ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗದ ಜಯ: 90ದಿನದ ಕಾವೇರಿ ಹೋರಾಟ ಪರ್ವಕ್ಕೆ ತೆರೆ Saturday, May 05 2007, 11:25 Hrs (IST)

By Staff
|
Google Oneindia Kannada News

ಮೈಸೂರು : ಕಾವೇರಿ ನ್ಯಾಯಮಂಡಳಿ ತೀರ್ಪು ಹೊರಬಿದ್ದ ದಿನದಿಂದ, ಅಂದರೆ ಕಳೆದ 90ದಿನಗಳಿಂದ ನಡೆಯುತ್ತಿದ್ದ ಕಾವೇರಿ ಹೋರಾಟಕ್ಕೆ ತೆರೆ ಬಿದ್ದಿದೆ. ಇದು ನಾಡ ರೈತರ ಸೋಲೋ? ಜನಪ್ರತಿನಿಧಿಗಳ ಸೋಲೋ ಎಂಬುದು ಸದ್ಯದ ಪ್ರಶ್ನೆ.

ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಈವರೆಗೆ ಪ್ರತಿದಿನವೂ ಕಾವೇರಿ ಚಳವಳಿ ನಡೆಯುತ್ತಿತ್ತು. ಪ್ರತಿಭಟನೆ, ರಸ್ತೆ ತಡೆ, ಮೆರವಣಿಗೆ -ಹೀಗೆ ಹೋರಾಟ ನಾನಾ ರೂಪ ಪಡೆದಿತ್ತು. ಈಗ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ಹೇಳಿದ್ದಾರೆ.

ನ್ಯಾಯಮಂಡಳಿ ತೀರ್ಪು ವಿರೋಧಿಸಿ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುತ್ತೇವೆ. ಕಾನೂನು ಸಮರದಲ್ಲಿ ಗೆಲ್ಲುವ ವಿಶ್ವಾಸದಿಂದ ಚಳವಳಿಯನ್ನು ಕೈಬಿಟ್ಟಿದ್ದೇವೆ ಎಂದು ಸುದ್ದಿಗಾರರ ಬಳಿ ಮಾದೇಗೌಡ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X