• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾ-ಆಸ್ಟ್ರೇಲಿಯಾ ಹಣಾಹಣಿ.. ವಿಜಯಮಾಲೆ ಯಾರ ಕೊರಳಿಗೆ?

By Staff
|

ವಿಶ್ವಕಪ್‌ ಅಂಗಳದಿಂದ ಟೀಮ್‌ ಇಂಡಿಯಾ ಮರಳಿದ ನಂತರವೇ, ಭಾರತದಲ್ಲಿ ಶೇ.80ರಷ್ಟು ವಿಶ್ವಕಪ್‌ ಜ್ವರದ ತಾಪ ಸರಕ್ಕನೇ ಇಳಿದುಹೋಯಿತು. ನಮ್ಮವರ ಹಣೆ ಬರಹವೇ ಇಷ್ಟು ಎಂದು ಹಿಡಿ ಶಾಪ ಹಾಕಿ, ಅಪ್ಪಟ ಕ್ರೀಡಾ ಮನೋಭಾವದಿಂದ, ವಿಶ್ವಕಪ್‌ ಫೈನಲ್‌ ಪಂದ್ಯ ಕಾಣಲು ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಇಂದು ಸಜ್ಜಾಗಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಬೆಟ್ಟಿಂಗ್‌ ಸಹಾ ನಡೆದಿದೆ. ಆಟಕ್ಕೂ ಮೊದಲು ಒಂದು ಚೂರು ಬಲಾಬಲ ನೋಡೋಣ ಬನ್ನಿ..

 • ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌
 • Australian captain Ricky and SriLanka captain Mahela with the World Cupಬಾರ್ಬಡಸ್‌ : 9ನೇ ವಿಶ್ವಕಪ್‌ ಮಹಾಸಮರ ಅಂತಿಮ ಹಂತವನ್ನು ತಲುಪಿದೆ. ಫೈನಲ್‌ ಪಂದ್ಯ ಶನಿವಾರ(ಏ. 28) ರಾತ್ರಿ 7ಗಂಟೆಗೆ(ಭಾರತೀಯ ಕಾಲಮಾನ) ಬಾರ್ಬಡಸ್‌ನ ಕಿಂಗ್‌ಸ್ಟನ್‌ ಓವಲ್‌ನಲ್ಲಿ ನಡೆಯಲಿದೆ.

  ಸತತವಾಗಿ ನಾಲ್ಕನೆ ಬಾರಿ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡ, ಮೇಲ್ನೋಟಕ್ಕೆ ಎರಡನೆ ಬಾರಿ ಫೈನಲ್‌ ಪ್ರವೇಶ ಪಡೆದಿರುವ ಶ್ರೀಲಂಕಾ ತಂಡಕ್ಕಿಂತ ಬಲಿಷ್ಠವಾಗಿದೆ. ಆದರೆ 1996ರ ವಿಶ್ವಕಪ್‌ನಲ್ಲಿ ಆಸೀಸ್‌ ಅನ್ನು ಮಣಿಸಿ ಜಯದ ಮಾಲೆ ಧರಿಸಿದ ಶ್ರೀಲಂಕಾ ಪಡೆ ಸುಲಭವಾಗಿ ಪಂದ್ಯ ಬಿಟ್ಟುಕೊಡುವುದಿಲ್ಲ ಎಂಬುದು ಆಸೀಸ್‌ ತಂಡಕ್ಕೆ ಮನವರಿಕೆಯಾಗಿದೆ. ಒಟ್ಟಿನಲ್ಲಿ ಪಂದ್ಯ ರೋಚಕವಾಗಿರುವ ಎಲ್ಲಾ ಸಾಧ್ಯತೆಗಳಿವೆ.

  ಮ್ಯಾಥ್ಯೂ ಹೇಡನ್‌, ರಿಕಿ ಪಾಂಟಿಂಗ್‌, ಮೈಕಲ್‌ ಕ್ಲಾರ್ಕ್‌ ಒಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಬ್ಯಾಟಿಂಗ್‌ನ ಬೆನ್ನೆಲುಬು ಮುರಿಯಲು, ಶ್ರೀಲಂಕಾದ ಬೌಲರ್‌ಗಳಾದ ಮುರಳಿ, ವಾಸ್‌, ಮಾಲಿಂಗಾ ಕಾದಿದ್ದಾರೆ. ಇತ್ತ ಶ್ರೀಲಂಕಾದ ಜಯಸೂರ್ಯ, ಸಂಗಕ್ಕಾರ, ತರಂಗಾ, ಜಯವರ್ಧನೆಗೆ ಜಯ ಸಿಗದಂತೆ ಮಾಡಲು ಆಸೀಸ್‌ನ ಮಾಗ್ರಾಥ್‌, ಟೈಟ್‌, ಬ್ರಾಡ್‌ ಹಾಗ್‌, ಬ್ರಾಕನ್‌ ಕಾದಿದ್ದಾರೆ.

  ಎರಡು ತಂಡದ ಕೋಚ್‌ ಜಾನ್‌ ಬುಕನನ್‌ ಹಾಗೂ ಟಾಮ್‌ ಮೂಡಿ ಪಂದ್ಯಕ್ಕೆ ತಮ್ಮ ತಂಡವನ್ನು ಸಜ್ಜುಗೊಳಿಸಿದ್ದಾರೆ.

  ಕೆಲವು ಅಂಕಿ-ಅಂಶ :

 • ವಿಶ್ವಕಪ್‌ ಹಣಾಹಣಿಯಲ್ಲಿ ಒಟ್ಟು ಆರು ಬಾರಿ ಎರಡು ತಂಡಗಳು ಸೆಣಸಿವೆ. ಅದರಲ್ಲಿ ಆಸ್ಟ್ರೇಲಿಯಾ 5 ಬಾರಿ ಹಾಗೂ ಶ್ರೀಲಂಕಾ 1 ಬಾರಿ ಜಯಗಳಿಸಿದೆ.
 • ಪಾಂಟಿಂಗ್‌ ನಾಯಕತ್ವದಲ್ಲಿ ಆಸೀಸ್‌ ತಂಡ ವಿಶ್ವಕಪ್‌ನಲ್ಲಿ ಸತತ 21 ಪಂದ್ಯಗಳಲ್ಲಿ ಜಯ ಸಾಧಿಸಿದೆ.
 • ಎರಡು ತಂಡಗಳು ಒಟ್ಟು 63 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಆಸ್ಟ್ರೇಲಿಯಾ 42 ಬಾರಿ ಹಾಗೂ ಶ್ರೀಲಂಕಾ 19 ಬಾರಿ ಜಯ ಸಾಧಿಸಿದೆ. 2 ಪಂದ್ಯದ ಫಲಿತಾಂಶ ಇಲ್ಲ.
 • ಈ ವಿಶ್ವಕಪ್‌ನಲ್ಲಿ ಅಸ್ಟ್ರೇಲಿಯಾಕ್ಕೆ ಸತತ 10 ಪಂದ್ಯಗಳಲ್ಲಿ ಜಯ. ಶ್ರೀಲಂಕಾಕ್ಕೆ 8 ರಲ್ಲಿ ಗೆಲುವು 2 ರಲ್ಲಿ ಸೋಲು.
 • ವಿಶ್ವಕಪ್‌ ಗೆಲ್ಲುವ ಚಾಂಪಿಯನ್ನರಿಗೆ 2.24 ಮಿಲಿಯನ್‌ ಡಾಲರ್‌ ಹಾಗೂ ರನ್ನರ್‌ ಅಪ್‌ ತಂಡಕ್ಕೆ 1 ದಶಲಕ್ಷ ಡಾಲರ್‌ ಲಭಿಸಲಿದೆ.
 • ಅಂತಿಮ ಹಣಾಹಣಿಗೆ ಸಜ್ಜಾಗಿರುವ ತಂಡ ಇಂತಿದೆ:

  ಆಸ್ಟ್ರೇಲಿಯಾ : ರಿಕಿ ಪಾಂಟಿಂಗ್‌(ನಾಯಕ), ಆಡಮ್‌ ಗಿಲ್‌ಕ್ರಿಸ್ಟ್‌(ವಿಕೆಟ್‌ ಕೀಪರ್‌), ಮ್ಯಾಥ್ಯೂ ಹೇಡನ್‌, ಮೈಕಲ್‌ ಕ್ಲಾರ್ಕ್‌, ಸೈಮಂಡ್ಸ್‌, ಮೈಕಲ್‌ ಹಸ್ಸಿ, ಶೇನ್‌ ವಾಟ್ಸನ್‌, ಬ್ರಾಡ್‌ ಹಾಗ್‌, ನಾಥನ್‌ ಬ್ರಾಕನ್‌, ಶಾನ್‌ ಟೈಟ್‌, ಗ್ಲೆನ್‌ ಮೆಗ್ರಾಥ್‌, ಸ್ಟುವರ್ಟ್‌ ಕ್ಲಾರ್ಕ್‌, ಬ್ರಾಡ್‌ ಹಡಿನ್‌, ಬ್ರಾಡ್‌ ಹಡ್ಜ್‌ ಹಾಗೂ ಮೈಕಲ್‌ ಜಾನ್ಸನ್‌ .

  ಕೋಚ್‌: ಜಾನ್‌ ಬುಕನನ್‌.

  ಶ್ರೀಲಂಕಾ : ಮಹೇಲಾ ಜಯವರ್ಧನೆ(ನಾಯಕ), ಕುಮಾರ ಸಂಗಕ್ಕಾರ(ವಿಕೆಟ್‌ ಕೀಪರ್‌), ಸನತ್‌ ಜಯಸೂರ್ಯ, ಉಪುಲ್‌ ತರಂಗ, ತಿಲಕರತ್ನೆ ದಿಲ್ಶನ್‌,ರಸೆಲ್‌ ಅರ್ನಾಲ್ಡ್‌, ಚಮರ ಸಿಲ್ವಾ, ಚಮಿಂಡಾ ವಾಸ್‌, ಲಸಿತ್‌ ಮಾಲಿಂಗ, ದಿಲ್ಹಾರಾ ಫರ್ನಾಂಡೋ, ಮುತ್ತಯ್ಯ ಮುರಳಿಧರನ್‌, ಫರ್ವೆಜ್‌ ಮಹರೂಫ್‌, ಮಲಿಂಗ ಬಂಡಾರ, ಮಾರ್ವನ್‌ ಅಟ್ಟಪಟ್ಟು ಮತ್ತು ನುವಾನ್‌ ಕುಲಶೇಖರ.

  ಕೋಚ್‌: ಟಾಮ್‌ ಮೂಡಿ.

  ಅಂಪೈರುಗಳು :

 • ಸ್ಟೀವ್‌ ಬಕ್ನರ್‌(ವೆಸ್ಟ್‌ ಇಂಡೀಸ್‌), ಅಲಿಂ ದಾರ್‌(ಪಾಕಿಸ್ತಾನ)
 • ಮೂರನೇ ಅಂಪೈರು : ರೂಡಿ ಕುರ್ಟ್ಜನ್‌.
 • ರಿಸರ್ವ್‌ ಅಂಪೈರ್‌ : ಬಿಲ್ಲಿ ಬೌಡನ್‌(ನ್ಯೂಜಿಲ್ಯಾಂಡ್‌)
 • ಪಂದ್ಯದ ರೆಫ್ರಿ: ಜೆಫ್‌ ಕ್ರೋವ್‌(ನ್ಯೂಜಿಲ್ಯಾಂಡ್‌)
 • ಕ್ರಿಕೆಟ್‌ ಪಂದ್ಯಾವಳಿಯ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more