ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ರೀತಿ ಮದ್ವೆಯಾಗಿ ಜಗದ ಗಮನ ಸೆಳೆದ ಭಲೇ ಜೋಡಿ!

By Staff
|
Google Oneindia Kannada News

ನವದೆಹಲಿ : ಮದುವೆಯಾಗೊವರೆಗೂ ಹುಚ್ಚು ಬಿಡಲ್ಲ. ಹುಚ್ಚು ಬಿಡೋವರೆಗೂ ಮದುವೆಯಾಗಲ್ಲ ಎಂಬುದು ಗಾದೆ ಮಾತು. ಆದರೆ ಈ ಮರಾಠಿ ಜೋಡಿಗೆ ಮದುವೆಯೇ ಹುಚ್ಚಾಟವಾಗಿದೆ.

ಎಲ್ಲರೂ ಒಂದು ರೀತಿಯ ಶಾಸ್ತ್ರ- ಸಂಪ್ರದಾಯದಲ್ಲಿ ಮದುವೆ ಮುಗಿದರೆ ಸಾಕಪ್ಪ ಎನ್ನುವಾಗ, ಸಯಾಲಿ ಭಟ್‌ ಹಾಗೂ ಅಮರ್‌ ದ್ರಾವಿಡ್‌, ಏಳು ವಿವಿಧ ಸಂಪ್ರದಾಯ ಅನುಸರಿಸಿ ಮದುವೆ ಮಾಡಿಕೊಂಡಿದ್ದಾರೆ.

ವಿವಿಧ ದೇಶಗಳನ್ನು ಸುತ್ತಿರುವ ನನಗೆ ಎಲ್ಲ ದೇಶಗಳ ಸಂಸ್ಕೃತಿಯ ಮೇಲೆ ಗೌರವವಿದೆ. ನನ್ನ ವಿದೇಶಿ ಗೆಳೆಯರ ಅನಿಸಿಕೆಯಂತೆ ನಾನಾ ದೇಶಗಳ ಸಂಪ್ರದಾಯಗಳನ್ನು ಅನುಸರಿಸಿ ಮದುವೆಯಾಗಲು ನಿರ್ಧರಿಸಿದೆ ಎನ್ನುತ್ತಾರೆ ವರ ಅಮರ್‌.

ಅದು ಸಾಲದೆಂಬಂತೆ, ಮದುವೆಯ ಕರೆಯೋಲೆಯನ್ನು 25 ವಿವಿಧ ಭಾಷೆಯಲ್ಲಿ ಮುದ್ರಿಸಿ, ಹಂಚಿದ್ದಾರೆ. ಈಜಿಪ್ಟಿಯನ್‌ನಿಂದ ಹಿಡಿದು ಇಂಡೋ- ಯುರೋಪಿಯನ್‌ ಶೈಲಿಯಲ್ಲಿ ಮದುವೆ ಕರೆಯೋಲೆ ವಿನ್ಯಾಸಗೊಳಿಸಿದ್ದಾರಂತೆ.

ಮಹಾರಾಷ್ಟ್ರದ ಸಂಪ್ರದಾಯದಲ್ಲಿ ಶುರುವಾದ ಮದುವೆ, ಮುಸ್ಲಿಂ ನಿಖಾ ಮಾದರಿಯಂತೆಯಲ್ಲಿ ಸಾಗಿ, ಇಬ್ಬರೂ ಕಬೂಲ್‌ ಹೈ ಕಬೂಲ್‌ ಹೈ ಎಂದು ಒಪ್ಪಿಗೆ ಇತ್ತರಂತೆ. ಇದೇ ರೀತಿ ಉಳಿದ ಸಂಪ್ರದಾಯಗಳು ಮುಂದುವರೆಯಿತಂತೆ.

ಒಟ್ಟಿನಲ್ಲಿ ನಮ್ಮ ಮದುವೆ ಒಂದು ವಿಶ್ವಮಟ್ಟದ ಸುದ್ದಿಯಾಗಬೇಕೆಂಬ ಅಮರ್‌ ಹಾಗೂ ಸಯಾಲಿ ದಂಪತಿಗಳ ಆಸೆ ಈಡೇರಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X