿಯನ್‌ ಡಾಲರ್‌ ಗಳಿಂದ 500 ಮಿಲಿಯನ್‌ ಡಾಲರ್‌ಗಳಿಗೆ ಬೆಳವಣಿಗೆ ಹೊಂದಲು ಇನ್ಫಿ 8 ತ್ರೆೃಮಾಸಿಕ ಹಾಗೂ ವಿಪ್ರೋ ಸಂಸ್ಥೆ 9 ತ್ರೆೃಮಾಸಿಕ ತೆಗೆದುಕೊಂಡಿವೆ. ಸತ್ಯ ಸಂಸ್ಥೆ ಈ ಗುರಿಯನ್ನು ಇನ್ನೂ ಮುಟ್ಟಿಲ್ಲ. ಕಾಂಗ್ನಿಜೆಂಟ್‌ ಈ ಗುರಿಯನ್ನು ಮುಂಬರುವ 6 ತ್ರೆೃಮಾಸಿಕಗಳಲ್ಲಿ ತಲುಪಿ ದಾಖಲೆ ನಿರ್ಮಿಸಲಿದೆ.

ಕಾಂಗ್ನಿಜೆಂಟ್‌ ಸಂಸ್ಥೆಯ ಆರ್ಥಿಕ ಬೆಳವಣಿಗೆಯ ಇತರೆ ಕಂಪೆನಿಗಳಿಗಿಂತ ಅತಿ ವೇಗದಲ್ಲಿ ಸಾಗುತ್ತಿದೆ. ಮೊದಲ ತ್ರೆೃಮಾಸಿಕ ವರದಿಯಂತೆ ಕಾಂಗ್ನಿಜೆಂಟ್‌460.30 ಮಿಲಿಯನ್‌ ಡಾಲರ್‌ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಆದಾಯ ಗಳಿಕೆಗಿಂತ ಶೇ 61 ಹೆಚ್ಚಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X