ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ವಿರುದ್ಧ ಕೇಸ್‌ ಹೂಡಲು ಲೋಕಾಯುಕ್ತ ರೆಡಿ

By Staff
|
Google Oneindia Kannada News

ಬೆಂಗಳೂರು : ಆಸ್ತಿ ವಿವರ ಸಲ್ಲಿಸದ 19 ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗಡೆ ಹೇಳಿದ್ದಾರೆ.

ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 2005-06ನೇ ಸಾಲಿನ ಆಸ್ತಿ ವಿವರ ಸಲ್ಲಿಸಲು ಶಾಸಕರಿಗೆ ಏಪ್ರಿಲ್‌ 28ರವರೆಗೆ ಗಡುವು ನೀಡಲಾಗಿತ್ತು. ಒಟ್ಟು 19 ಮಂದಿ ಶಾಸಕರು ವಿವರ ಸಲ್ಲಿಸಲು ವಿಫಲವಾಗಿದ್ದಾರೆ. ಇನ್ನುಮುಂದೆ ಅವರು ಭಾರತೀಯ ದಂಡ ಸಂಹಿತೆ-176ರ ಅನ್ವಯ ಕ್ರಮವನ್ನು ಎದುರಿಸಲಿದ್ದಾರೆ ಎಂದು ತಿಳಿಸಿದರು.

ಲೋಕಾಯುಕ್ತ ಕಾಯ್ದೆಯ 22ನೇ ಪರಿಚ್ಛೇದದ ಪ್ರಕಾರ, ಈ ಮೊದಲು ಶಾಸಕರು ಸಲ್ಲಿಸಿದ್ದ ಅಪೂರ್ಣ ವಿವರವನ್ನು ಸ್ವೀಕರಿಸಲಾಗದು ಎಂದು ಹೆಗಡೆ ಸ್ಪಷ್ಟಪಡಿಸಿದರು.

ಆಸ್ತಿ ವಿವರ ಸಲ್ಲಿಸದ 19 ಶಾಸಕರ ಪೈಕಿ, 18ಜನ ವಿಧಾನಸಭಾ ಸದಸ್ಯರು ಹಾಗೂ ಒಬ್ಬರು ವಿಧಾನಪರಿಷತ್‌ ಸದಸ್ಯರಿದ್ದಾರೆ. ಈ ಪಟ್ಟಿಯಲ್ಲಿರುವ ಬಹುತೇಕ ಶಾಸಕರು ಭಾರತೀಯ ಜನತಾ ಪಕ್ಷದವರೆಂಬುದು ಗಮನಾರ್ಹ.

ಆಸ್ತಿ ವಿವರ ನೀಡದ ಶಾಸಕರ ಪಟ್ಟಿ :

ಎ.ನಾರಾಯಣಸ್ವಾಮಿ-ಆನೇಕಲ್‌ ಶಾಸಕ
ಅಂಜನಮೂರ್ತಿ-ನೆಲಮಂಗಲ
ಅಪ್ಪಯ್ಯನಗೌಡ ಬಸನಗೌಡ ಪಾಟೀಲ್‌-ಸಂಕೇಶ್ವರ
ಎಚ್‌.ಸಿ.ಬಾಲಕೃಷ್ಣ-ಮಾಗಡಿ
ಜಿ.ಬಸವಣ್ಣೆಪ್ಪ-ಹೊಳೆಹೊನ್ನೂರು
ಚಂದ್ರಶೇಖರ್‌ ಪಾಟೀಲ್‌ ರೇವೂರ್‌-ಗುಲ್ಬರ್ಗಾ
ಚಿಕ್ಕನಗೌಡ ಸಿದ್ಧನಗೌಡ ಈಶ್ವರಗೌಡ-ಕಲಘಟಗಿ
ದೇಸಾಯಿ ಶಿವಪುತ್ರಪ್ಪ ಮಡಿವಾಳಪ್ಪ-ಹೂವಿನ ಹಿಪ್ಪರಗಿ
ದಿನೇಶ್‌ ಗುಂಡೂರಾವ್‌-ಗಾಂಧೀನಗರ
ಡಾ.ವೀರಬಸವಂತರೆಡ್ಡಿ ಮುದ್ನಾಳ್‌-ಯಾದಗಿರಿ
ಗುರುಪಾದಪ್ಪ ನಾಗಮಾರಪಳ್ಳಿ-ಔರಾದ್‌
ಎಚ್‌.ಬಿ.ರಾಮು-ಕೆರಗೋಡು
ಎಚ್‌.ಹಾಲಪ್ಪ-ಹೊಸನಗರ
ಜೆ.ಸುನೀತಾ ವೀರಪ್ಪಗೌಡ-ಬನ್ನೂರು
ಬಿ.ಸಿ.ಪಾಟೀಲ್‌-ಹಿರೇಕೆರೂರು
ಸಿ.ಟಿ.ರವಿ-ಚಿಕ್ಕಮಗಳೂರು
ಸರಿಕಾರ್‌ ಭೀಮಪ್ಪ ಚನ್ನಪ್ಪ-ರಾಯಬಾಗ್‌
ಎಂ.ಎಸ್‌.ಸೋಮಲಿಂಗಪ್ಪ-ಶಿರಗುಪ್ಪ
ಕೆ.ಸಿ.ಕೊಂಡಯ್ಯ-ವಿಧಾನಪರಿಷತ್‌ ಸದಸ್ಯ

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X