• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

19ರಂದು ಮಿಡ್‌ನೈಟ್‌ ಮ್ಯಾರಥಾನ್‌ : ನೀವೂ ಪಾಲ್ಗೊಳ್ಳಿ..

By Staff
|

ಬೆಂಗಳೂರು : ನಗರದ ಹೊರವಲಯದ ವೈಟ್‌ ಫೀಲ್ಡ್‌ನಲ್ಲಿ ಮೇ 19ರಂದು, ವಿಶ್ವದಲ್ಲೇ ಪ್ರಥಮ ಎನ್ನಲಾದ ಮಧ್ಯರಾತ್ರಿ ಮ್ಯಾರಥಾನ್‌ ಓಟವನ್ನು ಕಾಣಬಹುದಾಗಿದೆ.

ಕ್ರಾಸ್‌ಓವರ್‌ ಸ್ಪೋರ್ಟ್ಸ್‌ ಪ್ರೆೃ.ಲಿ ಹಾಗೂ ರೋಟರಿ ಬೆಂಗಳೂರು ಐಟಿ ಕಾರಿಡಾರ್‌ ಅವರು ಜಂಟಿಯಾಗಿ, ಮಿಡ್‌ನೈಟ್‌ ಮ್ಯಾರಥಾನ್‌ ಓಟವನ್ನು ಆಯೋಜಿಸಿದ್ದಾರೆ.

ಪೂರ್ತಿ ಮ್ಯಾರಥಾನ್‌ ಓಟವು 42.195 ಕಿ.ಮೀ, ಅರ್ಧ ಮ್ಯಾರಥಾನ್‌ ಓಟ 21.1 ಕಿ.ಮೀ ಹಾಗೂ ಐಟಿ ಸಿಟಿ ರನ್‌ ಎಂಬ 5.4 ಕಿ.ಮೀ.ನ ಚಿಕ್ಕ ಮ್ಯಾರಥಾನ್‌ ಓಟಗಳನ್ನು ನಡೆಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ತರಬೇತುದಾರ ಫುಂಗ್‌ ವಾಂಗ್‌ ಟಕ್‌ ಹೇಳಿದ್ದಾರೆ.

ಕ್ರಾಸ್‌ ಓವರ್‌ ಸ್ಪೋರ್ಟ್ಸ್‌ ಸಂಸ್ಥೆಯ ನಿರ್ದೇಶಕ ಎಂ. ದರ್ಶನ್‌ ಸುದ್ದಿಗಾರರೊಡನೆ ಮಾತನಾಡುತ್ತಾ , ಮ್ಯಾರಥಾನ್‌ ಓಟವು ದೃಢನಂಬಿಕೆ, ಪ್ರಯತ್ನ ಹಾಗೂ ಸಂತಸದ ಕ್ಷಣದಿಂದ ಕೂಡಿರುತ್ತದೆ. ಮ್ಯಾರಥಾನ್‌ನಲ್ಲಿ ಹೆಸರಾಂತ ಜಾನಪದ ಕಲಾವಿದರು, ಸಂಗೀತಗಾರರು ಹಾಗೂ ಅನೇಕ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪೂರ್ಣ ಪ್ರಮಾಣದ ಮ್ಯಾರಥಾನ್‌ ಗೆದ್ದವರಿಗೆ 50,000 ರೂ. ನಗದು. ಎರಡನೇ ಸ್ಥಾನದವರಿಗೆ 35, 000 ರೂ. ನಗದು ಹಾಗೂ ಮೂರನೇ ಸ್ಥಾನದವರಿಗೆ 15,000 ರೂ. ನಗದು ಬಹುಮಾನ ಲಭಿಸಲಿದೆ. ಇದೇ ರೀತಿ ಅರ್ಧ ಮ್ಯಾರಥಾನ್‌ ಗೆಲ್ಲುವ ಓಟಗಾರನಿಗೆ 25,000 ರೂ. ನಗದು, ಎರಡನೇ ಹಾಗೂ ಮೂರನೇ ಸ್ಥಾನ ಗಳಿಸುವವರಿಗೆ ಕ್ರಮವಾಗಿ 15,000ರೂ. ಹಾಗೂ 10,000 ರೂ. ಲಭಿಸಲಿದೆ.

ಐ ಗೇಟ್‌ ಸಂಸ್ಥೆ ಯಿಂದ ರೇಸ್‌ ಪ್ರಾರಂಭವಾಗಿ ಅಲ್ಲೇ ಕೊನೆಗೊಳ್ಳಲಿದೆ. ರಾತ್ರಿ ವೇಳೆ ತಾಪಮಾನ 12 -15 ಡಿಗ್ರಿ ಇರುವುದರಿಂದ ಓಡಲು ಅನುಕೂಲವಾದ ಸಮಯ. ಆಸಕ್ತರು ಪ್ರಯತ್ನಿಸಬಹುದು.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more