ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಿಂದ ಮಹಿಳೆಯರಿಗೆ ನೈಟ್‌ ಶಿಫ್ಟ್‌ ಇಲ್ಲ : ಸರ್ಕಾರ

By Staff
|
Google Oneindia Kannada News

ಬೆಂಗಳೂರು : ಮಹಿಳೆಯರಿಗೆ ರಾತ್ರಿ ಪಾಳಿಯಿಂದ ಮುಕ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜುಲೈನಿಂದ ಐಟಿ-ಬಿಟಿ, ಆಸ್ಪತ್ರೆ ಸೇರಿದಂತೆ ಕೆಲವು ಉದ್ದಿಮೆ ಹೊರತುಪಡಿಸಿ, ಇನ್ನುಳಿದ ಉದ್ಯಮಗಳು ಮಹಿಳಾ ನೌಕರರನ್ನು ರಾತ್ರಿ ಪಾಳಿ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. ರಾತ್ರಿ 8ಗಂಟೆ ನಂತರ ಮಹಿಳೆಯರಿಂದ ದುಡಿಸಿಕೊಳ್ಳುವುದು ಅಪರಾಧ. ಇಂತಹ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್‌ ಅನ್ಸಾರಿ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಶೋಷಿಸಲಾಗುತ್ತದೆ. ಅವರಿಗೆ ಕಿರುಕುಳ ನೀಡಲಾಗುತ್ತದೆ ಎನ್ನುವ ದೂರುಗಳನ್ವಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸುವ ಉದ್ಯಮಿಗೆ 10ಸಾವಿರ ದಂಡದ ಜೊತೆ 3ತಿಂಗಳು ಜೈಲು ಶಿಕ್ಷೆ ತಪ್ಪದು ಎಂದು ವಿವರಿಸಿದರು.

ಕನ್ನಡ ಫಲಕ ಹಾಕಿ, ದಂಡ ತಪ್ಪಿಸಿಕೊಳ್ಳಿ : ಇನ್ನುಮುಂದೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ನಿಯಮ ಉಲ್ಲಂಘಿಸಿದರೇ, 250ರೂ. ದಂಡದ ಬದಲಿಗೆ 10ಸಾವಿರ ರೂ.ದಂಡ ವಿಧಿಸುವ ಕಾನೂನನ್ನು ಜಾರಿಗೆ ತಂದಿರುವುದಾಗಿ ಕಾರ್ಮಿಕ ಸಚಿವರು ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X