ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾವಿಗೆ ಅಮೆರಿಕಾದಲ್ಲಿ ಭಾರೀ ಡಿಮ್ಯಾಂಡ್‌!!

By Staff
|
Google Oneindia Kannada News

Ambassador David C. Mulford enjoys Indian mangoesನವದೆಹಲಿ : ಅಮೆರಿಕಾದ ಮಾರುಕಟ್ಟೆಯಲ್ಲಿ ಭಾರತದ ಮಾವಿನ ಹಣ್ಣುಗಳು ಕಾಣಿಸುವ ದಿನಗಳು ದೂರವಿಲ್ಲ. ಭಾರತದ ಕಂದಾಯ ಇಲಾಖೆ ಅನುಮತಿ ನೀಡಿದ್ದು, ಸದ್ಯದಲ್ಲೆ ಭಾರತದ ಮಾವು ಅಮೆರಿಕಾವನ್ನು ಪ್ರವೇಶಿಸಲಿದೆ.

ಅಮೆರಿಕ ಅಧ್ಯಕ್ಷ ಬುಷ್‌ ಅವರು ಮಾರ್ಚ್‌ 2006ರಲ್ಲಿ ಮಾಡಿದ ಮನವಿ ಮೇರೆಗೆ, ಹಣ್ಣುಗಳ ರಾಜ ಮಾವು ಅಮೆರಿಕಾದತ್ತ ಪಯಣಿಸುತ್ತಿದ್ದಾನೆ.

ಮೊದಲ ಹಂತವಾಗಿ ಸುಮಾರು 150 ಬಾಕ್ಸ್‌ಗಳಲ್ಲಿ ಅಲ್ಫೋನ್ಸೊ ಹಾಗೂ ಕೇಸರ್‌ ತಳಿಗಳು ಮುಂಬಯಿಯಲ್ಲಿ ವಿಮಾನ ಏರಿ ನ್ಯೂಯಾರ್ಕ್‌ ಹಾದಿ ಹಿಡಿಯಲಿವೆ. ಮೊದಲ ಕಂತಿನ ಹಣ್ಣುಗಳನ್ನು ಗುಜರಾತ್‌ ಹಾಗೂ ಮಹಾರಾಷ್ಟ್ರದ ತೋಟದಿಂದ ಆಯ್ದುಕೊಳ್ಳಲಾಗಿದೆ.

ಅಮೆರಿಕ ರಾಯಭಾರಿಯ ಮೆಚ್ಚುಗೆ : ಅಮೆರಿಕ ಮಾರುಕಟ್ಟೆಯಲ್ಲಿ ಸುಮಾರು 2.5 ಲಕ್ಷಟನ್‌ಗಳಷ್ಟು ಮಾವಿನ ಹಣ್ಣಿಗೆ ಬೇಡಿಕೆ ಇದೆ. ಸದ್ಯ ಅಮೆರಿಕಕ್ಕೆ ಮಾವಿನ ಹಣ್ಣಿನ ರುಚಿಯನ್ನು ಮೆಕ್ಸಿಕೋ ದೇಶ ಉಣಬಡಿಸುತ್ತಿದೆ. ಆದರೆ ಅಮೆರಿಕದಲ್ಲಿ ಭಾರತೀಯ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಅಮೆರಿಕದ ರಾಯಭಾರಿ ಡೇವಿಡ್‌ ಸಿ ಮುಲ್‌ಫೋರ್ಡ್‌ ಅಭಿಪ್ರಾಯಪಟ್ಟಿದ್ದಾರೆ.

ಮಾವಿನ ಹಣ್ಣು ಆಮದು ಸುಂಕದಿಂದ ಮುಕ್ತವಾಗಿದೆ. ಅಮೆರಿಕ ಹಾಗೂ ಭಾರತ ನಡುವಿನ ಕೃಷಿ ವ್ಯಾಪಾರ ವೃದ್ಧಿಗೆ, ಮಾವು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X